BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಮುಖ ಮಾರ್ಗದಲ್ಲಿ 6 ಮೆಟ್ರೋ ಫೀಡರ್ ಬಸ್ ಸೇವೆ ಆರಂಭ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ಬಳಕೆದಾರರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಇವರಿಗೆ ಕೊನೆ ಮೈಲಿ ಸುಲಭ ಸಂಪರ್ಕ ಒದಗಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಹಕಾರದಲ್ಲಿ ಪ್ರಮುಖ ನಿಲ್ದಾಣಗಳಿಂದ 06 ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಆರಂಭಿಸಲಾಗಿದೆ.
ಸೋಮವಾರ ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಹಿತಿ ನೀಡಿದ್ದು, ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿರುವ ಈ ಮೆಟ್ರೋ ಫೀಡರ್ ಬಸ್‌ಗಳು ಮೊದಲ ಹಾಗೂ ಕೊನೆಯ ಮೈಲಿ ಸಂಪರ್ಕ ಮತ್ತಷ್ಟು ಬಲಪಡಿಸುತ್ತಿದೆ. ತಡೆರಹಿತ ಸಂಪರ್ಕ ಮತ್ತು ಪುಯಾಣಿಕರ ಸಂಚಾರವನ್ನು ಸುಲಭಗೊಳಿಸಲಿವೆ. ಮೆಟ್ರೋ ಇಳಿದ ತಕ್ಷಣ ಅಥವಾ ನೀವಿರುವ ಸ್ಥಳಗಳಿಗೆ ಮೆಟ್ರೋ ನಿಲ್ದಾಣಗಳಿಗೆ ಈ ಬಸ್‌ಗಳ ಮೂಲಕ ಬರಬಹುದಾಗಿದೆ.

ಎಲ್ಲಿಂದ ಮೆಟ್ರೋ ಫೀಡರ್ ಬಸ್ ಸೇವೆ?
ಬಿಎಂಟಿಸಿ ಈ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಗಳು 'ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ, ಕೆ.ಆರ್. ಪುರಂ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ'ಗಳು ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳು, ವಾಣಿಜ್ಯ ಕೇಂದ್ರಗಳು ಹಾಗೂ ಉದ್ಯೋಗ ಕೇಂದ್ರಗಳೊಂದಿಗೆ ನಿರಂತರವಾಗಿ ಸಂಪರ್ಕಿಸಲಿವೆ. ಅವುಗಳ ಮಾರ್ಗದ ವಿವರ ಹೀಗಿದೆ.
ಫೀಡರ್ ಬಸ್‌ಗಳ ಮಾರ್ಗ, ಸಮಯ
ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ - ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಮಾರ್ಗವಾಗಿ ಬಿಎಂಟಿಸ್ ಬಸ್ ಹೊರಡಲಿದೆ. ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ - ಎಲೆಕ್ಟ್ರಾನಿಕ್ ಸಿಟಿ - ಕೊನಪ್ಪನ ಅಗ್ರಹಾರ - ಹೊಸ ರಸ್ತೆ -ಹರಳೂರು - ಸರ್ಜಾಪುರ ರಸ್ತೆ ಜಂಕ್ಷನ್- ಕಾಡುಬೀಸನಹಳ್ಳಿ - ಮಾರತಹಳ್ಳಿ ಸೇತುವೆ ಜಂಕ್ಷನ್ -ದೊಡ್ಡನೆಕ್ಕುಂಡಿ ರೈಲ್ವೆ ಸೇತುವೆ - ಮಹದೇವಪುರ ಜಂಕ್ಷನ್ - ಕೆ.ಆರ್. ಪುರಂ ರೈಲ್ವೆ ನಿಲ್ದಾಣ -ಟಿನ್ ಫ್ಯಾಕ್ಟರಿ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ವರೆಗೆ ಸೇವೆ ನೀಡುತ್ತದೆ.
ಮೆಟ್ರೋ ಫೀಡರ್ ಬಸ್ ಸೇವೆ ಬೆಳಗ್ಗೆ 05.30 ಗಂಟೆಗೆ, 06 ಗಂಟೆ, 06:30, 07:00, 07:40, 08:20, 09:00, 10:20 ನಂತರ ಮಧ್ಯಾಹ್ನ 13:15 ಗಂಟೆ, 14:00, 14:40, 15:10, 15:50 ಸಂಜೆ 16:30 ಗಂಟೆ 17:10, 17:50, 18:30, 19:10 ರಾತ್ರಿ 19:50, 20:30 21:10ಗಂಟೆವರೆಗೆ ಬಸ್‌ಗಳ ಸಂಚಾರ ಸೇವೆ ಲಭ್ಯವಿರಲಿದೆ.
ಟಿನ್ ಫ್ಯಾಕ್ಟರಿಯಿಂದ (ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ) ಬಸ್ ಸಂಚಾರ, ಸಮಯ
ಬೆಳಗ್ಗೆ 05:30 ಗಂಟೆ, 06:00, 06:30, 07:00, 07:40, 08:20, 09:00, 09:40, 10:20, 11:00, 11:40ಕ್ಕೆ, ಮಧ್ಯಾಹ್ನ 12:10, 15:50, 16:30, 17:10, 17:50, 18:30, 19:10, ರಾತ್ರಿ 19:50, 20:30 8 21:10 ಗಂಟೆವರೆಗೆ ಬಸ್ ಸೇವೆ ಲಭ್ಯವಿರಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ-ಟಿನ್ ಫ್ಯಾಕ್ಟರಿ ವರೆಗೆ ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಮಾರ್ಗವಾಗಿದೆ. ಈ ಭಾಗದ ಅನೇಕ ಮೆಟ್ರೋ ಪ್ರಯಾಣಿಕರ ಪ್ರಯಾಣವನ್ನು ಈ ಬಿಎಂಟಿಸಿ ಬಸ್‌ಗಳು ಇನ್ನಷ್ಟು ಸುಲಭಗೊಳಿಸಲಿವೆ. ಸುರಕ್ಷಿತ ಹಾಗೂ ತಡೆರಹಿತ ಸಂಪರ್ಕದೊಂದಿಗೆ ಕೈಗೊಳ್ಳಲು ಈ ವಿಶೇಷ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.













Click it and Unblock the Notifications