Liquor: ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟ ಹೊಸ ನೀತಿ: ಕರ್ನಾಟಕದಲ್ಲಿ ಬಿಯರ್ ಮಾರಾಟದಿಂದ ಭಾರಿ ಆದಾಯ

Liquor: ಕಳೆದ ಮೂರು ವರ್ಷಗಳಿಂದಲೂ ಮದ್ಯ ಪ್ರಿಯರಿಗೆ ಶಾಕ್ ಕೊಡುತ್ತಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈಚೆಗೆ ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇದರಿಂದ ಮದ್ಯದಿಂದ ಬರುತ್ತಿದ್ದ ಆದಾಯವೂ ಸಹ ಹೆಚ್ಚಾಗಿದೆ. ಮುಖ್ಯವಾಗಿ ಬಿಯರ್ ಮಾರಾಟದಿಂದ ಭಾರೀ ಆದಾಯ ಬರುತ್ತಿದೆ. ಕರ್ನಾಟಕದಲ್ಲಿ ಬಿಯರ್ ಮಾರಾಟ ಹೊಸ ದಾಖಲೆ ನಿರ್ಮಿಸಿದ್ದು, 2026-27ರ ಮೊದಲ ತ್ರೈಮಾಸಿಕದಲ್ಲೇ ಸರ್ಕಾರದ ಅಬಕಾರಿ ಆದಾಯದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಶೇ.5ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ದರ ಪರಿಷ್ಕರಣೆಯ ಬಳಿಕ ಗ್ರಾಹಕರ ಖರೀದಿ ಪ್ರಮಾಣ ಹೆಚ್ಚಿದ್ದು, ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಆದಾಯ ಹರಿದು ಬಂದಿದೆ. ಮೊದಲ ಮೂರು ತಿಂಗಳಲ್ಲಿ ಬಿಯರ್ ಮಾರಾಟದಿಂದಲೇ ₹1,914.81 ಕೋಟಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹312.67 ಕೋಟಿ ಹೆಚ್ಚುವರಿ ಆದಾಯ ದಾಖಲಾಗಿದೆ ಎಂದು ಹೇಳಲಾಗಿದೆ.

ಇನ್ನು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು (Alcohol in Beverage - AIB) ಆಧರಿಸಿ ತೆರಿಗೆ ವಿಧಿಸುವ ನೂತನ ಪದ್ಧತಿಯನ್ನು ಜಾರಿಗೆ ತಂದಿತ್ತು. ಅಲ್ಲದೆ ಬೇಸಿಗೆಯ ಬಿಸಿಲು ಹೆಚ್ಚಾಗಿರುವುದು ಹಾಗೂ ಬಿಯರ್ ಬೆಲೆ ಇಳಿಕೆಯಾಗಿರುವುದು ಸಹ ಬಿಯರ್ ಮಾರಾಟ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

Liquor

Liquor: ಬಿಯರ್ ಮಾರಾಟ ಹೆಚ್ಚಳ

ಕರ್ನಾಟಕದಲ್ಲಿ ಮದ್ಯ ಮಾರಾಟದ ಬೆಲೆಯು ನಿರಂತರವಾಗಿ ಹೆಚ್ಚಳವಾಗಿದ್ದು, ಇದರಿಂದ ಮದ್ಯ ಮಾರಾಟದ ಮೇಲೆಯೂ ಪರಿಣಾಮ ಬೀರಿತ್ತು. ಮದ್ಯ ಮಾರಾಟವು ಕಡಿಮೆಯಾಗಿತ್ತು. ಇದರಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಸಹ ಕಡಿಮೆಯಾಗಿತ್ತು. ಮೊದಲ ತ್ರೈಮಾಸಿಕದಲ್ಲಿ ಮಾರಾಟ ಶೇ.19.5 ಹೆಚ್ಚಳ ಬಿಯರ್ ದರ ಇಳಿಕೆ ಬಳಿಕ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕರ್ನಾಟಕ ಸರ್ಕಾರವು ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ಮದ್ಯಕ್ಕೆ ದರ ನಿಗದಿ ಮಾಡಿದೆ. ಕರ್ನಾಟಕ ಸರ್ಕಾರದ ಹೊಸ ತೆರಿಗೆ ನೀತಿಯು ಅಬಕಾರಿ ಇಲಾಖೆಯ ಖಜಾನೆಗೆ ಭರ್ಜರಿ ಆದಾಯವನ್ನು ತಂದಿದೆ. ಕರ್ನಾಟಕದಲ್ಲಿ ಶೇ 5ಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆಯಲ್ಲಿ ಭಾರಿ ಕಡಿತವಾಗಿರುವ ಬೆನ್ನಲ್ಲೇ ಬಿಯರ್ ಸೇವನೆ ಪ್ರಮಾಣದಲ್ಲಿ ಭಾರೀ ಏರಿಕೆ ಆಗಿದೆ.

ಕರ್ನಾಟಕದಲ್ಲಿ ಮೇ.11 ರಿಂದ ಹೊಸ ದರ ನಿಗದಿ ನಿಯಮವು ಜಾರಿಗೆ ಬಂದಿದೆ. ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ. ಕರ್ನಾಟಕ ಸರ್ಕಾರಕ್ಕೆ 312 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಪ್ರಸಕ್ತ ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಬಂದಿದೆ. ಅದರಲ್ಲಿ ಮುಖ್ಯವಾಗಿ ಬಿಯರ್‌ನಿಂದಲೇ ಹೆಚ್ಚಾಗುತ್ತಿದೆ.

ಇನ್ನು ಹೊಸ ಅಬಕಾರಿ ನೀತಿಯಿಂದಾಗಿ ಪ್ರೀಮಿಯಂ ಬ್ರ್ಯಾಂಡ್‌ಗಳ (ಉದಾಹರಣೆಗೆ ಸ್ಕಾಚ್ ವಿಸ್ಕಿ) ಮತ್ತು ಲಘು ಬಿಯರ್‌ಗಳ ಬೆಲೆ ಶೇ. 20 ರಿಂದ 25 ರಷ್ಟು ಇಳಿಕೆಯಾಗಿದೆ. ಆದರೆ, ಕಡಿಮೆ ಬೆಲೆಯ ಸಾಮಾನ್ಯ ಮದ್ಯದ (IMFL) ಬೆಲೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ. ಮದ್ಯದ ದರ ನಿಗದಿಯ ಸ್ಲ್ಯಾಬ್‌ಗಳನ್ನು 16 ರಿಂದ 8ಕ್ಕೆ ಈಚೆಗೆ ಇಳಿಸಲಾಗಿತ್ತು. ಹೊಸ ನೀತಿ ಜಾರಿಯಾದ ಮೇಲೆ ಕರ್ನಾಟಕದ ಅಬಕಾರಿ ಆದಾಯದಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ (ಮೇ 11 ರಿಂದ ಜೂನ್ 11) ₹3,745 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+