Donald Trump: ಬಂಧನಕ್ಕೊಳಗಾದ ಬಳಿಕ ಟ್ವಿಟರ್‌ಗೆ ಮರಳಿದ ಡೊನಾಲ್ಡ್ ಟ್ರಂಪ್- ಪ್ರತಿಕ್ರಿಯಿಸಿದ ಎಲಾನ್ ಮಸ್ಕ್
ವಾಷಿಂಗ್ಟನ್, ಆಗಸ್ಟ್ 25: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರ್ಜಿಯಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ನಂತರ ಅವರನ್ನು ಬಂಧಿಸಲಾಗಿದೆ. ಅವರು ಜೈಲಿನಲ್ಲಿರುವ ಮಗ್ ಶಾಟ್ ಫೋಟೊವನ್ನು ಬಿಡುಗಡೆ ಮಾಡಲಾಗಿದೆ. ಇದೇ ಫೋಟೊವನ್ನು ಶೇರ್ ಮಾಡಿಕೊಳ್ಳುವ ಮೂಲಕ ಟ್ರಂಪ್ ಅವರು ಟ್ವಿಟರ್‌ಗೆ ವಾಪಾಸ್ಸಾಗಿದ್ದಾರೆ.
ಕಳೆದ ವರ್ಷ, ಟ್ರಂಪ್ ಅವರ ಟ್ವಿಟರ್ ಅಕೌಂಟ್ ಅನ್ನು ನಿಷೇಧಿಸಲಾಗಿತ್ತು. ಆ ನಂತರ ಟ್ವಿಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡಿದರು. ಟ್ವಿಟರ್‌ಗೆ X ಎಂದು ಮರುನಾಮಕರಣ ಮಾಡಿದರು. X ನಲ್ಲಿ ಟ್ರಂಪ್ ಅವರ ಖಾತೆಯನ್ನು ಮತ್ತೆ ಮರುಸ್ಥಾಪಿಸಲಾಯಿತು.

ಖಾತೆಯನ್ನು ಮರುಸ್ಥಾಪಿಸಿದ ಬಳಿಕ ಮೊದಲ ಬಾರಿಗೆ ಟ್ರಂಪ್ ಅವರು X ನಲ್ಲಿ ಆಕ್ಟೀವ್ ಆಗಿದ್ದಾರೆ. ಮತ್ತೆ ಟ್ವಿಟರ್‌ನಲ್ಲಿ ತಮ್ಮ ಫೋಟೊವನ್ನು ಫೋಸ್ಟ್ ಮಾಡಿದ್ದಾರೆ.
ಜಾರ್ಜಿಯಾ ಚುನಾವಣೆ ಬಳಿಕ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಟ್ರಂಪ್ ಬಂಧನಕ್ಕೊಳಗಾಗಿದ್ದಾರೆ. ನಂತರ ಫುಲ್ಟನ್ ಕೌಂಟಿ ಶೆರಿಫ್ ಕಚೇರಿಯಿಂದ ಬಿಡುಗಡೆಯಾದ ಮಗ್ ಶಾಟ್ ಅನ್ನು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಅವರು ತಮ್ಮ ಮಗ್ ಶಾಟ್ ಅನ್ನು ಪೋಸ್ಟ್ ಮಾಡುವುದರ ಜೊತೆಗೆ ಇದು ಯುಎಸ್ ಅಧ್ಯಕ್ಷರರೊಬ್ಬರ ಮೊದಲನೆ ಮಗ್‌ಶಾಟ್ ಫೋಟೊವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ತಮ್ಮ ಫಂಡ್‌ರೈಸಿಂಗ್ ವೆಬ್‌ಸೈಟ್ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ.
'ಇಂದು ಜಾರ್ಜಿಯಾದ ಫುಲ್ಟನ್ ಕೌಂಟಿಯ ಕುಖ್ಯಾತ ಜೈಲಿನಲ್ಲಿ ನನ್ನನ್ನು ಇರಿಸಲಾಗಿದೆ. ಯಾವುದೇ ಅಪರಾಧ ಮಾಡದಿದ್ದರೂ ನನ್ನನ್ನು ಬಂಧಿಸಲಾಗಿದೆ' ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಏನು ನಡೆಯುತ್ತಿದೆ ಎಂದು ಅಮೇರಿಕನ್ ಜನರಿಗೆ ತಿಳಿದಿದೆ. ನಡೆದಿರುವುದು ನ್ಯಾಯ ಮತ್ತು ಚುನಾವಣಾ ಪ್ರಕ್ರಿಯೆಯ ಅಪಹಾಸ್ಯ' ಎಂದು ಹೇಳಿದ್ದಾರೆ.
'ಅಮೆರಿಕವನ್ನು ನಾನು ಉಳಿಸಲು ಬಯಸುತ್ತೇನೆ. ನಾನು ಎಂದಿಗೂ ಶರಣಾಗುವುದಿಲ್ಲ' ಎಂಬ ಸಂದೇಶವನ್ನು ಟ್ರಂಪ್ ರವಾನಿಸಿದ್ದಾರೆ. ನಾನು 'ಸಿಂಹದ ಗುಹೆ'ಗೆ ಕಾಲಿಟ್ಟಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
https://t.co/MlIKklPSJT pic.twitter.com/Mcbf2xozsY
— Donald J. Trump (@realDonaldTrump) August 25, 2023
X ನಲ್ಲಿ ಟ್ರಂಪ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಉದ್ಯಮಿ ಎಲೋನ್ ಮಸ್ಕ್, 'ನೆಕ್ಸ್ಟ್ ಲೆವೆಲ್' ಎಂದು ಬರೆದಿದ್ದಾರೆ.
ಟ್ರಂಪ್ ಅವರನ್ನು ಗುರುವಾರ ಫುಲ್ಟನ್ ಕೌಂಟಿ ಜೈಲಿನಲ್ಲಿ ದಂಗೆ ಮತ್ತು ಪಿತೂರಿ ಆರೋಪದ ಮೇಲೆ ಔಪಚಾರಿಕವಾಗಿ ಬಂಧಿಸಲಾಗಿದೆ. $200,000 ಬಾಂಡ್ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಜಾರ್ಜಿಯಾದಲ್ಲಿ 2020 ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು 18 ಇತರ ಆರೋಪಿಗಳೊಂದಿಗೆ ಸಹಕರಿಸಿದ್ದಾರೆ ಎಂಬ ಆರೋಪ ಟ್ರಂಪ್ ವಿರುದ್ಧ ಕೇಳಿಬಂದಿದೆ.
ಫೋಟೋದಲ್ಲಿ ಕಾಣಿಸಿಕೊಂಡಿರುವ ಟ್ರಂಪ್ ಅವರು ನೀಲಿ ಸೂಟ್, ಬಿಳಿ ಶರ್ಟ್ ಮತ್ತು ಕೆಂಪು ಟೈ ಧರಿಸಿದ್ದಾರೆ. ಅವರು ಕ್ಯಾಮಾರಾವನ್ನು ಕೋಪದಿಂದಲೇ ಎದುರಿಸುತ್ತಿದ್ದಾರೆ. ಅವರು ತಲೆಯು ಸ್ವಲ್ಪಮಟ್ಟಿಗೆ ಕ್ಯಾಮೆರಾದ ಕಡೆಗೆ ವಾಲಿಕೊಂಡಿದೆ. ಜಿಲ್ಲಾಧಿಕಾರಿಗಳ ಲೋಗೋವನ್ನು ಅವರ ಬಲ ಭುಜದ ಮೇಲೆ ಹಾಕಲಾಗಿದೆ.
ಗುರುವಾರ ಫುಲ್ಟನ್ ಕೌಂಟಿ ಜೈಲಿನ ಹೊರಗೆ, ಕೆಲವು ಟ್ರಂಪ್ ಬೆಂಬಲಿಗರು ಮಗ್ ಶಾಟ್ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. 'ಮಗ್ ಶಾಟ್ ಅಗತ್ಯವಿಲ್ಲ. ಟ್ರಂಪ್ ಅವರನ್ನು ನೋಯಿಸಲು ಇದೆಲ್ಲವನ್ನು ಮಾಡಲಾಗುತ್ತದೆ' ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಜೈಲು ಅಧಿಕಾರಿಗಳು ಮಗ್ ಶಾಟ್ ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಾವು ಅವರ ಮಗ್‌ಶಾಟ್ ಅನ್ನು ಟಿ-ಶರ್ಟ್ ಮೇಲೆ ಹಾಕಿಕೊಳ್ಳಲು ಬಯಸುತ್ತೇವೆ. ಇದು ಪ್ರಪಂಚದಾದ್ಯಂತ ಹೋಗುತ್ತದೆ. ಇದು ಮೋನಾಲಿಸಾಗಿಂತ ಹೆಚ್ಚು ಜನಪ್ರಿಯ ಚಿತ್ರವಾಗಲಿದೆ' ಎಂದು ಮಾಜಿ ರಿಪಬ್ಲಿಕನ್ ಕಾಂಗ್ರೆಸ್ ಅಭ್ಯರ್ಥಿ ಲಾರಾ ಲೂಮರ್ ಹೇಳಿದ್ದಾರೆ.












Click it and Unblock the Notifications