Get Updates
Get notified of breaking news, exclusive insights, and must-see stories!

Lok Sabha election 2024: ಟಿಡಿಪಿ ಅಭ್ಯರ್ಥಿ 5,785 ಕೋಟಿ ಒಡೆಯ

ದೇಶದಲ್ಲಿ ಲೋಕಸಭಾ ಚುನಾವಣೆಯ ಬಿಸಿ ಏರುತ್ತಲೆ ಇದೆ. ಈಗಾಗಲೇ ಮೊದಲ ಹಂತದ ಚುನಾವಣೆಗಳು ನಡೆದಿದ್ದು, ಎರಡನೇ ಹಂತದ ಚುನಾವಣೆಗೆ ಭರದ ಸಿದ್ಧತೆಗಳು ನಡೆದಿವೆ. ಇದೇ ವೇಳೆ ಅಭ್ಯರ್ಥಿಗಳ ಆಸ್ತಿ ವಿವರಗಳು ಭಾರೀ ಚರ್ಚೆ ಮಾಡುತ್ತಿವೆ. ಟಿಡಿಪಿ ಅಭ್ಯರ್ಥಿಯ ಘೋಷಣೆ ಮಾಡಿರುವ ಆಸ್ತಿ ವಿವರ ಎಲ್ಲರ ಚಿತ್ತ ಕದ್ದಿದೆ.

ಆಂಧ್ರಪ್ರದೇಶದಲ್ಲಿ ಮೇ 13 ರಂದು ನಾಲ್ಕನೇ ಹಂತದಲ್ಲಿ ವಿಧಾನಸಭೆ ಹಾಗೂ ಲೋಕಸಭೆಯ 25 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿದೆ. ಇದೇ ವೇಳೆ ಗುಂಟೂರಿನ ಟಿಡಿಪಿ ಅಭ್ಯರ್ಥಿ ಪೆಮ್ಮಸಾಮಿ ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ್ದಾರೆ.

Chandrababu Naidu Party Candidate Reveals Assets Valued at 5 785 Crore Ahead of 2024 Lok Sabha Polls

ಪೆಮ್ಮಸಾಮಿ ಚಂದ್ರಶೇಖರ್ ಯಾರು?

ಟಿಡಿಪಿ ಅಭ್ಯರ್ಥಿ ಪೆಮ್ಮಸಾಮಿ ಚಂದ್ರಶೇಖರ್ ಘೋಷಿಸಿಕೊಂಡಿರುವ ಆಸ್ತಿ ಸದ್ಯ ಭಾರಿ ಸದ್ದು ಮಾಡುತ್ತಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರು ಇದುವರೆಗೆ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಹಿರಿಮೆಗೆ ಪಾತ್ರರಾಗುತ್ತಿದ್ದಾರೆ. ಇವರ ಆಸ್ತಿ 5,785 ಕೋಟಿ ರೂ. ಆಗಿದೆ ಎಂದು ಘೋಷಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಪೆಮ್ಮಸಾಮಿ ಚಂದ್ರಶೇಖರ್ ಆನಿವಾಸಿ ಭಾರತೀಯ. ಮೂಲತಃ ಗುಂಟೂರು ಜಿಲ್ಲೆಯ ಬುರ್ರಿಪೋಲಂನ ನಿವಾಸಿ. ಇಲ್ಲಿಂದ ಅವರ ತಂದೆ ನರಸರಾವ್ ಪೇಟೆಗೆ ತೆರಳಿ ಅಲ್ಲಿ ಹೋಟೆಲ್ ನಡೆಸುತ್ತಿದ್ದರು. ಚಂದ್ರಶೇಖರ್ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಇದಾದ ನಂತರ ಸ್ನಾತಕೋತ್ತರ ವ್ಯಾಸಂಗ ಮಾಡಲು ಅಮೆರಿಕಕ್ಕೆ ತೆರಳಿದ್ದರು.

48 ವರ್ಷದ ಪೆಮ್ಮಸಾನಿ ಚಂದ್ರ ಶೇಖರ್ ವೃತ್ತಿಯಲ್ಲಿ ವೈದ್ಯ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿಯಿಂದ ಗುಂಟೂರಿನಿಂದ ಎನ್‌ಆರ್‌ಐ ವೈದ್ಯ ಕಮ್ ರಾಜಕಾರಣಿ ಪೆಮ್ಮಸಾನಿ ಚಂದ್ರ ಶೇಖರ್ ಅವರನ್ನು ಕಣಕ್ಕಿಳಿಸಿದೆ.

Chandrababu Naidu Party Candidate Reveals Assets Valued at 5 785 Crore Ahead of 2024 Lok Sabha Polls

ಆಗ ಮಿಸ್‌ ಆಗಿದ್ದ ಟಿಕೆಟ್‌

ಮಾಹಿತಿ ಪ್ರಕಾರ ಡಾ. ಚಂದ್ರಶೇಖರ್ 2014 ರಿಂದ ಗುಂಟೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಗುಂಟೂರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಗಲ್ಲಾ ಜಯದೇವ್ ರಾಜಕೀಯ ತೊರೆದ ನಂತರ, ಟಿಡಿಪಿ ಅವರನ್ನು ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ.

ಅಮೆರಿಕದಲ್ಲಿ ಹೆಚ್ಚಿನ ಆಸ್ತಿ

ಡಾ.ಚಂದ್ರಶೇಖರ್ ಅವರ ಹೆಚ್ಚಿನ ಆಸ್ತಿ ಅಮೆರಿಕದಲ್ಲಿದೆ. 2022-23 ಕ್ಕೆ ಭಾರತದಲ್ಲಿ ಅವರ ಆದಾಯ 3.68 ಲಕ್ಷ ರೂ.ಗಳಾಗಿದ್ದು, ಅದೇ ಅವಧಿಯಲ್ಲಿ ಅವರು ತಮ್ಮ ಪತ್ನಿಯೊಂದಿಗೆ ಜಂಟಿಯಾಗಿ 605.5 ಕೋಟಿ ರೂ. ಹಣವನ್ನು ಗಳಿಸಿದ್ದಾರೆ. ಅವರು ಅಮೆರಿಕದಲ್ಲಿ 2020 ಮತ್ತು 2021 ರಲ್ಲಿ 594 ಕೋಟಿ ಮತ್ತು 643 ಕೋಟಿ ರೂಪಾಯಿಗಳ ಆದಾಯವನ್ನು ಬಹಿರಂಗಪಡಿಸಿದ್ದರು. ಚಂದ್ರಶೇಖರ್ ಮತ್ತು ಅವರ ಪತ್ನಿ ಕಂಪನಿಯಲ್ಲಿ 50 ಪ್ರತಿಶತ ಷೇರುದಾರರಾಗಿದ್ದಾರೆ. ಇಬ್ಬರೂ US ಬ್ಯಾಂಕ್‌ನಿಂದ 1,038 ಕೋಟಿ ರೂಪಾಯಿಗಳನ್ನು ಸಾಲವಾಗಿ ತೆಗೆದುಕೊಂಡಿದ್ದಾರೆ.

ಆಂಧ್ರಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ

ಆಂಧ್ರಪ್ರದೇಶದಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆದರೆ ವೈಎಸ್ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಚುನಾವಣೆಗೂ ಮುನ್ನ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು, ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪಕ್ಷ ಜನ್ ಕಲ್ಯಾಣ್ ಪಾರ್ಟಿ ಕೂಡ ಚುನಾವಣೆಯ ಕಣದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+