ಹವಾಮಾನ ವೈಪರೀತ್ಯಕ್ಕೆ ಪುರುಷರೇ ಸಂಪೂರ್ಣ ಜವಾಬ್ದಾರರು: ನಟಿ ದಿಯಾ ಮಿರ್ಜಾ ಹೇಳಿಕೆಗೆ ರೊಚ್ಚಿಗೆದ್ದ ಗಂಡಸರು

ಬಾಲಿವುಡ್ ನಟಿ ಹಾಗೂ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ರಾಷ್ಟ್ರೀಯ ಸದ್ಭಾವನಾ ರಾಯಭಾರಿಯೂ ಆಗಿರುವ ದಿಯಾ ಮಿರ್ಜಾ (Dia Mirza) ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪಾಡ್‌ಕಾಸ್ಟ್‌ ವೇಳೆ "ಹವಾಮಾನ ವೈಪರೀತ್ಯಕ್ಕೆ ಪುರುಷರೇ ಸಂಪೂರ್ಣ ಜವಾಬ್ದಾರರು" ಎಂದು ದಿಯಾ ಮಿರ್ಜಾ ಹೇಳಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ಟೀಕೆಗೆ ಒಳಗಾಗಿದೆ. ಈ ಬಗ್ಗೆ ಮನೀಶ್ ಶುಕ್ಲಾ ಎಂಬುವವರು ತಮ್ಮ ಲಿಂಕ್ಡ್‌ಇನ್ (LinkedIn) ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ವಿಡಂಬನೆ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಫೇಕ್ ನ್ಯೂಸ್' ಅಂದುಕೊಂಡಿದ್ದ ಪೋಸ್ಟರ್ ನಿಜವಾಯಿತು

ಆರಂಭದಲ್ಲಿ ದಿಯಾ ಮಿರ್ಜಾ ಅವರ ಹೆಸರಿನಲ್ಲಿದ್ದ ಈ ಹೇಳಿಕೆಯನ್ನು ನೋಡಿ ಇದು ಇತ್ತೀಚಿನ ದಿನಗಳಲ್ಲಿ ಹರಿದಾಡುವ ಯಾವುದೋ ನಕಲಿ ಪೋಸ್ಟರ್ ಇರಬಹುದು ಎಂದು ಭಾವಿಸಿದ್ದರು. ಈ ಹಿಂದೆ ಕಂಗನಾ ರಣಾವತ್ ಅವರ ಹೆಸರಿನಲ್ಲಿ ಹರಡಿದ್ದ ನಕಲಿ ಹೇಳಿಕೆಯಂತೆ ಇದೂ ಇರಬಹುದು ಎಂದು ಯೋಚಿಸಿ, ನಂತರ ಅವರು ಗೂಗಲ್‌ನಲ್ಲಿ ಹುಡುಕಾಡಿದಾಗ ದಿಯಾ ಮಿರ್ಜಾ ಅವರು ನಿಜವಾಗಿಯೂ ಈ ಹೇಳಿಕೆ ನೀಡಿರುವುದು ಸಾಬೀತಾಗಿದೆ. 'ಆಲ್ ಅಬೌಟ್ ಹರ್' (All About Her) ಎಂಬ ಪಾಡ್‌ಕಾಸ್ಟ್‌ನಲ್ಲಿ ದಿಯಾ ಮಿರ್ಜಾ ಈ ವಿಚಾರವನ್ನು ಮಾತನಾಡಿದ್ದಾರೆ ಎಂದು ಮನೀಶ್ ಬರೆದಿದ್ದಾರೆ.

Dia Mirza

ದಿಯಾ ಮಿರ್ಜಾ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದೇನು?

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ದಿಯಾ ಮಿರ್ಜಾ, "ಯಾವುದೇ ಬಿಕ್ಕಟ್ಟು ಅಥವಾ ವಿಪತ್ತು ಎದುರಾದರೂ, ಅದಕ್ಕೆ ಕನಿಷ್ಠ ಜವಾಬ್ದಾರರಾಗಿರುವವರೇ ಅತಿ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಯುದ್ಧವಿರಲಿ ಅಥವಾ ನೈಸರ್ಗಿಕ ವಿಕೋಪವಿರಲಿ, ಅದರಿಂದ ಮಹಿಳೆಯರು ಮತ್ತು ಮಕ್ಕಳೇ ಅತಿ ಹೆಚ್ಚು ಮತ್ತು ಆಳವಾದ ನೋವನ್ನು ಅನುಭವಿಸುತ್ತಾರೆ" ಎಂದು ಹೇಳುತ್ತಾ, ಮುಂದುವರಿದು "ಹವಾಮಾನ ವೈಪರೀತ್ಯಕ್ಕೆ ಪುರುಷರೇ ಸಂಪೂರ್ಣ ಹೊಣೆ" ಎಂದಿದ್ದರು.

ದಿಯಾ ಮಿರ್ಜಾ ಅವರ ಈ ಹೇಳಿಕೆಯನ್ನು ಪೋಸ್ಟ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಉದಾರವಾದಿ, ಪರಿಸರವಾದಿ ಮತ್ತು ಸ್ತ್ರೀವಾದಿ (Feminist) ಆಗಿರುವ ದಿಯಾ ಮಿರ್ಜಾ ಅವರು ಸುಸಜ್ಜಿತ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಇಂತಹ ಜ್ಞಾನೋದಯದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕುಟುಕಿದ್ದಾರೆ. "ಇಲ್ಲಿಯವರೆಗೆ ಹವಾಮಾನ ವೈಪರೀತ್ಯಕ್ಕೆ ಮಾಲಿನ್ಯ, ಪೆಟ್ರೋಲಿಯಂ ಇಂಧನಗಳ ಬಳಕೆ ಮತ್ತು ಕೈಗಾರಿಕೀಕರಣವೇ ಕಾರಣ ಎಂದು ನಾವು ನಂಬಿದ್ದೆವು. ಆದರೆ ಇಂದೇ ನಮಗೆ ಅಸಲಿ ಜ್ಞಾನೋದಯವಾಗಿದ್ದು, ಹವಾಮಾನ ಬದಲಾವಣೆಯ ಮೂಲ ಕಾರಣ 'ಪಿತೃಪ್ರಧಾನ ವ್ಯವಸ್ಥೆ' ಹಾಗೂ ಇಡೀ ಪುರುಷ ಜನಸಂಖ್ಯೆ ಎಂದು ತಿಳಿದುಬಂದಿದೆ" ಎಂದು ವ್ಯಂಗ್ಯವಾಡಿದ್ದಾರೆ.

ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?
ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?

ಸೆಲೆಬ್ರಿಟಿಗಳ ಲೈಫ್‌ಸ್ಟೈಲ್ ಬಗ್ಗೆ ಪ್ರಶ್ನೆ

ಶ್ರೀಮಂತ ಸೆಲೆಬ್ರಿಟಿಗಳು ಐಷಾರಾಮಿ ಎಸ್‌ಯುವಿ (SUV) ಕಾರುಗಳಲ್ಲಿ ಓಡಾಡಲಿ, ಪ್ರೈವೇಟ್ ಜೆಟ್‌ಗಳಲ್ಲಿ ಹಾರಾಡಲಿ, ದಿನವಿಡೀ ಎಸಿಗಳಲ್ಲೇ ಕಳೆಯುತ್ತಾ ಮಾಲಿನ್ಯಕ್ಕೆ ಕಾರಣರಾಗಲಿ, ಅಂತಿಮವಾಗಿ ತಪ್ಪು ಮಾತ್ರ ಪುರುಷರದ್ದೇ ಆಗಿರುತ್ತದೆ ಎಂದು ಪೋಸ್ಟ್‌ನಲ್ಲಿ ತಿರುಗೇಟು ನೀಡಿದ್ದಾರೆ. ಇಂತಹ ವಿಲಕ್ಷಣ ಮತ್ತು ತರ್ಕವಿಲ್ಲದ ಹೇಳಿಕೆಗಳು ಎಲ್ಲಿಂದ ಬರುತ್ತವೆ? ಇವೆಲ್ಲವೂ ಕೇವಲ ಅಗ್ಗದ ಪ್ರಚಾರಕ್ಕಾಗಿ ಮಾಡುವಂತಹ ಗಿಮಿಕ್‌ಗಳೇ ಎಂದು ಪೋಸ್ಟ್‌ನ ಕೊನೆಯಲ್ಲಿ ಪ್ರಶ್ನಿಸಲಾಗಿದ್ದು, ಸೆಲೆಬ್ರಿಟಿಗಳ ಇಂತಹ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಆಕೆ ಅತ್ಯಂತ ಸಾಧಾರಣ ನಟಿ

ದಿಯಾ ಮಿರ್ಜಾ ಅವರ ಸಿನಿ ಪಯಣ ಹಾಗೂ ಇತ್ತೀಚಿನ ನಡೆಗಳನ್ನು ವಿಶ್ಲೇಷಿಸಿರುವ ಬಳಕೆದಾರರೊಬ್ಬರು, "ಅವರಿಗೆ ನಟನೆಯ ವಿಷಯದಲ್ಲಿ ಎಂದಿಗೂ ಒಳ್ಳೆಯ ವಿಮರ್ಶೆಗಳು ಸಿಗಲಿಲ್ಲ. ನೋಟದಲ್ಲೂ ಅವರು ಅತ್ಯಂತ ಸಾಧಾರಣ ನಟಿ. ಹೀಗಿರುವಾಗ, ಚಿತ್ರರಂಗದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಜನರ ಗಮನ ಸೆಳೆಯಲು ಹಠಾತ್ ಆಗಿ ಇಂತಹ ಮೂರ್ಖತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದಿದ್ದಾರೆ.

"ಬಹುಶಃ ಮಳೆಗಾಲದ ಬಗ್ಗೆ ಮಾತನಾಡುತ್ತಿರಬೇಕು"

ದಿಯಾ ಮಿರ್ಜಾ ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಕೆಲವರು, "ಹವಾಮಾನ ಬದಲಾವಣೆ ಎಂದರೆ ಏನು ಎಂಬುದರ ಕನಿಷ್ಠ ಜ್ಞಾನವೂ ಅವರಿಗಿದ್ದಂತಿಲ್ಲ. ಅವರು ಹವಾಮಾನ ವೈಪರೀತ್ಯದ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ಕೇವಲ ಮಳೆಗಾಲ, ಚಳಿಗಾಲದಂತಹ ಋತುಮಾನಗಳ ಬಗ್ಗೆ ಮಾತನಾಡುತ್ತಿದ್ದಾರೋ ಅವರೇ ಸ್ಪಷ್ಟಪಡಿಸಬೇಕು. ಇಂತಹ ಬೇಜವಾಬ್ದಾರಿ ಸೆಲೆಬ್ರಿಟಿಗಳನ್ನು ಪರಿಸರ ರಾಯಭಾರಿಗಳನ್ನಾಗಿ ಮಾಡಿ ಪ್ರೋತ್ಸಾಹಿಸುವುದು ನಮ್ಮದೇ ರಿಸ್ಕ್" ಎಂದು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+