BBK 13: ಈ ಸಲ ಬಿಗ್‌ಬಾಸ್‌ನಲ್ಲಿ ವಿದೇಶಿ ಸ್ಪರ್ಧಿಗಳೂ ಇರ್ತಾರಾ, ತುಕಾಲಿ ಸಂತೋಷ್ ಹೇಳಿದ್ದೇನು?
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ತನ್ನ 13ನೇ ಸೀಸನ್‌ನೊಂದಿಗೆ ಮರಳಿ ಬರಲು ಸಜ್ಜಾಗುತ್ತಿದೆ. ಕಾರ್ಯಕ್ರಮದ ಆರಂಭಕ್ಕೆ ದಿನಗಣನೆ ಶುರುವಾಗಿರುವಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವೀಕ್ಷಕರಲ್ಲಿ ಇದರ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಹಾಸ್ಯ ಕಲಾವಿದ ತುಕಾಲಿ ಸಂತೋಷ್ (ಸಂತು) ಅವರು ಮುಂಬರುವ ಸೀಸನ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಶೋ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಸ ಸೀಸನ್ ಆರಂಭವಾಗಲು ಇನ್ನು ಸುಮಾರು ಎರಡು ತಿಂಗಳು ಬಾಕಿ ಇದ್ದರೂ, ಈಗಿನಿಂದಲೇ ವೀಕ್ಷಕರಲ್ಲಿ ಕುತೂಹಲ ಶುರುವಾಗಿದೆ. ಇದೇ ಮಾತನ್ನು ಸಂತು ಕೂಡ ಹೇಳಿದ್ದಾರೆ. ಅಲ್ಲದೆ, ಸಾರ್ವಜನಿಕರಿಗಾಗಿ ಆಡಿಷನ್ ವಿಡಿಯೋ ಕಳುಹಿಸುವ ಪ್ರಕ್ರಿಯೆ ಆರಂಭವಾಗಿರುವುದರಿಂದ ಜನರಲ್ಲಿ ಶೋ ಬಗ್ಗೆ ಹೆಚ್ಚು ಆಸಕ್ತಿಯೂ ಮೂಡಿದೆ.

ಟಿಆರ್‌ಪಿ ದಾಖಲೆ ಮುರಿಯುವ ಭರವಸೆ
ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್ ದಾಖಲೆಯ 18 ಟಿಆರ್‌ಪಿ (TRP) ರೇಟಿಂಗ್ ಪಡೆದುಕೊಂಡು ಮುನ್ನುಗ್ಗಿತ್ತು. ಆದರೆ ಈ ಬಾರಿ ಆ ದಾಖಲೆಯೂ ಧೂಳೀಪಟವಾಗುವ ಸಾಧ್ಯತೆ ಇದೆ. ಈ ಸೀಸನ್‌ನ ಕ್ರೇಜ್ ನೋಡಿದ್ರೆ ಅದು ಇನ್ನೂ ಹೆಚ್ಚಾಗಬಹುದು ಎಂದು ತುಕಾಲಿ ಸಂತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆ ಮಟ್ಟಿಗೆ ಬಿಗ್ ಬಾಸ್ ಕ್ರೇಜ್ ಜನರ ಮನಸ್ಸಿನಲ್ಲಿ ಮನೆಮಾಡಿದೆ.
ವಿದೇಶಿ ಸ್ಪರ್ಧಿಗಳ ಎಂಟ್ರಿ?
ಈ ಬಾರಿಯ ಸೀಸನ್ 13 ವಿಭಿನ್ನವಾಗಿ ಮೂಡಿಬರಲಿದ್ದು, ಈ ಆವೃತ್ತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಆಯೋಜಕರು ಸಜ್ಜಾಗಿದೆ. ಈ ನಿಟ್ಟಿನಲ್ಲಿ, ಕಾರ್ಯಕ್ರಮಕ್ಕೆ ಹೊಸ ಕಳೆ ತರಲು ವಿದೇಶದಿಂದಲೂ ಸ್ಪರ್ಧಿಗಳು ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಮಹತ್ವದ ಸುಳಿವನ್ನು ಸಂತು ನೀಡಿದ್ದಾರೆ. ದೇಶದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಹಿಂದಿ ಬಿಗ್ ಬಾಸ್ ಅನ್ನೇ ನಮ್ಮ ಕನ್ನಡದ ಬಿಗ್ ಬಾಸ್ ಈಗಾಗಲೇ ಮೀರಿಸಿದೆ. ಮೇಕಿಂಗ್, ಕಂಟೆಂಟ್ ಮತ್ತು ಜನರ ಕ್ರೇಜ್ ವಿಷಯದಲ್ಲಿ ಕನ್ನಡ ಆವೃತ್ತಿಯೇ ಅತ್ಯುತ್ತಮವಾಗಿ ಮೂಡಿಬರುತ್ತಿದೆ ಎಂದು ಸಂತೋಷ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ದೇಶದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವುದು ಸಲ್ಮಾನ್ ಖಾನ್ ನಿರೂಪಣೆಯ ಹಿಂದಿ ಬಿಗ್ ಬಾಸ್. ಆದರೆ ವಿಭಿನ್ನ ಕಂಟೆಂಟ್, ಕಠಿಣ ಟಾಸ್ಕ್‌ಗಳು ಮತ್ತು ವೀಕ್ಷಕರ ಕ್ರೇಜ್ ವಿಷಯದಲ್ಲಿ ನಮ್ಮ ಕನ್ನಡದ ಬಿಗ್ ಬಾಸ್ ಈಗಾಗಲೇ ಹಿಂದಿ ಆವೃತ್ತಿಯನ್ನೇ ಮೀರಿಸಿದೆ ಎಂದು ಸಂತೋಷ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಅದ್ಭುತ ನಿರೂಪಣೆ ಮತ್ತು ಕನ್ನಡಿಗರು ಶೋಗೆ ನೀಡುವ ಬೆಂಬಲವೇ ಇದಕ್ಕೆ ಕಾರಣ ಎಂದು ಅವರು ಶ್ಲಾಘಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 13 ಕೇವಲ ಸಾಧಾರಣ ಮನರಂಜನೆಯಷ್ಟೇ ಅಲ್ಲದೆ, ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲು ಸಿದ್ಧವಾಗುತ್ತಿದೆ ಎಂದು ಈ ಮಾಜಿ ಸ್ಪರ್ಧಿ ಸುಳಿವು ನೀಡಿದ್ದಾರೆ.













Click it and Unblock the Notifications