ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್‌ ಸೂಚನೆ

ಶಿವಮೊಗ್ಗ, ಏಪ್ರಿಲ್ 23: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಸುಗಮ ಮತ್ತು ಶಾಂತಿಯುತ ಮತದಾನ ನಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಚುನಾವಣಾಧಿಕಾರಿಗಳು ಕೈಗೊಳ್ಳಬೇಕೆಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾದ ಪೂನಂ ಅವರು ತಿಳಿಸಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏ.22 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಮತಕ್ಷೇತ್ರಗಳ ಎಆರ್‍ಓ ಮತ್ತು ಇತರೆ ಚುನಾವಣಾ ನಿಯೋಜಿತ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಲಾತ್ತು.

Election Commission Team Instructs Officials For Peaceful Polling In Shivamogga

ಈ ಸಭೆಯಲ್ಲಿ ಮಾತನಾಡಿದ ಪೂನಂ ಅವರು, ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 111-ಶಿವಮೊಗ್ಗ ಗ್ರಾಮಾಂತರ, 112-ಭದ್ರಾವತಿ, 113-ಶಿವಮೊಗ್ಗ, 114-ತೀರ್ಥಹಳ್ಳಿ, 115-ಶಿಕಾರಿಪುರ, 116ಸೊರಬ, 117-ಸಾಗರ ಮತ್ತು 118 ಬೈಂದೂರು ಮತಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿ, ತಂಡಗಳ ನೋಡಲ್ ಅಧಿಕಾರಿಗಳಿಂದ ಅವರ ಕಾರ್ಯಕ್ಷೇತ್ರದ ಕುರಿತು ಸಭೆಯಲ್ಲಿ ಮಾಹಿತಿ ಪಡೆದುಕೊಂಡರು

ಹಾಗೂ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ಇತರೆ ತಂಡಗಳ ನೋಡಲ್ ಅಧಿಕಾರಿಗಳು ಸುಗಮವಾಗಿ ಮತದಾನ ಆಗುವ ನಿಟ್ಟಿನಲ್ಲಿ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.

ಪ್ರತಿ ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಮತಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಮತ ಕ್ಷೇತ್ರಗಳ ಸೂಕ್ಷ್ಮತೆಯನ್ನು ಅರಿತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿ ಎಚ್ಚರಿಕೆಯಿಂದ ಪರಿಶೀಲನೆ/ತಪಾಸಣೆ ಕೈಗೊಳ್ಳಬೇಕು.

ಪ್ರತಿ ಮನೆ ಮನೆಗಳಿಗೆ ತೆರಳಿ ಮತದಾರರ ಮಾಹಿತಿ ಸ್ಲಿಪ್‍ಗಳನ್ನು ವಿತರಿಸಬೇಕು. ವಿಶೇಷವಾಗಿ ದೂರದ ಹಳ್ಳಿ/ಪ್ರದೇಶಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡಬೇಕು. ಮತದಾರರ ಮಾಹಿತಿ ಸ್ಲಿಪ್ ವಿತರಣೆ ವೇಳೆ ಮತದಾರರ ಬೂತ್ ಮತ್ತು ಇತರೆ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದರು.

ಮತದಾನಕ್ಕೆ ಸಂಬಂಧಿಸಿದಂತೆ ಇವಿಎಂ, ಅಣಕು ಮತದಾನ, ಇವಿಎಂ ಡಾಟಾ, ಬ್ಯಾಟರಿ, ಯೂಸರ್ ಬಟನ್ ಬಳಕೆ ಸೇರಿದಂತೆ ಎಲ್ಲ ಮಾಹಿತಿ ಎಸ್‍ಓಪಿ ಯಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಎಸ್‍ಓಪಿ ಯನ್ನು ಸಮರ್ಪಕವಾಗಿ ಓದಿಕೊಳ್ಳಬೇಕೆಂದು ಸೂಚನೆ ನೀಡಿದ ಅವರು ಎಲ್ಲ ಮತಕ್ಷೇತ್ರಗಳಲ್ಲಿ ಅಧಿಕಾರಿಗಳ ರಿಜಿಸ್ಟರ್ ಸೇರಿದಂತೆ ಇತರೆ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದರು.

ನಾನು ಭದ್ರಾವತಿ ಮತಕ್ಷೇತ್ರದಲ್ಲಿ ಸ್ಟ್ರಾಂಗ್ ರೂಂ, ವಲ್ನರಬಲ್, ಶ್ಯಾಡೋ ಮತಗಟ್ಟೆಗಳನ್ನು ಈಗಾಗಲೇ ಪರಿಶೀಲಿಸಿದ್ದು, ಇನ್ನುಳಿದ ಮತಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದ ಅವರು ಪ್ರತಿ ಮತಕ್ಷೇತ್ರಗಳ ಮತಗಟ್ಟೆಗಳು, ಮತದಾರರ ಪಟ್ಟಿ, ಕ್ರಿಟಿಕಲ್, ವಲ್ನರಬಲ್, ಪಿಡಬ್ಲ್ಯುಡಿ, ಸಖಿ, ಯುವ ಮತದಾರರ ಮತಗಟ್ಟೆಗಳ ಮಾಹಿತಿ, ಚೆಕ್‍ಪೋಸ್ಟ್, ವಶಕ್ಕೆ ಪಡೆಯಲಾದ ಅಕ್ರಮ ಹಣ, ಮದ್ಯದ ವಿವರ, ದಾಖಲಿಸಲಾದ ಪ್ರಕರಣಗಳು, ಅಧಿಕಾರಿ/ಸಿಬ್ಬಂದಿಗಳಿಗೆ ನೀಡಲಾದ ತರಬೇತಿಗಳ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ, ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.

ವೆಚ್ಚ ವೀಕ್ಷಕರಾದ ಮೀನಾಕ್ಷಿ ಸಿಂಗ್ ಮಾತನಾಡಿ, ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಜಾಗರೂಕತೆಯಿಂದ ಪರಿಶೀಲನೆ ನಡೆಸಬೇಕು. ಯಾವುದಾದರೂ ಚೆಕ್‌ಪೋಸ್ಟ್‌ಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ತಿಳಿಸಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಎಫ್‍ಎಸ್‌ಟಿ, ಎಫ್‍ಎಸ್‌ಟಿ, ಇತರೆ ತಂಡಗಳು ಮತ್ತು ಸಮಿತಿಗಳ ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು. ಸುಗಮ ಮತ್ತು ಶಾಂತಿಯುತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+