Get Updates
Get notified of breaking news, exclusive insights, and must-see stories!

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಹೈಟ್ 6.3 ಅಡಿ, ತೂಕ ಎಷ್ಟು?

ವಾಷಿಂಗ್ಟನ್‌: ಅಮೆರಿಕ ಅಂದರೆ ದೊಡ್ಡಣ್ಣ, ಅಮೆರಿಕ ಅಂದರೆ ಶ್ರೀಮಂತ ರಾಷ್ಟ್ರವೆಂಬ ಕಲ್ಪನೆ ಜಗತ್ತಿನಾದ್ಯಂತ ಇತ್ತು. ಆದರೆ ಅಮೆರಿಕ ಕೂಡ ಇತರ ಸಾಮಾನ್ಯ ದೇಶದಂತೆ ಇದೆ ಅಂತಾ ಜನರು ಈಗೀಗ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು, ಅದರಲ್ಲೂ ಡೆಡ್ಲಿ ಕೊರೊನಾ ಅಪ್ಪಳಿಸಿದ ಬಳಿಕ ಅಮೆರಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದೇ ಹೊತ್ತಲ್ಲೇ ಮತ್ತೊಂದು ಇತಿಹಾಸ ನಿರ್ಮಾಣವಾಗಿದ್ದು, ಅಮೆರಿಕದ ಮಾಜಿ ಅಧ್ಯಕ್ಷರು ಮತ್ತೆ ಜೈಲಿಗೆ ಎಂಟ್ರಿ ಹಾಕಿದ್ದಾರೆ.

ಹೌದು, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒಂದಾದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ. ಅದ್ರಲ್ಲೂ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ತಿರುಚಲು ಯತ್ನಿಸಿದ ಆರೋಪ ಮುಳ್ಳಾಗಿ ಕಾಡುತ್ತಿದೆ. ಇದೇ ಕೇಸ್ ಸಂಬಂಧ ಡೊನಾಲ್ಡ್ ಟ್ರಂಪ್ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲಿಗೆ ಶರಣಾಗಿದ್ದರು. ಆಗ ಅವರ ತೂಕ ಹಾಗೂ ಎತ್ತರವನ್ನು ಪರಿಶೀಲಿಸಿದ್ದಾರೆ ಜೈಲಿನ ಅಧಿಕಾರಿಗಳು. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ 6.3 ಅಡಿ ಎತ್ತರ ಇದ್ದರೆ, ಅವರ ತೂಕ ಎಷ್ಟು ಕೆಜಿ ಗೊತ್ತಾ? ಬನ್ನಿ ತಿಳಿಯೋಣ.

american-former-president-donald-trump

ರಾಜಕೀಯ ಇತಿಹಾಸದಲ್ಲೇ ದಾಖಲೆ!

'ಕೊರೊನಾ' ಕಂಟಕ ಅಪ್ಪಳಿಸಿದ ಬಳಿಕ ಅಮೆರಿಕದಲ್ಲಿ ನಡೆಯಬಾರದ ವಿಚಾರ ನಡೀತಾ ಇದೆ. ಅದರಲ್ಲೂ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅಲ್ಲೋಲ ಕಲ್ಲೋಲವು ಕೂಡ ಸೃಷ್ಟಿಯಾಗಿದೆ. ಇದೀಗ ಅಮೆರಿಕದ ರಾಜಕೀಯ ಇತಿಹಾಸದಲ್ಲಿಯೇ ಮಾಜಿ ಅಧ್ಯಕ್ಷರೊಬ್ಬರು ಚುನಾವಣಾ ಅಕ್ರಮ ಆರೋಪದ ಮೇಲೆ ಜೈಲು ಸೇರಿದ ಮೊದಲ ಘಟನೆ ನಡೆದಿದೆ. ಅಷ್ಟಕ್ಕೂ 77 ವರ್ಷದ ಟ್ರಂಪ್‌ ಅವರನ್ನು 22 ನಿಮಿಷಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಅವರು ಜಾರ್ಜಿಯಾ ರಾಜ್ಯದಲ್ಲಿನ ಫಲಿತಾಂಶ ಬುಡಮೇಲು ಮಾಡಲು ಪಿತೂರಿ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಜೈಲಿನಲ್ಲಿ ಟ್ರಂಪ್ ತೂಕ ಲೆಕ್ಕ ಹಾಕಲಿದ್ದು, 215 ಪೌಂಡ್ ಅಂದರೆ ಸುಮಾರು 97 ಕೆ.ಜಿ ತೂಕ ಹೊಂದಿದ್ದಾರಂತೆ.

2 ಲಕ್ಷ ಅಮೆರಿಕನ್ ಡಾಲರ್ ಬಾಂಡ್!

ಇನ್ನು ಡೊನಾಲ್ಡ್ ಟ್ರಂಪ್‌ ಪರ ವಕೀಲರು ಕೋರ್ಟ್‌ಗೆ 2 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಬಾಂಡ್‌ ಸಲ್ಲಿಸಿದ ಬಳಿಕ ವಿಚಾರಣೆ ಕಾಯ್ದಿರಿಸಿ ರಿಲೀಸ್ ಮಾಡಲಾಗಿದೆ. ಜೈಲಿನ ದಾಖಲೆಗಾಗಿ ಅಲ್ಲಿನ ಅಧಿಕಾರಿಗಳು ಮಾಜಿ ಅಧ್ಯಕ್ಷರ ಮಗ್‌ ಶಾಟ್‌ ಫೋಟೊ ತೆಗೆದುಕೊಂಡಿದ್ದಾರೆ. ನಂತರ ಫೋಟೊ ಬಿಡುಗಡೆಗೊಳಿಸಿದ್ದರು. ಟ್ರಂಪ್‌ ಹೊರತಾಗಿ ಅಮೆರಿಕದ ಈ ಹಿಂದಿನ ಯಾವುದೇ ಮಾಜಿ ಅಧ್ಯಕ್ಷರು ಇಷ್ಟು ದೊಡ್ಡ ಸದ್ದು ಮಾಡಿರಲಿಲ್ಲ. ಟ್ರಂಪ್ ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ಪೂರ್ಣಗೊಳಿಸಿದ ನಂತರ ಸಾಲು ಸಾಲು ಪ್ರಕರಣಗಳನ್ನ ಎದುರಿಸಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಯಾವುದೇ ತಪ್ಪು ಎಸಗಿಲ್ಲ. ಅದು ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

american-former-president-donald-trump

ಏನಿದು ಟ್ರಂಪ್ ಕೇಸ್ ಹಿನ್ನೆಲೆ

2020ರ ಜಾರ್ಜಿಯಾ ಚುನಾವಣೆ ಅಕ್ರಮ ಆರೋಪ ಇದೀಗ ಟ್ರಂಪ್ ಅವರ ರಾಜಕೀಯ ಭವಿಷ್ಯ ಮಂಕಾಗಿಸಿದೆ. ಜಾರ್ಜಿಯಾ ಎಲೆಕ್ಷನ್ ರಿಸಲ್ಟ್ ಸಂಬಂಧಿಸಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿತ್ತು. ಫಲಿತಾಂಶ ಕಾನೂನು ಬಾಹೀರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿ ಜೊತೆ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಪ್ರಕರಣ ಸಂಬಂಧ ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೈಲಿಗೆ ಶರಣಾಗಿ ಬಿಡುಗಡೆ ಕೂಡ ಅಗಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದೇ ಬಿಡುತ್ತೆ. ಚುನಾವಣೆ ಹೀಗೆ ಹತ್ತಿರದಲ್ಲೇ ಇರುವಾಗ ಪ್ರಶ್ನೆಯೊಂದು ಕಾಡುತ್ತಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಆಗ ಮುಂದೇನು?ಅಂತಾ. ಅದಕ್ಕೂ ಉತ್ತರ ಇದ್ದು ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕ ಕಾನೂನು ಅನುಮತಿ ನೀಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+