America Election: ಟ್ರಂಪ್ ಬುಡ ಅಲುಗಾಡಿಸುತ್ತಿದೆ ವಂಚನೆ ಆರೋಪ!

ಅಮೆರಿಕ ಅಧ್ಯಕ್ಷೀಯ ಇತಿಹಾಸದಲ್ಲಿ ಡೊನಾಲ್ಡ್ ಟ್ರಂಪ್ ಅವರಷ್ಟು ಸದ್ದು ಮಾಡಿದವರು ಮತ್ತೊಬ್ಬರಿಲ್ಲ. ಏಕೆಂದರೆ ಟ್ರಂಪ್ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಸದ್ದು ಮಾಡಿದ್ರು. ಈಗ ಅವರು ಅಧಿಕಾರ ಕಳೆದುಕೊಂಡು ಬರೋಬ್ಬರಿ 3 ವರ್ಷ ಕಳೆದು ಹೋಗಿದೆ, ಆದ್ರೂ ಟ್ರಂಪ್ ಇನ್ನೂ ಸುದ್ದಿಯಲ್ಲಿದ್ದಾರೆ. ಈ ನಡುವೆ ಮತ್ತೊಂದು ವಂಚನೆ ಆರೋಪ ಟ್ರಂಪ್ ಬುಡ ಅಲುಗಾಡಿಸುತ್ತಿದೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಹಲವು ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ. ಅದರಲ್ಲೂ ಈ ಪೈಕಿ ಟ್ರಂಪ್ ಅವರಿಗೆ ಜೈಲಿನ ದಾರಿ ತೋರಿಸುವ ಪ್ರಕರಣಗಳೇ ಹೆಚ್ಚು. ಇದೀಗ ಇನ್ನೂ ಒಂದು ದೊಡ್ಡ ಕೇಸ್ ಟ್ರಂಪ್ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆಯು ದಟ್ಟವಾಗಿದೆ. ಡೊನಾಲ್ಡ್ ಟ್ರಂಪ್ ವಂಚನೆ ಮಾಡಿ ಸುಮಾರು 100 ಮಿಲಿಯನ್ ಡಾಲರ್, ಅಂದ್ರೆ 800 ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡಿದ್ದಾರೆಂಬ ಆರೋಪ ಈಗ ಸಂಚಲನ ಸೃಷ್ಟಿಸಿದೆ.

New York Lawyer Alleges Donald Trump Made Over $100 Million Through Fraud

ಟ್ರಂಪ್ ವಿರುದ್ಧ ಆರೋಪಗಳ ಸುರಿಮಳೆ!

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ & ಅವರ ಕುಟುಂಬ ಅನುಕೂಲಕರ ಸಾಲ ಮತ್ತು ವಿಮಾ ಸೌಲಭ್ಯ ಪಡೆಯಲು ಆಸ್ತಿ ಮೌಲ್ಯ ಹೆಚ್ಚಿಸಿಕೊಂಡ ಆರೋಪ ಹಿನ್ನೆಲೆ ನ್ಯೂಯಾರ್ಕ್ ಮ್ಯಾನ್‌ಹಟನ್ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ನ್ಯೂಯಾರ್ಕ್‌ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್ ಮಾಡಿರುವ ಆರೋಪ ಸಂಚಲನ ಸೃಷ್ಟಿಸಿದೆ. ಟ್ರಂಪ್ ಅವರು ಅಕ್ರಮವಾಗಿ 800 ಕೋಟಿ ರೂಪಾಯಿಗೂ ಹೆಚ್ಚು ಸಂಪಾದನೆ ಮಾಡಿದ್ದಾರೆಂಬ ಆರೋಪ ಈಗ ಬಿರುಗಾಳಿ ಎಬ್ಬಿಸಿದೆ.

ಅಕಸ್ಮಾತ್ ಟ್ರಂಪ್ ಅವರ ವಿರುದ್ಧ ಇರುವ ಈ ಆರೋಪ ಸಾಬೀತಾದರೆ ದೊಡ್ಡ ಮೊತ್ತದ ದಂಡ ಬೀಳುವುದು ಪಕ್ಕಾ. ನ್ಯೂಯಾರ್ಕ್‌ನ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್ ಅವರ ಪ್ರಕಾರ, ಕನಿಷ್ಠ 250 ಮಿಲಿಯನ್ ಡಾಲರ್ ದಂಡವನ್ನು ಟ್ರಂಪ್ ಕಟ್ಟಬೇಕಾಗುತ್ತದೆ. ಇದು ಭಾರತದ ಕರೆನ್ಸಿ ಲೆಕ್ಕದಲ್ಲಿ ಸುಮಾರು 2000 ಕೋಟಿ ರೂಪಾಯಿಗು ಹೆಚ್ಚು. ಹೀಗಾಗಿಯೇ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ಬೆಂಬಲಿಗರಲ್ಲಿ ಹೊಸ ಆತಂಕ ಮನೆಮಾಡಿದೆ. ಅಲ್ಲದೆ ದೊಡ್ಡ ಪ್ರಮಾಣದ ದಂಡ ಬಿದ್ದರೆ ಟ್ರಂಪ್‌ಗೆ ಚುನಾವಣೆಯಲ್ಲೂ ಮುಳುವಾಗಲಿದೆ.

New York Lawyer Alleges Donald Trump Made Over $100 Million Through Fraud

ಚುನಾವಣೆ ವಂಚನೆ ಆರೋಪವೂ ಇದೆ!

2020ರ ಜಾರ್ಜಿಯಾ ಚುನಾವಣೆ ಅಕ್ರಮ ಆರೋಪ ಇದೀಗ ಟ್ರಂಪ್ ಅವರ ರಾಜಕೀಯ ಭವಿಷ್ಯ ಮಂಕಾಗಿಸಿದೆ. ಜಾರ್ಜಿಯಾ ಎಲೆಕ್ಷನ್ ರಿಸಲ್ಟ್ ಸಂಬಂಧಿಸಿ, ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿತ್ತು. ಫಲಿತಾಂಶ ಕಾನೂನು ಬಾಹೀರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿ ಜೊತೆಗೆ ಉದ್ದೇಶಪೂರ್ವಕ ಮತ್ತು ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಪ್ರಕರಣ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೈಲಿಗೆ ಶರಣಾಗಿ ಬಿಡುಗಡೆ ಕೂಡ ಆಗಿದ್ದರು. ಈಗ ನೋಡಿದರೆ ತೆರಿಗೆ ವಂಚನೆ ಕೇಸ್ ಕೂಡ ಟ್ರಂಪ್‌ಗೆ ಮುಳುಗವಾಗಿದೆ.

ಒಟ್ನಲ್ಲಿ ಹೀಗೆ ಟ್ರಂಪ್ ಅವರ ವಿರುದ್ಧ ಒಂದಲ್ಲ ಒಂದು ಕೇಸ್ ಕಾಟ ಕೊಡುತ್ತಲೇ ಇದೆ. ಆದರೂ ಟ್ರಂಪ್ ಅವರ ಬೆಂಬಲಿಗರು ಈ ಬಾರಿ ಮತ್ತೆ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆಂಬ ನಿರೀಕ್ಷೆಯಲ್ಲಿ ಇದ್ದಾರೆ. ಇಷ್ಟೆಲ್ಲಾ ನಿರೀಕ್ಷೆ ನಡುವೆ ಮತ್ತೊಂದು ಕೇಸ್ ಕೂಡ ಟ್ರಂಪ್‌ಗೆ ಮುಳುವಾಗುತ್ತಿದೆ. ಅಮೆರಿಕದಲ್ಲಿ ತೆರಿಗೆ ವಂಚನೆ ಅಥವಾ ಆರ್ಥಿಕ ವಂಚನೆ ಕೇಸ್‌ಗಳಲ್ಲಿ ಭಾರಿ ಪ್ರಮಾಣದ ಶಿಕ್ಷೆ ವಿಧಿಸಲಾಗುತ್ತದೆ. ಅದರಲ್ಲೂ ಟ್ರಂಪ್‌ ಹಾಗೂ ಅವರ ಕುಟುಂಬವು 2011ರಿಂದ 2021ರ ನಡುವೆ ಆಸ್ತಿ ಮೌಲ್ಯವನ್ನು ₹15,770 ಕೋಟಿಯಿಂದ ₹29,880 ಕೋಟಿ ರೂ.ಗೆ ಹೆಚ್ಚಿಸಿಕೊಂಡ ಆರೋಪ ಕೇಳಿಬಂದಿದೆ. ಹೀಗೆ ಈ ಸುಳಿಯಿಂದ ಟ್ರಂಪ್ ಹೊರಗೆ ಬರುವುದೇ ದೊಡ್ಡ ಸಾಹಸವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+