Yuzvendra Chahal: ಚಹಲ್‌ರನ್ನು ತಂಡದಿಂದ ಕೈಬಿಟ್ಟ ಕಾರಣ ತಿಳಿಸಿದ ಆರ್‌ಸಿಬಿ ಮಾಜಿ ನಿರ್ದೇಶಕ

ಐಪಿಎಲ್ ಶುರುವಾದಾಗಿನಿಂದ ಇದುವರೆಗೂ ಆರ್‌ಸಿಬಿ ಮಾಡಿರುವ ಎಡವಟ್ಟುಗಳಿಗೆ ಲೆಕ್ಕವೇ ಇಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಒಮ್ಮೆಯೂ ಗೆಲ್ಲದ ತಂಡ ಆರ್‌ಸಿಬಿ. ಹಲವು ಆಟಗಾರರನ್ನು ಕೈಬಿಟ್ಟು ಪಶ್ಚಾತಾಪ ಪಟ್ಟಿದೆ.

2016 ರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದರು, 2021 ರಲ್ಲಿ ಕೈಲ್ ಜೇಮಿಸನ್ ಅವರನ್ನು ರೂ 15 ಕೋಟಿ ನೀಡಿತ್ತು, ಮತ್ತು ಇತ್ತೀಚೆಗೆ ಕ್ಯಾಮರೂನ್ ಗ್ರೀನ್‌ಗೆ ₹17.5 ಕೋಟಿ ನೀಡಿದ್ದರೂ, ಅವರಿಂದ ಒಂದೂ ಕೂಡ ಪಂದ್ಯ ಗೆಲ್ಲಿಸುವಂತ ಪ್ರದರ್ಶನ ಬಂದಿಲ್ಲ.

The Reason Behind RCB s Decision Not to Bid on Yuzvendra Chahal in the IPL 2022 Auction

ಆದರೆ ಇವತ್ತಿನವರೆಗೂ ಆರ್‌ಸಿಬಿ ಮಾಡಿದ ದೊಡ್ಡ ಎಡವಟ್ಟೆಂದರೆ ಅದು ಯುಜ್ವೇಂದ್ರ ಚಹಾಲ್‌ರನ್ನು ಕೈಬಿಟ್ಟದ್ದು. ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ದಾಖಲೆ ಮಾಡಿದ್ದಾರೆ.

ಐಪಿಎಲ್‌ನನ ಮಹಾ ಪ್ರಮಾದ!

ಇಂದಿಗೂ ಅಭಿಮಾನಿಗಳು, ಮಾಜಿ ಕ್ರಿಕೆಟಿಗರಲ್ಲಿ ಮೂಡುವ ಪ್ರಶ್ನೆ ಎಂದರೆ ಚಹಲ್ ಅಂತಹ ಬೌಲರ್ ಅನ್ನು ಬಿಡುಗಡೆ ಮಾಡಿದ್ದು ಯಾವ ಲಾಜಿಕ್ ಎಂದು. ಚಿನ್ನಸ್ವಾಮಿಯಂತಹ ಬ್ಯಾಟಿಂಗ್ ಪಿಚ್‌ನಲ್ಲಿ ಕೂಡ ವಿಕೆಟ್ ಪಡೆದ ಚಹಾಲ್, ತಂಡದ ಮೇಲೂ ಅಪಾರ ಅಭಿಮಾನ ಹೊಂದಿದ್ದರು. ತಂಡದಿಂದ ಕೈಬಿಟ್ಟ ಬಗ್ಗೆ ಬಹಿರಂಗವಾಗಿಯೇ ಬೇಸರ ಹೊರಹಾಕಿದ್ದರು. ಸದ್ಯ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಅವರು, ತಂಡದ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.

ಮೈಕ್ ಹೆಸನ್ ಹೇಳಿದ್ದೇನು?

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಸ್ಪಿನ್ನರ್ ಅನ್ನು ಆರ್‌ಸಿಬಿ ಮತ್ತೆ ತಂಡಕ್ಕೆ ಕರೆತರುವ ಪ್ರಯತ್ನ ಕೂಡ ಮಾಡಲಿಲ್ಲ. 2014 ರಿಂದ 2021 ರವರೆಗೆ ಆರ್‌ಸಿಬಿಯನ್ನು ಪ್ರತಿನಿಧಿಸಿರುವ ಯುಜ್ವೇಂದ್ರ ಚಾಹಲ್ ಕೈಬಿಟ್ಟದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರ್‌ಸಿಬಿಯ ಮಾಜಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್, ಈ ಬಗ್ಗೆ ಮಾತನಾಡಿದ್ದು, ಚಹಾಲ್‌ ಅವರನ್ನು ತಂಡಕ್ಕೆ ಏಕೆ ಕರೆತರಲಿಲ್ಲ ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ. ಈ ನಿರ್ಧಾರವನ್ನು ದೊಡ್ಡ ಪ್ರಮಾದ ಎಂದು ಅವರು ಒಪ್ಪಿಕೊಂಡಿದ್ದಾರೆ.

ಜಿಯೋ ಸಿನಿಮಾದಲ್ಲಿ ರಾಬಿನ್ ಉತ್ತಪ್ಪ ಅವರೊಂದಿಗೆ ಮಾತನಾಡುತ್ತಾ, ಅವರನ್ನು ಬಿಡುಗಡೆ ಮಾಡುವುದು ಮತ್ತು ಐಪಿಎಲ್ 2022 ರ ಹರಾಜಿನಲ್ಲಿ ಅವರನ್ನು ಮತ್ತು ಹರ್ಷಲ್ ಪಟೇಲ್ ಅವರನ್ನು ಖರೀದಿಸಲು ಸಾಕಷ್ಟು ಹಣವನ್ನು ಪಡೆಯುವುದು ಅವರ ಯೋಜನೆಯಾಗಿತ್ತು ಎಂದು ಅವರು ಬಹಿರಂಗಪಡಿಸಿದರು. ಆದರೆ ಹರಾಜಿನಲ್ಲಿ ಅವರು ಕೊನೆಯಲ್ಲಿ ಬಂದ ಕಾರಣ ಮತ್ತು ಅವರು ಈಗಾಗಲೇ ವನಿಂದು ಹಸರಂಗರನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ ಕಾರಣ, ಚಹಾಲ್‌ರನ್ನು ಬಿಡ್ ಮಾಡಲಿಲ್ಲ ಎಂದು ಹೇಳಿದ್ದಾರೆ.

ಯುಜ್ವೇಂದ್ರ ಚಹಾಲ್‌ರನ್ನು ಬಿಡ್ ಮಾಡದೇ ಇರುವುದಕ್ಕೆ ನಾನು ನನ್ನ ವೃತ್ತಿಜೀವನವನ್ನು ಮುಗಿಸುವವರೆಗೆ ಮತ್ತು ಬಹುಶಃ ಮೀರಿದ ತನಕ ನಾನು ವಿಷಾದವಿರುತ್ತದೆ ಎಂದಿದ್ದಾರೆ.

ಚಹಾಲ್‌ರನ್ನು ಕೈಬಿಟ್ಟು ಹಸರಂಗ ಅವರನ್ನು ಖರೀದಿ ಮಾಡಿದ್ದು, ರಿಮೋಟ್ ಕೊಳ್ಳಲು ಟಿವಿ ಮಾರಿದಂತಾಗಿದೆ ಆರ್ ಸಿಬಿ ಪರಿಸ್ಥಿತಿ. ಅಂದಿನಿಂದ ಇಂದಿನವರೆಗೂ ತಂಡದಲ್ಲಿ ಸ್ಪಿನ್ನರ್ ಕೊರತೆ ತಂಡದ ಸಮತೋಲನವನ್ನೇ ಹಾಳು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+