Trump Arrested: ಚುನಾವಣಾ ವಂಚನೆ ಆರೋಪ; ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ!
ಅಟ್ಲಾಂಟಾ, ಆಗಸ್ಟ್ 25: 2020ರಲ್ಲಿ ದಕ್ಷಿಣ ರಾಜ್ಯಗಳಲ್ಲಿ ನಡೆದ ಚುನಾವಣಾ ಫಲಿತಾಂಶವನ್ನು ತಿರುಚಲು ಪ್ರಯತ್ನಿಸಿದ್ದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನ ಗುರುವಾರ ಬಂಧಿಸಲಾಗಿದೆ
2020ರ ಜಾರ್ಜಿಯಾ ಚುನಾವಣಾ ಫಲಿತಾಂಶಗಳನ್ನು ತಿರುಚಲು ಯತ್ನಿಸಿದ ಆರೋಪದ ಮೇಲೆ ಡೋನಾಲ್ಡ್ ಟ್ರಂಪ್ ಅವರನ್ನು ಬಂಧಿಸಿದ್ದು, ಇವರ ಮೇಲೆ 12 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅಟ್ಲಾಂಟದ ಫುಲ್ಟನ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ.

ಶೆರಿಫ್ ಕಚೇರಿ ಪ್ರಕಟಿಸಿದ ದಾಖಲೆಗಳ ಪ್ರಕಾರ 30 ನಿಮಿಷಗಳಿಗಿಂತ ಕಡಿಮೆ ಅವಧಿಯ ಸಂಕ್ಷಿಪ್ತ ಅಧಿವೇಶನದಲ್ಲಿ 77 ವರ್ಷದ ಟ್ರಂಪ್ ಅವರನ್ನು ಬಂಧಿಸಿಲಾಗಿದ್ದು, 13 ಆರೋಪಗಳನ್ನು ದಾಖಲಿಸಲಾಗಿದೆ.
2020 ರ ಚುನಾವಣಾ ಫಲಿತಾಂಶವನ್ನು ತಿರುಚಲು ಪ್ರಯತ್ನಿಸಲು 18 ಸಹ-ಪ್ರತಿವಾದಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪದ ಮೇಲೆ ಡೊನಾಲ್ಡ್ ಟ್ರಂಪ್ ಅವರನ್ನು ಅಟ್ಯಾಂಟಾದ ಫುಲ್ಕನ್ ಕೌಂಟಿ ಜೈಲಿನಲ್ಲಿ ಬಂಧಿಸಲಾಗಿದೆ. ಪೋರ್ನ್ ತಾರೆಯೊಬ್ಬರಿಗೆ ರಹಸ್ಯ ಹಣ ನೀಡಿದ ಆರೋಪದ ಮೇಲೆ ನ್ಯೂಯಾರ್ಕ್ನಲ್ಲಿ, ಉನ್ನತ ರಹಸ್ಯ ಸರ್ಕಾರಿ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ಫ್ಲೋರಿಡಾದಲ್ಲಿ ಮತ್ತು ವಾಷಿಂಗ್ಟನ್ನಲ್ಲಿ 2020 ರ ಚುನಾವಣೆಯ ಸೋಲನ್ನು ಸರಿದೂಗಿಸಲು ಪಿತೂರಿ ನಡೆಸಿದ ಆರೋಪ ಡೊನಾಲ್ಡ್ ಟ್ರಂಪ್ ಮೇಲೆಲಿದೆ.
ಡೊನಾಲ್ಡ್ ಟ್ರಂಪ್ ಏಪ್ರಿಲ್‌ನಿಂದ ನಾಲ್ಕು ಬಾರಿ ಕ್ರಿಮಿನಲ್ ದೋಷಾರೋಪಣೆಗೆ ಒಳಗಾಗಿದ್ದಾರೆ. ಇದು ನಾಲ್ಕನೇ ಬಾರಿ ಅವರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನ ಪಡೆದವರಲ್ಲಿ ಕ್ರಿಮಿಕಲ್ ಪ್ರಕರಣ ಎದುರಿಸುತ್ತಿರುವವರು ಮೊದಲ ವ್ಯಕ್ತಿ ಡೊನಾಲ್ಡ್ ಟ್ರಂಪ್ ಆಗಿದ್ದಾರೆ.












Click it and Unblock the Notifications