Donald Trump: ಟ್ರಂಪ್ ಜೈಲಿಗೆ ಹೋದರೂ ಚುನಾವಣೆ ಗೆಲ್ಲಬಹುದು!

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಸರಿಯಾಗಿ 1 ವರ್ಷ ಬಾಕಿ ಇರುವಾಗಲೇ ಬಿರುಗಾಳಿ ಎದ್ದಿದೆ. ಅದರಲ್ಲೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ರಿಪಬ್ಲಿಕನ್ಸ್ ಪಕ್ಷದ ಅಭ್ಯರ್ಥಿಯಾಗುವುದು ಬಹುತೇಕ ಗ್ಯಾರಂಟಿ ಆಗಿದೆ. ಆದ್ರೆ ಇದೇ ವೇಳೆ ಆಕ್ರೋಶದ ಬಿರುಗಾಳಿ ಎದ್ದಿದೆ. ಸ್ವತಃ ಟ್ರಂಪ್ ಪಕ್ಷದವರೇ ಡೊನಾಲ್ಡ್ ಟ್ರಂಪ್ ಬಗ್ಗೆ ಈಗ ಕೆಂಡ ಕಾರುತ್ತಿದ್ದಾರೆ.

ಅಷ್ಟಕ್ಕೂ 2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಾಯಿಸಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಬಹುತೇಕ ಬಚಾವ್ ಆಗಿದ್ದಾರೆ. ತಾವು ಪ್ರಕರಣದಲ್ಲಿ ತಪ್ಪಿತಸ್ಥ ಅಲ್ಲ ಎಂದು ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಹೀಗಾಗಿ ಟ್ರಂಪ್ ಅಭಿಮಾನಿಗಳು ಖುಷ್ ಆಗಿದ್ದಾರೆ. ಆದರೆ ಸ್ವತಃ ಟ್ರಂಪ್ ಪಕ್ಷದ ನಾಯಕರೇ ಈ ಬೆಳವಣಿಗೆಯಿಂದ ಬೇಸರಗೊಂಡಿದ್ದಾರೆ. ಹಾಗೇ ಟ್ರಂಪ್ ಅಧ್ಯಕ್ಷರಾಗಲು ಅರ್ಹರಾ? ಎಂಬ ಪ್ರಶ್ನೆ ಪಕ್ಷದ ಒಳಗೆ ಮೂಡಿದೆ. ಇದು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ.

Law Doesnt Stop Trump from Participate in US Presidential election

ಮಾಜಿ ಅಧ್ಯಕ್ಷ ಟ್ರಂಪ್ ಹೇಳಿದ್ದೇನು?

ಹೌದು ಅಮೆರಿಕದ ವಾಷಿಂಗ್ಟನ್‌ ಡಿಸಿ ಕೋರ್ಟ್‌ನಲ್ಲಿ ಟ್ರಂಪ್, ತಮ್ಮ ವಿರುದ್ಧದ ಕೇಸ್‌ನಲ್ಲಿ ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ. ಇಂಡೋ-ಅಮೆರಿಕನ್ ನ್ಯಾಯಾಧೀಶೆ ಮ್ಯಾಜಿಸ್ಟ್ರೇಟ್‌ ಮೋಕ್ಷಿಲಾ ಉಪಾಧ್ಯಾಯ ಅವರ ಎದುರು ಹಾಜರಾಗಿದ್ದ ಮಾಜಿ ಅಧ್ಯಕ್ಷ ಟ್ರಂಪ್‌ ಈ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಟ್ರಂಪ್‌ರನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ ನ್ಯಾಯಾಧೀಶರು ಕೆಲವು ಷರತ್ತು ವಿಧಿಸಿದ್ದಾರೆ. ಅಗತ್ಯ ಇದ್ದಾಗ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಟ್ರಂಪ್ ಪಕ್ಷದ ಒಳಗೆ ಅಸಮಾಧಾನ ಭುಗಿಲೆದ್ದ ಆರೋಪವೂ ಕೇಳಿಬಂದಿದೆ.

ಜೈಲಿಗೆ ಹೋದರೂ ಟ್ರಂಪ್ ಗೆಲ್ಲಬಹುದು!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಇನ್ನೇನು ಬಂದೇ ಬಿಡುತ್ತೆ. ಚುನಾವಣೆ ಹೀಗೆ ತುಂಬಾ ಹತ್ತಿರದಲ್ಲೇ ಇರುವಾಗ ಪ್ರಶ್ನೆಯೊಂದು ಮೂಡಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಪರಿಸ್ಥಿತಿ ಏನು? ಅಂತಾ. ಅದಕ್ಕೂ ಉತ್ತರ ಇದೆ. ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೇ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗಲಾರದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕ ಕಾನೂನು ಅನುಮತಿ ನೀಡುತ್ತದೆ.

Law Doesnt Stop Trump from Participate in US Presidential election

ಒಟ್ನಲ್ಲಿ ಹೀಗೆ ಅಮೆರಿಕ ಕಾನೂನಿನಲ್ಲಿ ಇರುವ ಅವಕಾಶವೇ ಡೊನಾಲ್ಡ್ ಟ್ರಂಪ್ ಅವರಿಗೆ ವರವಾಗುತ್ತಿದೆ ಎನ್ನಬಹುದು. ಆದ್ರೆ ಟ್ರಂಪ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ವಿಚಾರ ಸ್ವತಃ ಅವರದ್ದೇ ಪಕ್ಷದ ನಾಯಕರಿಗೆ ಇಷ್ಟವಿಲ್ಲ ಎಂಬ ಆರೋಪವಿದೆ. ಹೀಗಿದ್ದರೂ ಇದು ಅನಿವಾರ್ಯ, ಟ್ರಂಪ್ ಜೊತೆಗೆ ಅವರೆಲ್ಲಾ ಕೈಜೋಡಿಸಬೇಕು. ಈಗ ಅಮೆರಿಕದಲ್ಲಿರುವ ಹವಾ ನೋಡಿದ್ರೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸುವ ಸಾಧ್ಯತೆ ಇದೆ. ಹೀಗಾಗಿ ಕಾನೂನಿನ ಸಮಸ್ಯೆಗಳು ಏನೇ ಎದುರಾದರೂ ಟ್ರಂಪ್ ಅದನ್ನೆಲ್ಲಾ ಎದುರಿಸಿ ಮುನ್ನುಗ್ಗುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+