ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಘಾತ!
ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದಲ್ಲಿ ಈಗ ಅಲ್ಲೋಲ, ಕಲ್ಲೋಲ ಸೃಷ್ಟಿ ಆಗಿದೆ. ಅಲ್ಲಿನ ಚುನಾವಣೆ ಕಂಟಕಕ್ಕೆ ಸಿಲುಕಿದೆ. ಅಮೆರಿಕದಲ್ಲಿ ಮುಂದಿನ ವರ್ಷ ಅಂದ್ರೆ 2024ಕ್ಕೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಚುನಾವಣೆಗೆ ಕೂಡ ದೊಡ್ಡ ಅಡ್ಡಿ ಎದುರಾಗುವ ವಾತಾವರಣ ನಿರ್ಮಾಣವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇಂದು ದೊಡ್ಡ ಆಘಾತ ಎದುರಾಗಿದೆ.
ಅಂದಹಾಗೆ 2016ರಿಂದ 2020ರ ತನಕ ಅಮೆರಿಕದ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ಟ್ರಂಪ್ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎನಿಸಿಕೊಂಡರು. ಹೀಗಿದ್ದಾಗ, 2020ರ ಚುನಾವಣೆ ಅವರಿಗೆ ದೊಡ್ಡ ಆಘಾತ ನೀಡಿ, ಹೀನಾಯ ಸೋಲು ಕಂಡಿದ್ದ ಟ್ರಂಪ್ ಈ ಬಾರಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆ ಹೊಂದಿದ್ದರು. ಆದರೆ ಟ್ರಂಪ್ ಅವರ ಆಸೆಗೆ ಈಗ ಅಮೆರಿಕದ ಸುಪ್ರೀಂ ಕೋರ್ಟ್ ದೊಡ್ಡ ಆಘಾತ ನೀಡಿದೆ. ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗುವುದು ಬಿಡಿ, ಚುನಾವಣೆಗೆ ನಿಲ್ಲುವುದು ಕೂಡ ಅನುಮಾನವೇ ಆಗುತ್ತಿದೆ.

ಚುನಾವಣೆ ಅಖಾಡದಿಂದ ಟ್ರಂಪ್ ಔಟ್?
ಹೌದು, ಅಮೆರಿಕದ ಕ್ಯಾಪಿಟಲ್ ಹಿಲ್ ಅಂದ್ರೆ ಅಲ್ಲಿನ ಸಂಸತ್ ಮೇಲೆ ದಾಳಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 2021ರಲ್ಲಿ ನಡೆದಿದ್ದ ಈ ದಾಳಿಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರವಿರುವ ಕಾರಣ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡದ ರೀತಿ ಅಡ್ಡಿ ಎದುರಾಗಿದೆ. ಕೊಲೊರಾಡೊ ರಾಜ್ಯದಿಂದ ಟ್ರಂಪ್ ಸ್ಪರ್ಧೆ ಮಾಡದಂತೆ ಈಗ ತೀರ್ಪು ನೀಡಿದೆ ಕೊಲೊರಾಡೊ ಸುಪ್ರೀಂ ಕೋರ್ಟ್. ಇದರ ಜೊತೆ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಮತದಾನದಿಂದ ಟ್ರಂಪ್ ಹೆಸರು ಹೊರಗೆ ಇಡಲು ಕೋರ್ಟ್ ಖಡಕ್ ಆದೇಶವನ್ನ ನೀಡಿದೆ.
ಯಾವ ಆಧಾರದಲ್ಲಿ ಟ್ರಂಪ್ ವಿರುದ್ಧ ತೀರ್ಪು?
ಮಹತ್ವದ ತೀರ್ಪನ್ನು ನೀಡಿದ ಬಗ್ಗೆ ವಿವರಣೆ ಕೊಟ್ಟಿದೆ ಕೊಲೊರಾಡೊ ಸುಪ್ರೀಂ ಕೋರ್ಟ್. ಅಂದಹಾಗೆ ಮಾಜಿ ಅಧ್ಯಕ್ಷರ ಅನರ್ಹತೆ ಸಂವಿಧಾನದ 14ನೇ ತಿದ್ದುಪಡಿ ಆಧರಿಸಿದೆ ಎಂದು, ಇದೀಗ ಮಾಹಿತಿ ನೀಡಲಾಗಿದೆ. ಮತ್ತೊಂದು ಕಡೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಟ್ರಂಪ್‌ಗೆ ಭಾರಿ ಮುನ್ನಡೆ ಕೂಡ ಸಿಕ್ಕಿದೆ. ರಿಪಬ್ಲಿಕನ್ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ 77 ವರ್ಷದ ಟ್ರಂಪ್ ಮೊದಲ ಸ್ಥಾನ ಪಡೆದಿದ್ದಾರೆ. ಕೊಲೊರಾಡೊ ಸುಪ್ರೀಂ ಕೋರ್ಟ್ ತೀರ್ಪು ಟ್ರಂಪ್‌ಗೆ ಆಘಾತ ನೀಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಟ್ರಂಪ್ ಪರ ವಕೀಲರು ಇದೀಗ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿಂದೆ ಎಂದೂ ಹೀಗೆ ಆಗಿರಲಿಲ್ವಾ?
ಅಷ್ಟಕ್ಕೂ 2021ರ ಜನವರಿ 6ರಂದು ಈ ರೀತಿ ಅಮೆರಿಕದಲ್ಲಿ ಸಂಸತ್ ಭವನಕ್ಕೆ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ನುಗ್ಗಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ ಕೋರ್ಟ್‌ನ ತೀರ್ಪು ಟ್ರಂಪ್ ಬೆಂಬಲಿಗರಿಗೆ ದೊಡ್ಡ ಶಾಕ್ ನೀಡಿದೆ. ನಾಗರಿಕ ಯುದ್ಧ ನಿಬಂಧನೆ ಅಡಿ, ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಅನರ್ಹಗೊಳಿಸಲಾಗಿದೆ ಎಂದು ಕೋರ್ಟ್ ಹೇಳಿದೆ. ಈ ಸಮಯದಲ್ಲೇ ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ ಎಂದು ಹೇಳಿ, ಈ ಘಟನೆಯ ಕುರಿತು ತೀವ್ರ ಅಸಮಾಧಾನ ಹೊರಹಾಕಿದೆ ಅಮೆರಿಕದ ಕೊಲೊರಾಡೊ ರಾಜ್ಯದ ಸುಪ್ರೀಂ ಕೋರ್ಟ್.
ಒಟ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಇನ್ನೇನು ಎಲೆಕ್ಷನ್‌ಗೆ ದಿನಗಣನೆ ಶುರುವಾದ ಬೆನ್ನಲ್ಲೇ ದೊಡ್ಡ ಆಘಾತ ಎದುರಿಸಿದ್ದಾರೆ ಮಾಜಿ ಅಧ್ಯಕ್ಷ, ಡೊನಾಲ್ಡ್ ಟ್ರಂಪ್. ಅಲ್ಲದೆ ಟ್ರಂಪ್ ಅವರ ಸ್ಪರ್ಧೆಗೆ ದೊಡ್ಡ ಕಂಟಕ ಎದುರಾಗಿರುವುದು ರಿಪಬ್ಲಿಕನ್ ಪಕ್ಷದ ನಾಯಕರನ್ನೂ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ. ಇದೆಲ್ಲ ಹೀಗೆ ಮುಂದುವರಿದರೆ ಡೆಮಾಕ್ರಟಿಕ್ ಪಕ್ಷ ಅಂದರೆ ಬೈಡನ್ ಅವರ ಪಕ್ಷಕ್ಕೆ, ಪ್ಲಸ್ ಪಾಯಿಂಟ್ ಆಗುವ ಎಲ್ಲಾ ಮುನ್ಸೂಚನೆ ಸಿಗುತ್ತಿದೆ. ಆದರೆ ಟ್ರಂಪ್ ಪರ ವಕೀಲರು ಈ ತೀರ್ಪಿನ ಬಗ್ಗೆ ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ.












Click it and Unblock the Notifications