ಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ

Posted By:
Subscribe to Oneindia Kannada
ಕರ್ನಾಟಕ ಚುನಾವಣೆ 2018 : ಎಚ್ ಡಿ ಕೆ ಹಾಗು ಜೆಡಿಎಸ್ ಬಗ್ಗೆ ನಾಗಾಸಾಧು ನುಡಿದ ಭವಿಷ್ಯ | Oneindia Kannada

ಶಿವನ ಆರಾಧಕರಾಗಿರುವ ನಾಗಸಾಧುಗಳಿಗೆ ವಿಶೇಷ ಶಕ್ತಿಯಿದೆ ಎನ್ನುವುದನ್ನು ಹಿಂದಿನಿಂದಲೂ ನಂಬಿಕೊಂಡು ಬರಲಾಗುತ್ತಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ದೇಶ ಪರ್ಯಟನೆ ಮಾಡುವ ಸಾಧುಗಳು, ಕೆಲವೊಮ್ಮೆ ಭವಿಷ್ಯ ನುಡಿಯುವ ಪದ್ದತಿಯೂ ಇದೆ.

ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?

ಕರ್ನಾಟಕದ ಚುನಾವಣಾ ಈ ವರ್ಷದಲ್ಲಿ ದೂರದ ಕೇದಾರನಾಥ್ ನಿಂದ ನಾಗಸಾಧುವೊಬ್ಬರು ಭವಿಷ್ಯ ನುಡಿದಿದ್ದಾರೆ. ಸಾಧು ನುಡಿದ ಭವಿಷ್ಯದ ಪ್ರಕಾರ, ರಾಜ್ಯದ ಅಪ್ರತಿಮ ದೈವಭಕ್ತ ಕುಟುಂಬವಾದ ದೇವೇಗೌಡರಿಗೆ ಈ ಬಾರಿಯ ಚುನಾವಣೆ ಶುಭ ಸೂಚಕವಾಗಲಿದೆ.

ಜಗತ್ತಿನ ಎರಡು ಅದ್ಭುತ ಶಕ್ತಿಗಳ ನಾಶ ಸನ್ನಿಹಿತ: ಕೋಡಿಮಠ ಶ್ರೀ

ಕಳೆದ ಕೆಲವು ದಿನಗಳ ಹಿಂದೆ ವಾರಣಾಸಿಯಿಂದ ಬಂದಿದ್ದ ನಾಗಸಾಧುಗಳು, ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿ, ಮುಂದಿನ ಚುನಾವಣೆಯಲ್ಲಿ ನಿಮಗೆ ಒಳ್ಳೆದಾಗಲಿದೆ ಎಂದು ಹರಸಿ ಹೋಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಕೆಲವು ತಿಂಗಳ ಹಿಂದೆ ತುಮಕೂರಿಗೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು.

ಬಿಎಸ್ವೈ ಮನೆಗೆ ಬಂದು 18 ನಾಗಸಾಧುಗಳು ಹರಸಿದ್ದು ಹೀಗೆ

ಆ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಸಹೋದರದ್ವಯರು ಕೇಳಿದಾಗ, ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ನಂತರ ತಿಳಿಸುತ್ತೇನೆಂದು, ಕುಮಾರಸ್ವಾಮಿಯ ಆಪ್ತರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದರು. ಮುಂದೆ ಓದಿ..

ವಯೋವೃದ್ದ ಸಾಧು ಹರಿದಾಸ ನಾಗಸಾಧು

ವಯೋವೃದ್ದ ಸಾಧು ಹರಿದಾಸ ನಾಗಸಾಧು

ಆರು ತಿಂಗಳ ಹಿಂದೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗ್ರಾಮವೊಂದರ ಕಾರ್ಯಕ್ರಮಕ್ಕೆ ವಯೋವೃದ್ದ ಸಾಧು 'ಹರಿದಾಸ ನಾಗಸಾಧು' ಅವರು ಆಗಮಿಸಿದ್ದರು. ಸಾಧುಗಳು ಅಲ್ಲಿರುವುದನ್ನು ಅರಿತ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ಆಶೀರ್ವಾದ ಪಡೆಯಲು ಬಂದಿದ್ದರು.

ಮುಂದಿನ ಚುನಾವಣೆ ಮತ್ತು ಪಕ್ಷದ ಮುಂದಿನ ಭವಿಷ್ಯ

ಮುಂದಿನ ಚುನಾವಣೆ ಮತ್ತು ಪಕ್ಷದ ಮುಂದಿನ ಭವಿಷ್ಯ

ಕೇದಾರನಾಥ್ ನಿಂದ ಆಗಮಿಸಿದ್ದ ಸಾಧುಗಳ ಆಶೀರ್ವಾದ ಪಡೆದ ಎಚ್ಡಿಕೆ ಮತ್ತು ರೇವಣ್ಣ, ಮುಂದಿನ ಚುನಾವಣೆ ಮತ್ತು ಪಕ್ಷದ ಮುಂದಿನ ಭವಿಷ್ಯದ ಬಗ್ಗೆ ಸಾಧುಗಳ ಬಳಿ ಕೇಳಿದ್ದರು. ಈಗಲೇ ಹೇಳಲು ಬರುವುದಿಲ್ಲ, ಹಿಮಾಲಯದಲ್ಲಿ ಧ್ಯಾನ ಮಾಡಿ ನಿಮ್ಮ ಭವಿಷ್ಯ ತಿಳಿಸುವೆ ಎಂದು ಕುಮಾರಸ್ವಾಮಿಯ ಆಪ್ತರ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಿದ್ದರು.

ಜೆಡಿಎಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತಮ ಭವಿಷ್ಯ

ಜೆಡಿಎಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತಮ ಭವಿಷ್ಯ

ಇದಾದ ನಂತರ ಕೆಲವು ದಿನಗಳ ಹಿಂದೆ ನಾಗಸಾಧುಗಳೇ ಕರೆಮಾಡಿ, ಜೆಡಿಎಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಸಾಧುಗಳ ಜೊತೆ, ಫೋನ್ ನಲ್ಲಿ ಮಾತನಾಡುತ್ತಿದ್ದಾಗ, 2018ರಲ್ಲಿ ಯಾವ ಪಕ್ಷ ಕರ್ನಾಟಕದಲ್ಲಿ ಸರ್ಕಾರ ರಚಿಸಲಿದೆ ಎಂದ ಪ್ರಶ್ನೆಗೆ, ಒಗಟಿನ ರೂಪದಲ್ಲಿ ನಾಗಸಾಧು ಉತ್ತರಿಸಿದ್ದಾರೆ.

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿ

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿ

"ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು" ಎಂದು ಹೇಳಿ, ನಾಗಸಾಧು ಕರೆಯನ್ನು ಕಟ್ ಮಾಡಿದ್ದಾರೆಂದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ. ನಂಬರ್ ತೆಗೆದುಕೊಂಡು ಹೋದ, ಸಾಧುಗಳು ಮತ್ತೆ ಫೋನ್ ಮಾಡುವುದಿಲ್ಲ ಎಂದು ಸುಮ್ಮನಿದ್ದ ದೇವೇಗೌಡರ ಕುಟುಂಬಕ್ಕೆ, ನಾಗಸಾಧು ಅವರಾಗಿಯೇ ಸಂಪರ್ಕಿಸಿ ಭವಿಷ್ಯ ನುಡಿದದ್ದು ಹೊಸ ಹುರುಪನ್ನು ನೀಡಿದೆ.

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿ

ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿ

"ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು" ಎನ್ನುವುದನ್ನು, ಹಸ್ತ ಚಿಹ್ನೆಯನ್ನು ಹೊಂದಿರುವ ಕಾಂಗ್ರೆಸ್, ಕಮಲದ ಚಿಹ್ನೆಹೊಂದಿರುವ ಬಿಜೆಪಿ, ಎರಡೂ ಮುಂದಿನ ಚುನಾವಣೆಯಲ್ಲಿ ಸೋಲಲಿದೆ. ಹೊಸ ತೆನೆಗೆ ದಾರಿಯಾಗುವುದು ಎನ್ನುವುದನ್ನು, ತೆನೆಹೊತ್ತ ಮಹಿಳೆಯ ಚಿಹ್ನೆ ಹೊಂದಿರುವ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ನವರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಮತದಾರ ಏನು ಭವಿಷ್ಯ ಬರೆಯಲಿದ್ದಾನೆ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
90 years old Nagasadhu from Kedarnath, called JDS State President HD Kumaraswamy and predicted about upcoming Karnataka Assembly election results.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ