ಜಗತ್ತಿನ ಎರಡು ಅದ್ಭುತ ಶಕ್ತಿಗಳ ನಾಶ ಸನ್ನಿಹಿತ: ಕೋಡಿಮಠ ಶ್ರೀ

Posted By:
Subscribe to Oneindia Kannada
ಕರ್ನಾಟಕ ರಾಜಕೀಯದ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿಗಳು

ಹಾಸನ, ಅಕ್ಟೋಬರ್ 22: 'ಬಿತ್ತಿದಾ ಬೆಳೆಯಾ ಪರರು ಕೊಯ್ದಾರು, ಬಿತ್ತುದಾ ಬೀಜವೊಂದು ಫಸಲು ಇನ್ನೊಂದು ಇದೇ ಆಗೋದು' ಎಂದು ತಾಳೆಗರಿ ನುಡಿಯನ್ನು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಜನರ ಮುಂದಿಟ್ಟಿದ್ದಾರೆ.

ಕೋಡಿ ಶ್ರೀಗಳ ಭವಿಷ್ಯ: ಶಾಸ್ತ್ರಿ ಅವರಂಥ ದೇಶ ನಾಯಕನ ಸಾವು

'ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರದಲ್ಲೆ ನಾಶ ಆಗ್ತವೆ. ದೇಶದ ಗಡಿಯಲ್ಲಿ ಮದ್ದು-ಗುಂಡುಗಳು ಮೊಳಗುತ್ತವೆ. ಭೀಕರ ಅನಾಹುತ ಸಂಭವಿಸಲಿದ್ದು, ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ' ಎಂದು ಕೋಡಿ ಮಠದ ಸ್ವಾಮೀಜಿಗಳು ಹೇಳಿದರು. ಇದನ್ನು ಅರ್ಥೈಸಿದರೆ ಅಮೆರಿಕ ಹಾಗೂ ಕೊರಿಯಾ ನಡುವಿನ ಯುದ್ಧ ಸನ್ನಿಹಿತ ಎನ್ನಬಹುದು.

Hassan : Kodi Mutt Seer Prediction on Weather, Politics, World power

ಕರ್ನಾಟಕ ರಾಜಕೀಯ ಭವಿಷ್ಯ: 'ಮುಂದಿನ ಸರ್ಕಾರ ಯಾವುದು ಎಂಬ ಕುರಿತು ಎರಡು ತಿಂಗಳಲ್ಲಿ ಹೇಳುತ್ತೇನೆ. ಈಗ ಸ್ಪಷ್ಟಪಡಿಸಿದರೆ ಒಬ್ಬರಿಗೆ ನೊವು ಮತ್ತೊಬ್ಬರಿಗೆ ನಲಿವು. ಆದ್ದರಿಂದ ನಾನು ಹೇಳುವುದಿಲ್ಲ' ಎಂದರು.

ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್​ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವೊಂದು ಸಂಭವಿಸಲಿದೆ. ರಾಷ್ಟ್ರಮಟ್ಟದ ನಾಯಕರೊಬ್ಬರ ಸಾವು ಸಂಭವಿಸುವ ಲಕ್ಷಣ ಇದೆ ಎಂದು ಇತ್ತೀಚೆಗೆ ಧಾರವಾಡದಲ್ಲಿ ಹೇಳಿದ್ದರು.

ಕೋಡಿಶ್ರೀಗಳು ನುಡಿದ ಭವಿಷ್ಯವೇನು: ಕುಮಾರಸ್ವಾಮಿ ಮುಂದಿನ ಸಿಎಂ?

ರಾಜ್ಯ ಮತ್ತು ರಾಷ್ಟ್ರದಲ್ಲಿ ಸದ್ಯ ಅಸ್ಥಿರತೆಯ ಪರಿಸ್ಥಿತಿಯಿಲ್ಲ. ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಜಯಕ್ಕಾಗಿ ಎಷ್ಟು ದುಡಿದರೂ, ಅದರ ಲಾಭವನ್ನು ಅವರು ಪಡೆದುಕೊಳ್ಳುವ ಸಾಧ್ಯತೆ ಕಮ್ಮಿ ಎಂದು ಇದಕ್ಕೂ ಮುನ್ನ ಜುಲೈ ತಿಂಗಳಿನಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೇಕಾದ ಜಾಗದಲ್ಲಿ ಮಳೆ ಬರದೇ, ಮಳೆಯ ತೀವ್ರ ಅವಶ್ಯಕತೆಯಿಲ್ಲದ ಪ್ರದೇಶದಲ್ಲಿ ಮಳೆಬರಲಿದೆ ಎಂದು ಜುಲೈನಲ್ಲಿ ಹೇಳಿದ್ದರು. ಆದರೆ, ಚಿತ್ತ ಮಳೆಗೆ ರಾಜ್ಯ ತತ್ತರಿಸಿ ಹೋಯಿತು. ಬರದ ನಾಡಲ್ಲೂ ಜಲಪಾತಗಳು ಸೃಷ್ಟಿಯಾದವು. ಈ ಬಗ್ಗೆ ಸ್ಪಷ್ಟನೆ ಎಂಬಂತೆ ಮಾತನಾಡಿದ ಸ್ವಾಮೀಜಿ, ಇನ್ನು ಮುಂದೆಯೂ ರಾಜ್ಯದಾದ್ಯಾಂತ ಮಳೆಯಾಗಲಿದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kodi Mutt Seer Dr. Shivananda Shivayogi Rajendra Swamiji predicts two giant Power houses of the world will be destroyed soon. Poisonous air will kill many people.
Please Wait while comments are loading...