ಯಾವ ಡಯಟ್ ಇಲ್ಲ, ಸಿಕ್ಕಿದನ್ನೆಲ್ಲಾ ತಿಂದು ಎದುರಾಳಿಗಳಿಗೆ ಬೆವರಿಳಿಸುತ್ತಾನೆ: ವೈಭವ್ ಬಗ್ಗೆ ಕುಕ್, ವಾನ್ ಹೀಗ್ ಹೇಳೋದಾ?

Vaibhav Sooryavanshi: ಐಪಿಎಲ್‌ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಆಡಿ ಕ್ರಿಕೆಟ್‌ ದಿಗ್ಗಜರನ್ನೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇದೀಗ ಇವರ ಬ್ಯಾಟಿಂಗ್ ಶೈಲಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಮನಸೋತಿದ್ದಾರೆ. ಅಲ್ಲದೆ ಈ ಬಾಲಕನೊಂದಿಗೆ ನಡೆಸಿದ ಕೆಲವು ತಮಾಷೆಯ ಚರ್ಚೆಯನ್ನು ವಾನ್‌ ರಿವೀಲ್‌ ಮಾಡಿದ್ದಾರೆ.

ಸ್ಟಿಕ್ ಟು ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕುಕ್, ವಿಶ್ವದ ಇತರ ಪ್ರಸಿದ್ಧ ಪವರ್-ಹಿಟ್ಟರ್‌ಗಳಿಗಿಂತ ವೈಭವ್ ಹೇಗೆ ಭಿನ್ನ ಮತ್ತು ವಿಶಿಷ್ಟ ಎಂಬುದನ್ನು ವಿವರಿಸಿದ್ದಾರೆ. 'ವೈಭವ್ ಅವರ ಬ್ಯಾಟಿಂಗ್‌ನಲ್ಲಿ ಯಾವುದೇ ಪೂರ್ವ ಯೋಚನೆ ಅಥವಾ ಮುಂಚಿತ ನಿರ್ಧಾರಗಳು ಇರುವುದಿಲ್ಲ. ಸಾಮಾನ್ಯವಾಗಿ ವಿಶ್ವದ ಅತ್ಯುತ್ತಮ ಸಿಕ್ಸರ್ ಸಿಡಿಸುವ ಬ್ಯಾಟರ್‌ಗಳು ಕೂಡ ಚೆಂಡು ತಮ್ಮ ನೆಚ್ಚಿನ ಜಾಗಕ್ಕೆ ಬರುವುದಕ್ಕಾಗಿ ಕಾಯುತ್ತಾರೆ. ಆದರೆ ಈ ಹುಡುಗನ ವಿಷಯದಲ್ಲಿ ಹಾಗಲ್ಲ,' ಎಂದು ಹೇಳಿದ್ದಾರೆ.

Alastair Cook Amazed by Vaibhav Sooryavanshi s Fearless Batting Michael Vaughan Reveals Funny Chat

ವೈಭವ್ ಇತರರಿಗಿಂತ ಭಿನ್ನ ಹೇಗೆ?

'ಯಾವ ಎಸೆತ ಹಾಕಿದರೂ ಸಹ ಅಷ್ಟೇ ಚೆನ್ನಾಗಿ ಚೆಂಡನ್ನು ಬೌಂಡರಿ, ಸಿಕ್ಸರ್‌ಗೆ ಅಟ್ಟುತ್ತಾನೆ. ಈ ಅದ್ಭುತ ಸಾಮರ್ಥ್ಯವೇ ಅವನನ್ನು ಇತರರಿಗಿಂತ ವಿಭಿನ್ನವಾಗಿಸಿದೆ,' ಎಂದು ಹೊಗಳಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ನ ಮತ್ತೊಬ್ಬ ಮಾಜಿ ನಾಯಕ ಮೈಕೇಲ್ ವಾನ್ ಅವರು ಐಪಿಎಲ್ ಸಂದರ್ಭದಲ್ಲಿ ಮುಂಬೈನಲ್ಲಿ ವೈಭವ್ ಅವರನ್ನು ಭೇಟಿಯಾದ ಒಂದು ತಮಾಷೆಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

'ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇನೆ'

ಪ್ಲೇಆಫ್‌ಗೆ ಲಗ್ಗೆ ಇಡಲು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ವಿರುದ್ಧದ ಪಂದ್ಯ ಅತ್ಯಂತ ಪ್ರಮುಖವಾಗಿತ್ತು. ಆಗ ಸ್ವಿಮ್ಮಿಂಗ್ ಪೂಲ್ ಬಳಿ ಸಿಕ್ಕ ವೈಭವ್‌ಗೆ ವಾನ್ ನೀವು ಪಂದ್ಯಗಳಿಗೆ ಹೇಗೆ ಸಿದ್ಧರಾಗುತ್ತೀರಿ? ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಈ ಬಾಲಕ ಕಾರ್ಟೂನ್ ನೋಡುವ ಮೂಲಕ ಎಂದು ಉತ್ತರಿಸಿದ್ದರಂತೆ. ನಂತರ ವಿಶೇಷ ತರಬೇತಿ ಅಥವಾ ಡಯೆಟ್ ಮಾಡುತ್ತೀರಾ? ಎಂದು ಕೇಳಿದ್ದಕ್ಕೆ ಯಾವುದೂ ಇಲ್ಲ, ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನು ನೆನೆದ ವಾನ್ ಯಾವುದೇ ಒತ್ತಡವಿಲ್ಲದೆ ಕಾರ್ಟೂನ್ ನೋಡುತ್ತಾ, ಇಷ್ಟಬಂದದ್ದನ್ನು ತಿನ್ನುತ್ತಾ ಚೆಂಡನ್ನು ಮೈದಾನದ ಹೊರಗೆ ಅಟ್ಟುವ ಇವನೇ ನಿಜವಾದ ಆಧುನಿಕ ಆಟಗಾರ ಎಂದು ಹೇಳಿದ್ದಾರೆ.

2026ರ ಐಪಿಎಲ್‌ನಲ್ಲಿ ವೈಭವ್ ದಾಖಲೆಗಳು

* ಬಿಹಾರದ ಸಮಸ್ತಿಪುರ ಮೂಲದ ಈ ಯುವ ಆಟಗಾರ ಕೇವಲ ಒಂದೇ ಸೀಸನ್‌ನಲ್ಲಿ ದಿಗ್ಗಜರ ದಾಖಲೆಗಳನ್ನು ಧೂಳೀಪಟ ಮಾಡಿದ್ದಾರೆ. ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ ಬರೋಬ್ಬರಿ 776 ರನ್ ಗಳಿಸುವ ಮೂಲಕ ಈ ಸೀಸನ್‌ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

* ಇಡೀ ಸೀಸನ್‌ನಲ್ಲಿ 237.31ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

* ಸಿಕ್ಸರ್‌ಗಳ ಸರದಾರ್: ಐಪಿಎಲ್‌ನ ಒಂದೇ ಸೀಸನ್‌ನಲ್ಲಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು. ಬರೋಬ್ಬರಿ 72 ಸಿಕ್ಸರ್‌ಗಳನ್ನ ಸಿಡಿಸಿ 'ಸೂಪರ್ ಸಿಕ್ಸಸ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

* ಟೂರ್ನಿಯ 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' (MVP) ಮತ್ತು 'ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್' ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

* ಎಲಿಮಿನೇಟರ್‌ನಲ್ಲಿ ಹೈದರಾಬಾದ್ ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಮತ್ತು ಕ್ವಾಲಿಫೈಯರ್ 2ರಲ್ಲಿ ಗುಜರಾತ್ ವಿರುದ್ಧ 47 ಎಸೆತಗಳಲ್ಲಿ 96 ರನ್ ಗಳಿಸಿ ಸ್ವಲ್ಪದರಲ್ಲೇ ಶತಕ ಮಿಸ್‌ ಮಾಡಿಕೊಂಡರು. ಆದರೂ ಐಪಿಎಲ್ ಇತಿಹಾಸದ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ ಪಟ್ಟವನ್ನು ತಮ್ಮದಾಗಿಸಿಕೊಂಡರು. ಈ ಐತಿಹಾಸಿಕ ಪ್ರದರ್ಶನದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಸದ್ಯ ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ ಎ ಪ್ರವಾಸಕ್ಕೆ ಆಯ್ಕೆ ಆಗಿದ್ದು, ಶೀಘ್ರದಲ್ಲೇ ಭಾರತ ಹಿರಿಯರ ಟಿ20 ತಂಡಕ್ಕೂ ಪದಾರ್ಪಣೆಗೂ ಸಜ್ಜಾಗಿದ್ದಾರೆ. ಇವರ ಆಟಕ್ಕಾಗಿಯೇ ಕ್ರಿಕೆಟ್‌ ಅಭಿಮಾನಿಗಳು ಹಾಗೂ ದಿಗ್ಗಜರು ಕೂಡ ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+