RBI ಶಾಕ್‌: FY27 GDP ಬೆಳವಣಿಗೆ 6.6%ಕ್ಕೆ ಇಳಿಕೆ, ಹಣದುಬ್ಬರ 5.1%ಕ್ಕೆ ಏರಿಕೆ

ಭಾರತೀ ರಿಸರ್ವ್ ಬ್ಯಾಂಕ್‌ (RBI) ಜೂನ್ 5ರ ಶುಕ್ರವಾರ 2026-27ನೇ ಹಣಕಾಸು ವರ್ಷದ ಭಾರತದ ಜಿಡಿಪಿ (GDP) ಬೆಳವಣಿಗೆಯ ಅಂದಾಜನ್ನು 6.9%ರಿಂದ 6.6%ಕ್ಕೆ ಇಳಿಸಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ಹಣದುಬ್ಬರದ ಮುನ್ಸೂಚನೆಯನ್ನು 4.6%ರಿಂದ 5.1%ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚಿದ ಕಚ್ಚಾ ತೈಲದ ಬೆಲೆಗಳು ಹಾಗೂ ಜಾಗತಿಕ ಪೂರೈಕೆ ಸರಪಳಿ ಅಡಚಣೆ ಸೇರಿದಂತೆ ಹಲವು ಕಾರಣಗಳಿಗೆ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಆರ್‌ಬಿಐ ಇದೇ ಸಂದರ್ಭದಲ್ಲಿ ಎಚ್ಚರಿಸಿದೆ. ಈ ವಿಚಾರವಾಗಿ ಮಾತನಾಡಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ದೇಶೀಯ ಬೇಡಿಕೆ ಇನ್ನೂ ಸ್ಥಿರವಾಗಿದ್ದರೂ ಕೆಲವು ಕ್ಷೇತ್ರಗಳಲ್ಲಿ ಆರಂಭಿಕ ನಿಧಾನಗತಿಯ ಲಕ್ಷಣಗಳು ಕಾಣಿಸುತ್ತಿವೆ ಎಂದಿದ್ದಾರೆ. 2026-27ರಲ್ಲಿ ಸರಾಸರಿ ಕಚ್ಚಾ ತೈಲದ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 85 ಡಾಲರ್‌ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ರೆಪೋ ದರವನ್ನು ಶೇ. 5.25ರಲ್ಲೇ ಮುಂದುವರಿಸುವುದಕ್ಕೆ ನಿರ್ಧರಿಸಲಾಗಿದೆ.

ಇನ್ನು 2026 - 2027ನೇ ಸಾಲಿನಲ್ಲಿ ಜೆಡಿಪಿ ಬೆಳವಣಿಗೆ ದರದ ಅಂದಾಜು ಮೊತ್ತವನ್ನು ಶೇ. 6.6ಕ್ಕೆ ಇಳಿಸಲಾಗಿದೆ. ಹೊಸ ಅಂದಾಜಿನ ಪ್ರಕಾರ, 2026ರ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 6.6%, ಜುಲೈ-ಸೆಪ್ಟೆಂಬರ್‌ನಲ್ಲಿ 6.3%, ಅಕ್ಟೋಬರ್‌-ಡಿಸೆಂಬರ್‌ನಲ್ಲಿ 6.5% ಹಾಗೂ 2027ರ ಜನವರಿ-ಮಾರ್ಚ್‌ನಲ್ಲಿ 6.8% ಬೆಳವಣಿಗೆ ಸಾಧನೆಯಾಗುವ ನಿರೀಕ್ಷೆಯಿದೆ. ಇದಕ್ಕೂ ಮೊದಲು RBI ಕ್ರಮವಾಗಿ 6.8%, 6.7%, 7% ಮತ್ತು 7.2% ಬೆಳವಣಿಗೆಯನ್ನು ಅಂದಾಜಿಸಿತ್ತು. ಆದರೆ ಬದಲಾದ ಜಾಗತಿಕ ಸನ್ನಿವೇಶದಲ್ಲಿ ಹಾಗೂ ಕಚ್ಚಾ ತೈಲ ಬೆಲೆ ಹೆಚ್ಚಳ, ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರಿಯುತ್ತಿರುವುದು ಅಥವಾ ಇರಾನ್ - ಅಮೆರಿಕದ ನಡುವೆ ಯಾವುದೇ ನಿಖರ ಒಪ್ಪಂದ ಆಗದೆ ಇರುವುದು ಭಾರತದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ.

RBI

ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರದ ಅಂದಾಜನ್ನು ಸಹ RBI ಹೆಚ್ಚಿಸಿದೆ. 2026ರ ಏಪ್ರಿಲ್‌-ಜೂನ್‌ ತ್ರೈಮಾಸಿಕಕ್ಕೆ 4.2%, ಜುಲೈ-ಸೆಪ್ಟೆಂಬರ್‌ಗೆ 5.1%, ಅಕ್ಟೋಬರ್‌-ಡಿಸೆಂಬರ್‌ಗೆ 5.9% ಮತ್ತು 2027ರ ಜನವರಿ-ಮಾರ್ಚ್‌ಗೆ 5.4% ಹಣದುಬ್ಬರವಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಹಲವು ಸವಾಲುಗಳಿವೆ ಎಂದು ಹೇಳಲಾಗಿದೆ. ಮಧ್ಯಮಾವಧಿಯಲ್ಲಿ 4% CPI ಹಣದುಬ್ಬರವನ್ನು 2-6% ಮಿತಿಯೊಳಗೆ ಇರಿಸುವ ಗುರಿಯನ್ನು ಆರ್‌ಬಿಐ ಹಾಕಿಕೊಂಡಿದೆ. ಆದರೆ ಹೊಸ ಅಂದಾಜುಗಳ ಪ್ರಕಾರ, 2026ರ ಅಂತ್ಯದ ವೇಳೆಗೆ ಹಣದುಬ್ಬರ RBI ನಿಗದಿಪಡಿಸಿದ ಗರಿಷ್ಠ ಮಿತಿಗೆ ಸಮೀಪಿಸುವ ಸಾಧ್ಯತೆ ಇದೆ. ನಂತರ ತೈಲೆ ಬೆಲೆಗಳ ಪರಿಣಾಮ ಕ್ರಮೇಣ ಕಡಿಮೆಯಾಗಬಹುದು ಎಂದು ಮಲ್ಹೋತ್ರಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಹಣಕಾಸು ವರ್ಷದ ಕೋರ್‌ ಇನ್‌ಫ್ಲೇಷನ್‌ (ಆಹಾರ ಮತ್ತು ಇಂಧನ ಹೊರತಾದ ಹಣದುಬ್ಬರ) ಅಂದಾಜನ್ನೂ 4.4%ರಿಂದ 4.7%ಕ್ಕೆ ಹೆಚ್ಚಿಸಲಾಗಿದೆ. ಕೋರ್‌ ಇನ್‌ಫ್ಲೇಷನ್‌ ಅನ್ನು ಆರ್ಥಿಕತೆಯ ನಿಜವಾದ ಬೇಡಿಕೆಯ ಸ್ಥಿತಿಯನ್ನು ಅಳೆಯುವ ಪ್ರಮುಖ ಸೂಚಕವಾಗಿ ಪರಿಗಣಿಸಲಾಗುತ್ತದೆ. ಇದರ ನಡುವೆ, RBI ಹಣಕಾಸು ನೀತಿ ಸಮಿತಿ (MPC) ಮೂರು ದಿನಗಳ ಸಭೆಯ ಬಳಿಕ ರೆಪೊ ದರವನ್ನು 5.25%ದಲ್ಲೇ ಮುಂದುವರಿಸಲು ಹಾಗೂ 'ತಟಸ್ಥ' ಹಣಕಾಸು ನೀತಿ ನಿಲುವನ್ನು ಕಾಯ್ದುಕೊಳ್ಳಲು ತೀರ್ಮಾನಿಸಿದೆ. ಈ ಎರಡೂ ನಿರ್ಧಾರಗಳನ್ನು MPC ಯ ಆರು ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.

ಇನ್ನೊಂದೆಡೆ, 2025-26ನೇ ಸಾಲಿನ ನಾಲ್ಕನೇ ತ್ರೈಮಾಸಿಕ GDP ಅಂಕಿಅಂಶಗಳನ್ನು ಹಾಗೂ ತಾತ್ಕಾಲಿಕ ವಾರ್ಷಿಕ ಅಂದಾಜುಗಳನ್ನು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಮಹತ್ವದ ಅಪ್ಡೇಟ್ಸ್‌ ನೀಡಿದೆ. ಅರ್ಥಶಾಸ್ತ್ರಜ್ಞರ ಅಂದಾಜಿನ ಪ್ರಕಾರ, ಅಕ್ಟೋಬರ್‌-ಡಿಸೆಂಬರ್‌ 2025ರ 7.8% ಬೆಳವಣಿಗೆಯಿಂದ ಈಗಿನ ತ್ರೈಮಾಸಿಕದಲ್ಲಿ ಸುಮಾರು 7%ಕ್ಕೆ ಬೆಳವಣಿಗೆ ನಿಧಾನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+