Amruthadhaare Serial: ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್: ಮಿಂಚು ರಕ್ಷಿಸಲು ಭೂಮಿಕಾ ಡೇಂಜರಸ್ ಮಿಷನ್, ಪಾರ್ಥ ಸಾಥ್
ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಮಿಂಚುವನ್ನು ಕೇಡಿ ಜೈದೇವ್ ಕಿಡ್ನ್ಯಾಪ್ ಮಾಡಿದ್ದು, ಮಿಂಚುವನ್ನು ಪತ್ತೆ ಮಾಡುವುದಕ್ಕೆ ಭೂಮಿಕಾ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾಳೆ. ಪೊಲೀಸರ ಸಹಾಯ ತೆಗೆದುಕೊಳ್ಳದೆಯೇ ಮಗುವನ್ನು ಪತ್ತೆ ಮಾಡುವ ಸಾಹಸಕ್ಕೆ ಭೂಮಿಕಾ ಮುಂದಾಗಿದ್ದಾಳೆ. ಮಿಂಚು ನಮ್ಮ ಮಗಳು ಎಂದು ಹೇಳಿಕೊಂಡು ಬಂದಿದ್ದ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗೌತಮ್‌ನನ್ನು ಬಂಧಿಸಿದ್ದರು. ಇದೀಗ ಗೌತಮ್ ಅನ್ನು ಹೇಗಾದರೂ ಮಾಡಿ ಜೈಲಿನಿಂದ ಬಿಡಿಸಬೇಕು ಹಾಗೂ ಮಿಂಚುವನ್ನು ಪತ್ತೆ ಮಾಡಬೇಕು ಎಂದು ಸಾಹಸಕ್ಕೆ ಮುಂದಾಗಿದ್ದಾಳೆ. ಮಿಂಚುವಿನ ಸಹಾಯಕ್ಕಾಗಿ ಎಸಿಪಿ ಸುರೇಶ್ ಅವರು ನಿಮ್ಮ ನಂಬರ್ ಕೊಟ್ಟರು ಎಂದು ವ್ಯಕ್ತಿಯೊಬ್ಬರ ಬಳಿ ಭೂಮಿಕಾ ಸಹಾಯ ಕೇಳಿದ್ದಾಳೆ. ಚಾಮರಾಜಪೇಟೆಯಲ್ಲಿ ಗೂಳಿ ಎನ್ನುವ ವ್ಯಕ್ತಿ ಇದ್ದಾನೆ. ಅವನ ಸಹಾಯ ಕೇಳಿದರೆ, ಪಕ್ಕ ನಿಮ್ಮ ಮಗು ಸಿಗುತ್ತದೆ ಅಂತ ಆ ವ್ಯಕ್ತಿ ಹೇಳಿದ್ದಾನೆ.
ಮಿಂಚುವನ್ನು ಹುಡುಕುವುದಕ್ಕೋಸ್ಕರ ಭೂಮಿಕಾ ಗೂಳಿಯ ಸಹಾಯ ಕೇಳಿದ್ದಾಳೆ. ಆದರೆ, ಗೂಳಿ ಎಂಬ ವ್ಯಕ್ತಿಯ ಬಳಿ ಭೂಮಿಕಾ ಸಹಾಯ ಕೇಳಿದ್ದು, ಇದಕ್ಕೆ ಗೂಳಿ ಈ ಕೆಲಸವೆಲ್ಲ ಮಾಡುವುದು ಬಿಟ್ಟು ತುಂಬಾ ದಿನಗಳೇ ಆಗಿವೆ ಎಂದು ಹೇಳಿದ್ದಾನೆ. ಗೂಳಿಯ ಮನವೊಲಿಸುವಲ್ಲಿ ಭೂಮಿಕಾ ಯಶಸ್ವಿಯಾಗಿದ್ದಾಳೆ. ಸರ್ ನನ್ನ ಮಗಳು ಕಾಣೆಯಾಗಿದ್ದಾಳೆ. ನೀವು ಏನೂ ಯೋಚನೆ ಮಾಡಬೇಡಿ ಸರ್ ನಿಮಗೆ ಏನುಬೇಕೋ ನಾವು ಕೊಡ್ತೀವಿ ಅಂತ ಭೂಮಿಕಾ ಹೇಳಿದ್ದಾಳೆ. ದುಡ್ಡು ಕೊಟ್ಟ ಮೇಲೆ ಭೂಮಿಕಾ ಮಾತಿಗೆ ಕೊನೆಗೂ ಒಪ್ಪಿಕೊಂಡಿರುವ ವ್ಯಕ್ತಿ ಭೂಮಿಕಾಗೆ ಸಹಾಯ ಮಾಡಲು ಹಾಗೂ ಮಿಂಚುವನ್ನು ಹುಡುಕಿಕೊಡುವುದಕ್ಕೆ ಒಪ್ಪಿಕೊಂಡಿದ್ದಾನೆ. ಮತ್ತೊಂದು ಕಡೆ ಮಿಂಚುವನ್ನು ಕಿಡ್ನ್ಯಾಪರ್ಸ್ ಕೂಡಿ ಹಾಕಿದ್ದು. ಮಿಂಚುವಿನೊಂದಿಗೆ ಇನ್ನೂ ಹಲವು ಮಕ್ಕಳನ್ನು ಕಿಡ್ನ್ಯಾಪರ್ಸ್ ಕಿಡ್ನ್ಯಾಪ್ ಮಾಡಿರುವಂತೆ ತೋರಿಸಲಾಗಿದೆ.

ಮಿಂಚು ತಾನು ಧೈರ್ಯವಾಗಿ ಇರುವುದಲ್ಲದೆ ಉಳಿದ ಮಕ್ಕಳಿಗೂ ಧೈರ್ಯ ತುಂಬಿದ್ದಾಳೆ. ನಮ್ಮ ಅಮ್ಮ ಹೇಳಿದ್ದಾರೆ ಏನಾದರೂ ಸಮಸ್ಯೆ ಬಂದರೆ ಆಗ ನಾವು ಪ್ರಾರ್ಥನೆ ಮಾಡಿಕೊಳ್ಳಬೇಕು ಅಂತ. ಮಿಂಚು ಹಾಗೂ ಮಿಂಚುವಿನ ಜೊತೆ ಇರುವ ಮಕ್ಕಳು ಪ್ರಾರ್ಥನೆ ಮಾಡಿರುವುದು ಹೊಸ ಎಪಿಸೋಡ್ ಪ್ರೋಮೋದಲ್ಲಿ ಇದೆ. ಪ್ರಾರ್ಥನೆ ಮಾಡುತ್ತಿರುವಾಗಲೇ ಮಿಂಚು ಸೇರಿ ಮಕ್ಕಳನ್ನು ಕೂಡಿ ಹಾಕಿರುವ ಪ್ರದೇಶಕ್ಕೆ ಭೂಮಿಕಾ ಹಾಗೂ ಪಾರ್ಥ ದಿವಾನ್ ಸಹ ಸಾಥ್ ಕೊಟ್ಟಿದ್ದಾನೆ. ಮುಂದೆ ಏನಾಗಲಿದೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ. ಭೂಮಿಕಾ ಹಾಗೂ ದಿವಾನ್ ಸೇರಿಕೊಂಡು ಮಿಂಚುವನ್ನು ಹಾಗೂ ಉಳಿದ ಮಕ್ಕಳನ್ನು ಹೇಗೆ ಕಾಪಾಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
Amruthadhaare Serial: ನೆಟ್ಟಿಗರು ಹೇಳಿದ್ದೇನು ?
ಇನ್ನು ಅಮೃತಧಾರೆ ಸೀರಿಯಲ್‌ನ ಹೊಸ ಎಪಿಸೋಡ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಭೂಮಿಕಾ ಅವರ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಹಲವರು ಭೂಮಿಕಾ ಪೊಲೀಸರ ಸಹಾಯ ಪಡೆದುಕೊಳ್ಳಬೇಕಾಗಿತ್ತು. ಒಬ್ಬೊಬ್ಬರೇ ಹೋಗುವ ಅವಶ್ಯಕತೆ ಏನಿತ್ತು ಅಂತಲೂ ಪ್ರಶ್ನೆ ಮಾಡಿದ್ದಾರೆ.













Click it and Unblock the Notifications