Samantha: ಸಮಂತಾಗೆ ಮಗು ಆಗಲ್ಲ ಅಂದೋರೆಲ್ಲ ಬಾಯಿ ಮುಚ್ಕೊಂಡಿರ್ಬೇಕ್‌, ಅಮ್ಮನಾಗ್ತಿದ್ದಾರಂತೆ ಸ್ಯಾಮ್

ಸಮಂತಾ ರುತ್‌ ಪ್ರಭು ಹಾಗೂ ನಾಗಚೈತನ್ಯ ಅವರ ಡಿವೋರ್ಸ್‌ ಆದಾಗ ಬಲವಾಗಿ ಕೇಳಿಬಂದ ಮಾತು ಸಮಂತಾಗೆ ಮಗು ಆಗಲ್ಲ, ಅವರಿಗೆ ಆರೋಗ್ಯ ಸಮಸ್ಯೆ ಇದೆ ಅಂತ. ಆದ್ರೆ ಅದೆಲ್ಲ ಸುಳ್ಳು ಅಂತ ಪ್ರೂವ್‌ ಮಾಡೋದಕ್ಕೆ ಸ್ಯಾಮ್ ರೆಡಿ ಆಗ್ತಿದ್ದಾರೆ. ಶೀಘ್ರದಲ್ಲೇ ರಾಜ್ ನಿಡಿಮೋರ್‌ ಹಾಗೂ ಸ್ಯಾಮ್ ಹೊಸ ಅತಿಥಿಯನ್ನು ಸ್ವಾಗತಿಸೋ ನಿರೀಕ್ಷೆ ಇದೆ.

ಸಮಂತಾ ರುತ್‌ ಪ್ರಭು ಎಂಬ ನಟಿ ಅಮ್ಮನಾಗ್ತಿದ್ದಾರೆ ಅನ್ನೋ ಸುದ್ದಿ ಹಲವರಿಗೆ ಹಲವು ರೀತಿಯಲ್ಲಿ ಉತ್ತರ ಕೊಟ್ಟಂತಿದೆ. ಸಮಂತಾ ಹಿಂದೆ ನಾಗಚೈತನ್ಯ ಜೊತೆಗೆ ಡಿವೋರ್ಸ್‌ ಪಡೆದು ಆಚೆ ಬಂದಾಗ ಹಲವರು ಈ ವಿಚ್ಛೇದನವನ್ನು ಹಲವು ಬಗೆಯಲ್ಲಿ ವಿಶ್ಲೇಷಿಸಿದ್ದರು. ಅದರಲ್ಲಿ ಮೊದಲು ಬಂದ ಮಾತೇ ಸಮಂತಾ ತಾಯಿ ಆಗುವ ಸಾಧ್ಯತೆ ಇಲ್ಲ ಎಂಬ ಮಾತು. ಕೆಲವರು ಅವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಮಕ್ಕಳಾಗುವ ಚಾನ್ಸ್ ಕಡಿಮೆ ಅಂತೆ ಅಂತ ಪುಂಗಿ ಊದಿದ್ರೆ, ಇನ್ನೂ ಕೆಲವರು ಸಮಂತಾಗೆ ಮಗು ಮಾಡ್ಕೊಳ್ಳೋದೇ ಇಷ್ಟವಿಲ್ಲವಂತೆ. ಇದೇ ಕಾರಣಕ್ಕೆ ದಂಪತಿ ನಡುವೆ ವೈಷಮ್ಯ ಉಂಟಾಗಿ ಇಬ್ಬರೂ ಸಪರೇಟ್‌ ಆಗ್ತಿದ್ದಾರೆ ಅನ್ನೋ ಮಾತು ಕೇಳಿಬಂತು.

Samantha Ruth Prabhu

ಆದರೆ ಇವರೆಲ್ಲ ಈಗ ಬಾಯ್ಮುಚ್ಚಿಕೊಂಡಿರಬೇಕಾದ ಸ್ಥಿತಿ ಬಂದಿದೆ. ಸಮಂತಾ ಅಮ್ಮನಾಗ್ತಿರೋ ಸುದ್ದಿ ಇನ್ನೊಬ್ಬರ ಬದುಕಿನ ಬಗ್ಗೆ ಸದಾ ಮೂಗು ತೂರಿಸುವವರಿಗೆ ಖಡಕ್ ಉತ್ತರ ನೀಡಿದಂತಿದೆ. ಈಗ ಸಮಂತಾ ವಯಸ್ಸು 40 ವರ್ಷ. ಕೊಂಚ ತಡವಾಗಿಯಾದರೂ ಈ ನಟಿ ಒಂದು ನಿರ್ಧಾರಕ್ಕೆ ಬಂದ ಹಾಗಿದೆ. ಅವರ ನಡೆ ನುಡಿಯಲ್ಲಿ ಗಾಂಭೀರ್ಯ, ಮೆಚ್ಯೂರಿಟಿ ಕಾಣುತ್ತಿದೆ. ಇದೆಲ್ಲ ಅವರು ಮತ್ತೊಂದು ಸ್ಟೇಜ್‌ಗೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ ಅನ್ನೋದರ ಸಂಕೇತದ ಹಾಗಿದೆ. 'ನಮ್ಮ ಲೈಫ್‌ನ ಯಾವುದೇ ನಿರ್ಧಾರವನ್ನೂ ಜೊತೆಯಾಗಿ ತೆಗೆದುಕೊಳ್ಳುತ್ತೇವೆ' ಅಂತ ಇತ್ತೀಚೆಗೆ ಸಮಂತಾ ಹೇಳಿರುವ ಮಾತು ತನ್ನ ಹಾಗೂ ರಾಜ್‌ ನಿಡಿಮೋರ್‌ ನಡುವೆ ಎಷ್ಟು ಅಂಡರ್‌ಸ್ಟಾಂಡಿಂಗ್‌ ಇದೆ ಅನ್ನೋದಕ್ಕೆ ಸಂಕೇತದ ಹಾಗಿದೆ.

ನಿರ್ಮಾಪಕಿಯಾಗಿ ಬಡ್ತಿ

ಅಷ್ಟಕ್ಕೂ ಇದ್ದಕ್ಕಿದ್ದ ಹಾಗೆ ಸಮಂತಾ ಗರ್ಭವತಿ ಆಗುತ್ತಿರುವ ವಿಚಾರ ರಿವೀಲ್‌ ಆಗಿದ್ದೂ ಇಂಟರೆಸ್ಟಿಂಗ್‌ ಆಗಿದೆ. ಸಮಂತಾ ರುತ್ ಪ್ರಭು ತಾನು ಸೂಪರ್‌ ಹೀರೋ ರೀತಿ ನಟಿಸಿರುವ 'ಮಾ ಇಂಟಿ ಬಂಗಾರಂ' ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ಚಿತ್ರದ ಮೂಲಕ ಸಮಂತಾ ನಿರ್ಮಾಪಕಿಯಾಗಿಯೂ ಬಡ್ತಿ ಪಡೆದಿದ್ದು, ಸಿನಿಮಾ ಬಿಡುಗಡೆಯಾದ ಒಂದೇ ದಿನದಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆದು ಲಾಭದ ಹಾದಿ ಹಿಡಿದಿರುವುದು ಅವರ ಖುಷಿ ಹೆಚ್ಚಿಸಿದೆ.

ಧನುಷ್‌ ಮತ್ತು ಮೃಣಾಲ್‌ ಠಾಕೂರ್ ನಡುವೆ ಬ್ರೇಕಪ್; ಲವ್‌ ಕಹಾನಿಗೆ ಬ್ರೇಕ್‌ ಹಾಕಿ ಪ್ರೊಫೆಶನ್‌ಗೆ ಫೋಕಸ್‌
ಧನುಷ್‌ ಮತ್ತು ಮೃಣಾಲ್‌ ಠಾಕೂರ್ ನಡುವೆ ಬ್ರೇಕಪ್; ಲವ್‌ ಕಹಾನಿಗೆ ಬ್ರೇಕ್‌ ಹಾಕಿ ಪ್ರೊಫೆಶನ್‌ಗೆ ಫೋಕಸ್‌

ಇದರ ನಡುವೆಯೇ ಸಮಂತಾ ತನ್ನ ಪತಿ ರಾಜ್ ಮತ್ತು ಚಿತ್ರತಂಡದ ಇತರ ಸದಸ್ಯರೊಂದಿಗೆ ಸಿನಿಮಾದ ಯಶಸ್ಸನ್ನು ಆಚರಿಸಿದ್ದಾರೆ. ಈ ಸಂಭ್ರಮಾಚರಣೆಯ ಫೋಟೋಗಳಲ್ಲಿ ಸಮಂತಾ ಬೇಬಿ ಬಂಪ್‌ ಕೊಂಚ ರಿವೀಲ್‌ ಆಗುವಂತಿದೆ. ಅದನ್ನು ನೋಡಿ ಸಮಂತಾ ಅಮ್ಮನಾಗುತ್ತಿದ್ದಾರೆ ಎಂದೇ ಸುದ್ದಿ ಹಬ್ಬುತ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ಸಮಂತಾ ಬಿಳಿ ಬಣ್ಣದ ಟಿ ಶರ್ಟ್ ಧರಿಸಿದ್ದು, ಅವರ ಬೇಬಿ ಬಂಪ್ ಎದ್ದುಕಾಣುತ್ತಿದೆ. ನಟಿಗೆ ಹತ್ತಿರವಿರುವ ಮೂಲಗಳ ಪ್ರಕಾರ ಸಮಂತಾ ಶೀಘ್ರದಲ್ಲೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದು ಖಚಿತವಾಗಿದೆ. ಆದರೆ ಈ ಬಗ್ಗೆ ದಂಪತಿಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಸಮಂತಾ ಅವರು ನಿರ್ದೇಶಕ ಮತ್ತು ನಿರ್ಮಾಪಕರಾದ ರಾಜ್ ನಿಡಿಮೋರು ಅವರನ್ನು ಕೆಲವು ಕಾಲ ಪ್ರೀತಿಸಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಸಮಂತಾಗೆ ಸಂಸಾರ ಆರಂಭಿಸುವ ಬಗ್ಗೆ ಯಾವಾಗಲೂ ತುಂಬಾ ಉತ್ಸಾಹವಿತ್ತು. ಹೀಗಾಗಿ ಅವರು ಶೀಘ್ರದಲ್ಲೇ ಈ ಸಿಹಿ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ.

ಇನ್ನು 'ಮಾ ಇಂಟಿ ಬಂಗಾರಂ' ಚಿತ್ರದ ಬಗ್ಗೆ ಹೇಳುವುದಾದರೆ, ಈ ಸಿನಿಮಾವನ್ನು ಬಿವಿ ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ನಿನ್ನೆ ಬಿಡುಗಡೆಯಾದ ಈ ಸಿನಿಮಾ ಕೇವಲ ಒಂದೇ ದಿನದಲ್ಲಿ ಹಾಕಿದ ಬಂಡವಾಳವನ್ನು ವಾಪಸ್ ಗಳಿಸಿ ಕಮಾಲ್ ಮಾಡಿದೆ. ಮೊನ್ನೆ ತಾನೇ ತನ್ನ ಜೀವ ಹಿಂಡಿದ ಆರೋಗ್ಯ ಸಮಸ್ಯೆ ಬಗ್ಗೆ ಮಾತನಾಡಿದ ಸಮಂತಾ ಮುಂದೆ ಮಗುವಿನ ಆಗಮನ ಖುಷಿ ಸಂಗತಿಯನ್ನು ಯಾವಾಗ ಅಧಿಕೃತವಾಗಿ ಹೇಳುತ್ತಾರೆ ಅಂತ ಕಾದುನೋಡಬೇಕಿದೆ.

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+