ದೇಶದಲ್ಲೇ ಅತಿ ಹೆಚ್ಚು ಪೆಟ್ರೋಲ್ ಬಳಸುವ ರಾಜ್ಯ ಯಾವುದು? ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಅಂತರರಾಷ್ಟ್ರೀಯ ಮಟ್ಟದಲ್ಲಿನ ರಾಜಕೀಯ ಉದ್ವಿಗ್ನತೆ ಹಾಗೂ ತೈಲ ಪೂರೈಕೆಯಲ್ಲಿನ ಏರುಪೇರುಗಳ ನಡುವೆಯೂ ಭಾರತದಲ್ಲಿ ಇಂಧನ ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಪೆಟ್ರೋಲ್‌ ದರವು ಗಗನಕ್ಕೇರಿದ್ದು, ಜನಸಾಮಾನ್ಯರ ಜೇಬು ಸುಡುತ್ತಿದೆ. ಈ ನಡುವೆ ಭಾರತದಲ್ಲಿ ಯಾವ ರಾಜ್ಯ ಅತಿ ಹೆಚ್ಚು ಪೆಟ್ರೋಲ್ ಬಳಕೆ ಮಾಡುತ್ತದೆ ಎಂಬ ಕುರಿತು ಆಸಕ್ತಿದಾಯಕ ಮಾಹಿತಿ ಹೊರಬಿದ್ದಿದೆ.

ನಂಬರ್ 1 ಸ್ಥಾನದಲ್ಲಿ ಯಾವ ರಾಜ್ಯ?

ಇದುವರೆಗೆ ಇಂಧನ ಬಳಕೆಯಲ್ಲಿ ದೇಶದಲ್ಲೇ ಸದಾ ಮೊದಲ ಸ್ಥಾನದಲ್ಲಿರುತ್ತಿದ್ದ ಕೈಗಾರಿಕಾ ದೈತ್ಯ ಮಹಾರಾಷ್ಟ್ರವನ್ನು ಹಿಂದಿಕ್ಕಿ, ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ (UP) ಈಗ ಪೆಟ್ರೋಲ್ ಬಳಕೆಯಲ್ಲಿ ಹೊಸ ದಾಖಲೆ ಬರೆದಿದೆ. ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ (PPAC) ಬಿಡುಗಡೆ ಮಾಡಿರುವ 2024-25ರ ಹಣಕಾಸು ವರ್ಷದ ಅಧಿಕೃತ ವರದಿಯ ಪ್ರಕಾರ, ಉತ್ತರ ಪ್ರದೇಶವು ದೇಶದಲ್ಲೇ ಅತಿ ದೊಡ್ಡ ಪೆಟ್ರೋಲ್ ಗ್ರಾಹಕ ರಾಜ್ಯವಾಗಿ ಹೊರಹೊಮ್ಮಿದೆ.

Petrol

ಈ ಅವಧಿಯಲ್ಲಿ ಉತ್ತರ ಪ್ರದೇಶವೊಂದರಲ್ಲೇ ಬರೋಬ್ಬರಿ 4,832.8 ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಮಾರಾಟವಾಗಿದೆ. ಉತ್ತರ ಪ್ರದೇಶದ ವಿಶಾಲವಾದ ಭೌಗೋಳಿಕ ವಿಸ್ತೀರ್ಣ, ಅಗಾಧ ಜನಸಂಖ್ಯೆ, ಇತ್ತೀಚಿನ ದಿನಗಳಲ್ಲಿ ಅಲ್ಲಿ ಹೆಚ್ಚಾಗಿರುವ ಸ್ವಂತ ವಾಹನಗಳ ಸಂಖ್ಯೆ ಹಾಗೂ ಸುಧಾರಿತ ರಸ್ತೆ ಸಾರಿಗೆ ಸಂಪರ್ಕ ವ್ಯವಸ್ಥೆಯು ಇಷ್ಟೊಂದು ದೊಡ್ಡ ಪ್ರಮಾಣದ ಇಂಧನ ಬಳಕೆಗೆ ಮುಖ್ಯ ಕಾರಣಗಳಾಗಿವೆ.

ಹೆಚ್ಚು ಪೆಟ್ರೋಲ್ ಬಳಸುವ ಟಾಪ್ 5 ರಾಜ್ಯಗಳು (ಸಾವಿರ ಮೆಟ್ರಿಕ್ ಟನ್‌ಗಳಲ್ಲಿ)

ಉತ್ತರಪ್ರದೇಶ: 4,832.82
ಮಹಾರಾಷ್ಟ್ರ: 4,370.53
ತಮಿಳುನಾಡು: 3,533.74
ಕರ್ನಾಟಕ: 3,054.35
ಗುಜರಾತ್: 2,701.2

ಕೈಗಾರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ 3 ಮತ್ತು 4ನೇ ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನುಳಿದಂತೆ ರಾಜಸ್ಥಾನ್, ದೆಹಲಿ, ಮಧ್ಯಪ್ರದೇಶ, ಹರಿಯಾಣ ಮತ್ತು ಕೇರಳ ರಾಜ್ಯಗಳು ಸಹ ಭಾರಿ ಪ್ರಮಾಣದ ಇಂಧನ ಬಳಕೆಯೊಂದಿಗೆ ಮುಂದಿನ ಸ್ಥಾನಗಳಲ್ಲಿವೆ.

ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಇಳಿಕೆ ಆಯ್ತು? ಇಲ್ಲಿದೆ ಜೂನ್ 20ರ ದರಪಟ್ಟಿ
ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಇಳಿಕೆ ಆಯ್ತು? ಇಲ್ಲಿದೆ ಜೂನ್ 20ರ ದರಪಟ್ಟಿ

ಇಂಧನ ಬೇಡಿಕೆ ಹೆಚ್ಚಲು ಕಾರಣವೇನು?

ಕಳೆದ 15 ವರ್ಷಗಳಲ್ಲಿ ಭಾರತೀಯರಲ್ಲಿ ತಲಾದಾಯ ಹೆಚ್ಚಾಗಿದೆ ಮತ್ತು ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿ ಗಣನೀಯವಾಗಿ ಸುಧಾರಿಸಿದೆ. ಇದರಿಂದಾಗಿ ದೇಶದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂಧನದ ಬೇಡಿಕೆಗೆ ಮತ್ತಷ್ಟು ವೇಗ ನೀಡಿದೆ. ಪ್ರಸ್ತುತ ಭಾರತದಲ್ಲಿ ಪ್ರತಿ ವರ್ಷಕ್ಕೆ 40 ಮಿಲಿಯನ್ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಪೆಟ್ರೋಲ್ ಬಳಕೆ ಆಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಎಷ್ಟೇ ಏರಿಳಿತಗಳಿದ್ದರೂ, ದೇಶದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಹೆದ್ದಾರಿಗಳು ಮತ್ತು ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಲಿದೆ ಎಂದು ತೈಲ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+