ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ ತಂಟೆಗೆ ಬಂದ್ರೆ ಅಷ್ಟೇ!' ಇರಾನ್ ಅಧ್ಯಕ್ಷರಿಗೆ ಟ್ರಂಪ್ ಖಡಕ್ ವಾರ್ನಿಂಗ್!

|
Google Oneindia Kannada News

ವಾಷಿಂಗ್ಟನ್, ಜುಲೈ 23: 'ಅಮೆರಿಕಕ್ಕೆ ಯಾವುದೇ ಕಾರಣಕ್ಕೂ ಬೆದರಿಕೆ ಒಡ್ಡುವುದಕ್ಕೆ ಬರಬೇಡಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅಧ್ಯಕ್ಷ ಹಸನ್ ರೌಹಾನಿಗೆ ಎಚ್ಚರಿಕೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಕ್ಯಾಪಿಟಲ್ ಲೆಟರ್ ನಲ್ಲಿ ತಮ್ಮ ಎಚ್ಚರಿಕೆಯನ್ನು ನೀಡಿರುವ ಡೊನಾಲ್ಡ್ ಟ್ರಂಪ್, 'ಇರಾನ್ ಪ್ರೆಸಿಡೆಂಟ್ ರೌಹಾನಿಗೆ: ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಮತ್ತೊಮ್ಮೆ ಬೆದರಿಕೆ ನೀಡುವುದಕ್ಕೆ ಬರಬೇಡಿ. ಅದರ ಪರಿಣಾಮವನ್ನು ಇತಿಹಾಸದಲ್ಲೇ ಕೇಳಿರದಂತೆ ನೀವು ಮುಂದೆ ಎದುರಿಸಬೇಕಾಗಬಹುದು. ನಿಮ್ಮ ಉನ್ಮತ್ತ ಹೇಳಿಕೆಗಳಿಗೆ, ಹಿಂಸೆಗಳ ಜೊತೆ ನಾವು ನಿಂತಿಲ್ಲ. ಎಚ್ಚರಿಕೆಯಿಂದಿರಿ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Trump warns Iranian President to never threaten US

ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್

ಇತ್ತೀಚೆಗಷ್ಟೇ ತೆಹ್ರಾನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಹಸನ್ ರೌಹಾನಿ, 'ಅಮೆರಿಕದವರಿಗೆ ಗೊತ್ತಿರಲಿ, ಇರಾನಿನೊಂದಿಗೆ ಯುದ್ಧಮಾಡುವುದು ಎಂದರೆ ಅದು ಎಲ್ಲ ಯುದ್ಧಗಳ ತಾಯಿಯಿದ್ದಂತೆ, ಇರಾನಿನೊಂದಿಗೆ ಶಾಂತಿ ಕಾಪಾಡಿಕೊಳ್ಳುವುದು ಎಲ್ಲ ಶಾಂತಿ ಒಪ್ಪಂದದ ತಾಯಿ ಇದ್ದಂತೆ' ಎಂದಿದ್ದರು. ಅಷ್ಟೇ ಅಲ್ಲದೆ, 'ಸಿಂಹದ ಬಾಲದೊಂದಿಗೆ ಆಟವಾಡಬೇಡಿ. ಮುಂದೊಂದು ದಿನ ನೀವು ಪಶ್ಚಾತ್ತಾಪ ಪಡೆಬೇಕಾಗುತ್ತದೆ' ಎಂದು ರೌಹಾನಿ ತಮ್ಮ ಮಾತಿನ ನಡುವಲ್ಲಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದರು.

ಇರಾನಿನೊಂದಿಗಿನ ಅಣು ಒಪ್ಪಂದವನ್ನು ಅಮೆರಿಕ ಹಿಂಪಡೆದ ಹಿನ್ನೆಲೆಯಲ್ಲಿ ಈ ಮಾತಿನ ಯುದ್ಧ ಆರಂಭವಾಗಿದೆ.

English summary
"Never ever threaten the United States," United States (US) President Donald Trump warned his Iranian counterpart Hassan Rouhani on Sunday (local time).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X