ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್

|
Google Oneindia Kannada News

ಹೆಲ್ಸಿಂಕಿ (ಫಿನ್ ಲ್ಯಾಂಡ್), ಜುಲೈ 16: ರಷ್ಯಾ ಹಾಗೂ ಅಮೆರಿಕ ಮಧ್ಯದ ಸಂಬಂಧವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಹಾಗೂ ವ್ಲಾಡ್ಮಿರ್ ಪುಟಿನ್ ಐತಿಹಾಸಿಕ ಭೇಟಿಯಾದರು. ರಷ್ಯಾದ ಗುಪ್ತಚರ ದಳವು ಅಮೆರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಟ್ರಂಪ್ ವಿರುದ್ಧದ ಆರೋಪವನ್ನು 'ಮೂರ್ಖತನ' ಎಂದು ಕರೆದಿದ್ದಾರೆ.

"ನನಗೆ ಅನ್ನಿಸುತ್ತದೆ ಇದು ಉತ್ತಮ ಆರಂಭ: ಎಲ್ಲರಿಗೂ ಬಹಳ ಬಹಳ ಉತ್ತಮ ಆರಂಭ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮದವರಿಗೆ ಹೇಳಿದ್ದಾರೆ. ದುಭಾಷಿಗಳು ಎದುರು ಇರುವಾಗ ಟ್ರಂಪ್ ಹಾಗೂ ಪುಟಿನ್ ಮಧ್ಯೆ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ.

ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್

ಈ ಭೇಟಿಯನ್ನು ಹಲವು ವಿಮರ್ಶಕರು ವಿರೋಧಿಸಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಗುಪ್ತಚರ ಸಂಸ್ಥೆಯ ಕೈವಾಡ ಇತ್ತು ಎಂಬ ಆರೋಪದಲ್ಲಿ ಹನ್ನೆರಡು ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಲಾಗಿತ್ತು. ಆ ಕಾರಣಕ್ಕೆ ಈ ಭೇಟಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

Donald Trump

ಆದರೆ, ಟ್ರಂಪ್ ರಷ್ಯಾ ಜತೆಗೆ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದುವ ಬಗ್ಗೆ ಮನವೊಲಿಸಿದ್ದರು. ಸಿರಿಯಾ, ಉಕ್ರೇನ್ ಮತ್ತು ಚೀನಾದ ವಿಚಾರಗಳ ಬಗ್ಗೆ ಚರ್ಚೆ ನಡೆಸುವುದನ್ನು ಎದುರು ನೋಡುವುದಾಗಿ ಹೇಳಿದ್ದರು.

ಇನ್ನು ಇದೇ ವೇಳೆ ಯಶಸ್ವಿಯಾಗಿ ಫುಟ್ಬಾಲ್ ವಿಶ್ವಕಪ್ ಅನ್ನು ಆಯೋಜಿಸಿದ್ದಕ್ಕೆ ವಿಶ್ವನಾಯಕರಿಂದ ಪುಟಿನ್ ಅಭಿನಂದನೆ ಸ್ವೀಕರಿಸಿದ್ದರು. ಇನ್ನು ಅಮೆರಿಕದಲ್ಲೇ ಟ್ರಂಪ್ ನಡೆಗೆ ವಿರೋಧ ವ್ಯಕ್ತಪಡಿಸಿದ್ದವರಿಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದರು ಟ್ರಂಪ್.

English summary
Presidents Donald Trump and Vladimir Putin held a historic summit on Monday vowing their determination to forge a reset of troubled relations between the world's greatest nuclear powers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X