ದ್ವಾದಶ ರಾಶಿಗಳಲ್ಲಿ ಯಾರಿಗೆ ಒಲಿಯುವುದು ಅದೃಷ್ಟ? ಯಾರನ್ನು ಕಾಡುವುದು ಸಂಕಷ್ಟ? ಏನು ಹೇಳುತ್ತದೆ ಇಂದಿನ ನಿತ್ಯ ಭವಿಷ್ಯ
Horoscope May 3: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಾಮಾನ್ಯವಾಗಿ ಸಂಜೆ 4:30 ರಿಂದ 6:00 ರವರೆಗೆ ಇರುತ್ತದೆ. ಮೇ 3 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಕೆಲಸದ ಒತ್ತಡದಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ಆರ್ಥಿಕವಾಗಿ ಲಾಭವಾಗುವುದು. ಮನೆಯಲ್ಲಿ ಶುಭ ಕಾರ್ಯ ನಡೆಯುವ ಬಗ್ಗೆ ಮಾತುಕತೆ ಆಗುವುದು. ಹೊಸಬರ ಜೊತೆ ಮಾತನಾಡುವಾಗ ಎಚ್ಚರ ಇರಲಿ.

ವೃಷಭ ರಾಶಿ:
ಆಸ್ತಿ ಖರೀದಿ ಪ್ರಯತ್ನಗಳು ಫಲ ನೀಡುತ್ತವೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳಿಗೆ ತೆರೆ ಬೀಳುವುದು. ಆರೋಗ್ಯ ಸುಧಾರಿಸುವುದು.
ಮಿಥುನ ರಾಶಿ:
ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದು. ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಮಾತೇ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಂಭವ ಇದೆ.
ಕರ್ಕಾಟಕ ರಾಶಿ:
ಕೈಗೆತ್ತಿಕೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಈ ಮೂಲಕ ಮಾನಸಿಕ ನೆಮ್ಮದಿ ಸಿಗುವುದು. ಸಾಲಗಾರರ ಕಿರುಕುಳ ಸಮಸ್ಯೆ ಉಂಟು ಮಾಡಬಹುದು.
ಸಿಂಹ ರಾಶಿ:
ಕೋಪದ ಕೈಗೆ ಬುದ್ದಿ ಕೊಡಲು ಹೋಗಬೇಡಿ. ಯಾವುದೇ ವಿಚಾರದಲ್ಲಿಯೂ ಅಂತಿಮ ನಿರ್ಧಾರಕ್ಕೆ ಬರಬೇಡಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ವೆಚ್ಚಗಳು ಹೆಚ್ಚಾಗಬಹುದು.
ಕನ್ಯಾ ರಾಶಿ:
ಬಹಳ ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆ ಬಗೆಹರಿಯುತ್ತದೆ. ಮನೆಯಲ್ಲಿರುವ ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಆರ್ಥಿಕವಾಗಿ ಯಾರನ್ನೂ ಅವಲಂಬಿಸಬೇಡಿ.
ತುಲಾ ರಾಶಿ:
ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ಮನೆಗೆ ಅಲಂಕಾರ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಬಹುದಿನಗಳ ಕನಸು ಈಡೇರುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ವೃಶ್ಚಿಕ ರಾಶಿ:
ಕೆಲವು ಗೊಂದಲಗಳು ನಿಮ್ಮನ್ನು ಕಾಡಬಹುದು. ಆದರೆ ತಾಳ್ಮೆಯಿಂದಿರುವುದು ಉತ್ತಮ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಸಂಬಂಧಿಕರಿಂದ ಸಹಾಯ ಸಿಗುವುದು.
ಧನು ರಾಶಿ:
ಸ್ನೇಹಿತರ ಸಹಾಯದಿಂದ ಮಹತ್ವದ ಕೆಲಸ ಪೂರ್ಣಗೊಳ್ಳುವುದು. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗುವುದು. ವ್ಯವಹಾರ ವಿಸ್ತರಣೆಗೆ ಯೋಜನೆಗಳನ್ನು ರೂಪಿಸುವಿರಿ.
ಮಕರ ರಾಶಿ:
ಮನೆ ನಿರ್ಮಾಣ ಕಾರ್ಯಗಳು ವೇಗಗೊಳ್ಳುತ್ತವೆ. ಆಧ್ಯಾತ್ಮಿಕ ಪ್ರಯಾಣಗಳಿಗೆ ಯೋಜನೆಗಳನ್ನು ರೂಪಿಸಲಾಗುವುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಬಹು ಕಾಲದಿಂದ ಕಾಡುತ್ತಿದ್ದ ಸಮಸ್ಯೆ ಬಗೆಹರಿಯುವುದು.
ಕುಂಭ ರಾಶಿ:
ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಆರೋಗ್ಯ ಸ್ಥಿರವಾಗಿರುವುದು. ನಿಮ್ಮ ಆಲೋಚನೆಗೆ ಮನೆಯವರು ಬೆಂಬಲವಾಗಿ ನಿಲ್ಲುವರು.
ಮೀನ ರಾಶಿ:
ಪ್ರತಿಯೊಂದು ಕೆಲಸದಲ್ಲೂ ಎಚ್ಚರಿಕೆ ಅಗತ್ಯ. ಅನಗತ್ಯಾಗಿ ಯಾರೊಂದಿಗೂ ಮಾತನಾಡಲು ಹೋಗಬೇಡಿ. ಹಣಕಾಸಿನ ವ್ಯವಹಾರಗಳಲ್ಲಿ ಮೋಸ ಹೋಗುವ ಸಾಧ್ಯತೆ ಇದೆ,.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications