Sagar Adani: ಇಂಧನ ಸಮಸ್ಯೆಗೆ ದೇಶೀಯ ವಿದ್ಯುತ್ ಒಂದೇ ಮದ್ದು: ಸಾಗರ್ ಅದಾನಿ ಮಹತ್ವದ ಮಾಹಿತಿ
Sagar Adani: ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತಲಿವೆ. ಈ ಹಿನ್ನೆಲೆಯಲ್ಲಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಗರ್ ಅದಾನಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಬಾಹ್ಯ ಇಂಧನ ಸಮಸ್ಯೆಗಳಿಗೆ ಭಾರತದ ಅತ್ಯಂತ ಪರಿಣಾಮಕಾರಿ ದೀರ್ಘಕಾಲದ ಪರಿಹಾರವೆಂದರೆ ದೇಶದ ಆರ್ಥಿಕತೆಯನ್ನು ವೇಗವಾಗಿ ವಿದ್ಯುದೀಕರಣಗೊಳಿಸುವುದು ಮತ್ತು ದೊಡ್ಡ ಪ್ರಮಾಣದ ದೇಶೀಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವುದು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಸಾಗರ್ ಅದಾನಿ ಅವರು, ಇಂದಿನ ಕಾಲದಲ್ಲಿ ರಾಷ್ಟ್ರೀಯ ಸ್ಥಿತಿಸ್ಥಾಪಕತ್ವದ ಎಂಬುದರ ಅರ್ಥವು ಇಂಧನದ ಲಭ್ಯತೆ, ಅದರ ಕೈಗೆಟುಕುವ ದರ ಮತ್ತು ಪೂರೈಕೆಯ ಭದ್ರತೆಯೊಂದಿಗೆ ಹೆಚ್ಚು ನಿಕಟವಾಗಿ ಬೆಸೆದುಕೊಂಡಿದೆ ಎಂದು ಹೇಳಿದರು. ಒಂದು ರಾಷ್ಟ್ರದ ಸಾಮರ್ಥ್ಯವು ಈಗ ಅದು ಇಂಧನವನ್ನು ಎಷ್ಟು ಸುಲಭವಾಗಿ ಮತ್ತು ಅಗ್ಗವಾಗಿ ಪಡೆದುಕೊಳ್ಳುತ್ತದೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಸಂಘರ್ಷಗಳು ಪ್ರಪಂಚದ ಒಂದು ಭಾಗದಲ್ಲಿ ಉಂಟಾಗುವ ಅಡೆತಡೆಗಳು ಹೇಗೆ ಹಡಗು ಸಂಚಾರ ಮಾರ್ಗಗಳು, ಸರಕುಗಳ ಬೆಲೆಗಳು ಮತ್ತು ಪೂರೈಕೆ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಸಾಬೀತುಪಡಿಸಿವೆ. ಇಂತಹ ಜಾಗತಿಕ ಏರಿಳಿತಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ, ದೇಶಾಗಳಾದ್ಯಂತ ಆರ್ಥಿಕ ಸ್ಥಿರತೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ಹೇಳುವ ಮೂಲಕ ಅವರು ಗಮನ ಸೆಳೆದರು.

ರಾಷ್ಟ್ರಗಳ ಮುಂದಿರುವ ಪ್ರಶ್ನೆ ಈಗ ಕೇವಲ ಆರ್ಥಿಕವಾಗಿ ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ದಿಢೀರ್ ಎದುರಾಗುವ ಅಡೆತಡೆಗಳನ್ನು ಎಷ್ಟು ದೃಢವಾಗಿ ತಡೆದುಕೊಳ್ಳಬಹುದು ಎಂಬುದರ ಮೇಲಿದೆ. ಈ ಸವಾಲು ವಿಶೇಷವಾಗಿ ಭಾರತಕ್ಕೆ ಹೆಚ್ಚು ಪ್ರಸ್ತುತವಾಗಿದೆ. ಏಕೆಂದರೆ ಭಾರತದ ಆರ್ಥಿಕ ಬೆಳವಣಿಗೆಯ ಮಹತ್ವಾಕಾಂಕ್ಷೆಗಳು, ಕೈಗಾರಿಕಾ ವಿಸ್ತರಣೆ ಮತ್ತು ಏರುತ್ತಿರುವ ಜೀವನಮಟ್ಟಕ್ಕೆ ಮುಂಬರುವ ದಿನಗಳಲ್ಲಿ ದಶಕಗಳಲ್ಲಿ ಬೃಹತ್ ಪ್ರಮಾಣದ ಮತ್ತು ಸಾಕಷ್ಟು ಇಂಧನ ಪೂರೈಕೆಯ ಅಗತ್ಯವಿದೆ ಎಂದು ಹೇಳಿದರು.
ಭಾರತದ ಅಭಿವೃದ್ಧಿಯ ಆದ್ಯತೆಗಳು ಇಂಧನದ ಲಭ್ಯತೆಯೊಂದಿಗೆ ಆಳವಾಗಿ ಬೆಸೆದುಕೊಂಡಿವೆ ಎಂದು ಸಾಗರ್ ಅದಾನಿ ಅವರು ಹೇಳಿದರು. ನೀರಿನ ಶುದ್ಧೀಕರಣ, ಪಂಪಿಂಗ್ ಮತ್ತು ಲವಣಮುಕ್ತಗೊಳಿಸುವ ಪ್ರಕ್ರಿಯೆಗಳು ಸಂಪೂರ್ಣವಾಗಿ ವಿದ್ಯುತ್ ಶಕ್ತಿಯ ಮೇಲೆ ಅವಲಂಬಿತವಾಗಿವೆ. ನೀರಾವರಿ ವ್ಯವಸ್ಥೆಗಳು, ರಸಗೊಬ್ಬರ ಉತ್ಪಾದನೆ, ಕೋಲ್ಡ್ ಸ್ಟೋರೇಜ್ ಮತ್ತು ಸಾಗಣಿಕಾ ವ್ಯವಸ್ಥೆಗಳಿಗೆ ಹೆಚ್ಚಿನ ಇಂಧನದ ಅಗತ್ಯವಿದೆ. ಡೇಟಾ ಸೆಂಟರ್‌ಗಳು, ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳು, ಟೆಲಿಕಾಂ ನೆಟ್‌ವರ್ಕ್‌ಗಳು ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಗಳ ನಿರಂತರ ಕಾರ್ಯನಿರ್ವಹಣೆಗೆ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ಅತ್ಯಗತ್ಯ ಎಂದು ಅವರು ತಿಳಿಸಿದರು.
ಪ್ರಸ್ತುತ ಭಾರತೀಯರ ಸರಾಸರಿ ಇಂಧನ ಬಳಕೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಕಡಿಮೆ ಇದೆ. ಜೀವನಮಟ್ಟ ಸುಧಾರಿಸಿದಂತೆ ಮತ್ತು ನಗರಗಳು ಬೆಳೆದಂತೆ ಇಂಧನದ ಅವಶ್ಯಕತೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಕೈಗಾರಿಕೆಗಳ ಬೆಳವಣಿಗೆಯು ಈ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅವರು ಹೇಳಿದರು.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನಾಗಿ ಮಾಡುವ ದೀರ್ಘಕಾಲೀನ ಗುರಿಯನ್ನು ತಲುಪಬೇಕಾದರೆ ದೇಶಕ್ಕೆ ಕೇವಲ ಹಂತ ಹಂತದ ವಿದ್ಯುತ್ ಉತ್ಪಾದನೆಯ ಬೆಳವಣಿಗೆ ಸಾಕಾಗುವುದಿಲ್ಲ. ಬದಲಿಗೆ ಇಂಧನ, ವಿದ್ಯುತ್ ಮತ್ತು ಸಂಗ್ರಹಣೆಯಲ್ಲಿ ಒಂದು ಬೃಹತ್ ರಚನಾತ್ಮಕ ಜಿಗಿತದ ಅಗತ್ಯವಿದೆ ಎಂದು ಅವರು ಹೇಳಿದರು. ಮುಂದಿನ ಎರಡು ದಶಕಗಳಲ್ಲಿ ಭಾರತಕ್ಕೆ ಸುಮಾರು 2,000 ಗಿಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಸಾಮರ್ಥ್ಯದ ಅಗತ್ಯವಾಗಬಹುದು. ಈ ಬೃಹತ್ ಪ್ರಮಾಣದ ವಿದ್ಯುತ್ ಉತ್ಪಾದಿಸುವಾಗ ಅದು ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲಭ್ಯವಿರಬೇಕು ಮತ್ತು ಹಂತಹಂತವಾಗಿ ಪರಿಸರ ಸ್ನೇಹಿಯಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಪ್ರಾಯೋಗಿಕ ಮತ್ತು ಸಮತೋಲಿತ ನೀತಿಯ ಅಗತ್ಯವನ್ನು ಒತ್ತಿಹೇಳಿದ ಸಾಗರ್ ಅದಾನಿ ಅವರು, ನವೀಕರಿಸಬಹುದಾದ ಇಂಧನವು ವೇಗವಾಗಿ ವಿಸ್ತರಿಸುವುದನ್ನು ಮುಂದುವರಿಸುತ್ತದೆ ಮತ್ತು ಭಾರತದ ಭವಿಷ್ಯಕ್ಕೆ ಇದು ಅತ್ಯಂತ ಪ್ರಮುಖವಾಗಿದೆ. ಆದರೂ ನಿರಂತರ ಪೂರೈಕೆಯ ಕೊರತೆಯ ಕಾರಣಗಳಿಂದಾಗಿ ಕೇವಲ ನವೀಕರಿಸಬಹುದಾದ ಇಂಧನವೊಂದೇ ಎಲ್ಲಾ ಸವಾಲುಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ಭಾರತವು ವೈವಿಧ್ಯಮಯ ಇಂಧನ ಮೂಲಗಳ ಮಿಶ್ರಣವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸೌರ ಮತ್ತು ಪವನ ಶಕ್ತಿ, ಜಲವಿದ್ಯುತ್, ದಕ್ಷ ಉಷ್ಣ ವಿದ್ಯುತ್ ಉತ್ಪಾದನೆ, ಪರಮಾಣು ಶಕ್ತಿ, ಇಂಧನ ಸಂಗ್ರಹಣಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಅಥವಾ ಅನಿಲದ ಬದಲು ವಿದ್ಯುತ್ ಬಳಕೆಯನ್ನು ಹೆಚ್ಚಿಸುವುದು ಮುಖ್ಯ. ವಿದೇಶಿ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾದಷ್ಟೂ ದೇಶದ ಆರ್ಥಿಕತೆಗೆ ಬಲ ಸಿಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದರೂ, ಸ್ವದೇಶಿ ವಿದ್ಯುತ್ ಉತ್ಪಾದನೆಯಿಂದಾಗಿ ದೇಶದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.
ಭಾರತದ ನೀತಿ ಪರಿಸರವನ್ನು ಉಲ್ಲೇಖಿಸಿದ ಸಗಾರ್ ಅದಾನಿ ಅವರು, ಮೂಲಸೌಕರ್ಯ ಸುಧಾರಣೆಗಳು, ತ್ವರಿತ ಅನುಮೋದನೆಗಳು, ಸುಧಾರಿತ ವಿದ್ಯುತ್ ಪ್ರಸರಣ ಜಾಲಗಳು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ನಿರಂತರ ಬೆಂಬಲವು ದೀರ್ಘಕಾಲೀನ ಹೂಡಿಕೆಗಳಿಗೆ ಬಲವಾದ ಪರಿಸರವನ್ನು ನಿರ್ಮಿಸಲು ಸಹಾಯ ಮಾಡಿವೆ ಎಂದು ಹೇಳಿದರು. ನೀತಿಗಳ ನಿರಂತರತೆ ಮತ್ತು ಕಾರ್ಯಗತಗೊಳಿಸುವಿಕೆಗೆ ಒತ್ತು ನೀಡುವ ಆಡಳಿತ ದೇಶದ ಸ್ಥೈರ್ಯವನ್ನು ನಿರ್ಮಿಸಲು ಅತ್ಯಂತ ಪ್ರಮುಖವಾಗಿದೆ.
ಅದಾನಿ ಗ್ರೂಪ್ ಪಾತ್ರದ ಬಗ್ಗೆ ಮಾತನಾಡಿದ ಸಾಗರ್ ಅದಾನಿ ಅವರು, ಸಂಸ್ಥೆ ಪ್ರತ್ಯೇಕ ಆಸ್ತಿಗಳನ್ನು ನಿರ್ಮಿಸುವುದಕ್ಕಿಂತ ಸಮಗ್ರ ಮೂಲಸೌಕರ್ಯ ವ್ಯವಸ್ಥೆಗಳನ್ನು ರೂಪಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆ, ಇಂಧನ ಸಂಗ್ರಹಣೆ, ವಿದ್ಯುತ್ ಪ್ರಸರಣ ಜಾಲಗಳು, ಗ್ರೀನ್ ಹೈಡ್ರೋಜನ್, ಲಾಜಿಸ್ಟಿಕ್ಸ್, ಬಂದರುಗಳು, ವಿಮಾನ ನಿಲ್ದಾಣಗಳು ಹಾಗೂ ಡಿಜಿಟಲ್ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗಳು ಸೇರಿವೆ.
ಇಂಧನ ಪರಿವರ್ತನೆಗೆ ಸಂಬಂಧಿಸಿದಂತೆ 100 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡುವ ಬದ್ಧತೆಯನ್ನು ಹೊಂದಿದೆ. ಈ ಬೃಹತ್ ಹೂಡಿಕೆಯು ಭಾರತದಲ್ಲಿರುವ ಅಗಾಧ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಈ ಯೋಜನೆಗಳನ್ನು ಅತ್ಯಂತ ವೇಗವಾಗಿ ಜಾರಿಗೆ ತರುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಇನ್ನಷ್ಟು ಇಂಧನ ಅಗತ್ಯವಿದೆಯೇ ಎಂಬುದೇ ಈಗ ಮುಖ್ಯ ಪ್ರಶ್ನೆಯಲ್ಲ. ಅಗತ್ಯವಿರುವ ಮೂಲಸೌಕರ್ಯವನ್ನು ಎಷ್ಟು ವೇಗವಾಗಿ ನಿರ್ಮಿಸಬಹುದು ಎಂಬುದೇ ಪ್ರಮುಖ ವಿಷಯ. ಭಾರತವು ದೊಡ್ಡ ಪ್ರಮಾಣದಲ್ಲಿ ಸಮೃದ್ಧ, ಕೈಗೆಟುಕುವ ಮತ್ತು ಹೆಚ್ಚು ವಿದ್ಯುತ್ ಪೂರೈಕೆ ಮಾಡಲು ಯಶಸ್ವಿಯಾದರೆ ಅದು 1.4 ಬಿಲಿಯನ್ ಜನರ ಭವಿಷ್ಯವನ್ನು ಭದ್ರಗೊಳಿಸಲಿದೆ. ಅಲ್ಲದೆ ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಸ್ಥಿರತೆ ಒದಗಿಸುವಲ್ಲಿಯೂ ಪ್ರಮುಖ ಪಾತ್ರವನ್ನು ಕೂಡ ವಹಿಸುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications