ಈ ರಾಶಿಯವರು ಇಂದು ಭಾರೀ ಎಚ್ಚರಿಕೆಯಿಂದ ಇರಬೇಕು; ಹಣದ ಸಮಸ್ಯೆ ಕಾಡುವುದು, ತಾಳ್ಮೆ ಅಗತ್ಯ

Horoscope July 18: ಇಂದಿನ ರಾಶಿ ಭವಿಷ್ಯದ ವಿವರವನ್ನು ನೀಡಲಾಗಿದೆ. ಹಾಗಾದ್ರೆ ನಿಮ್ಮ ಜಾತಕ ಹೇಗಿರಲಿದೆ ಎಂದು ನೋಡಬೇಕೆ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ ತಿಳಿಯಿರಿ.

ಮೇಷ ರಾಶಿ (Aries): ಇಂದು ಸಂತೋಷ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿದ ದಿನವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಇತರರ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ. ವಾಹನ ಚಲಾಯಿಸುವಾಗ ತೀವ್ರ ಎಚ್ಚರಿಕೆ ವಹಿಸಿ.

ವೃಷಭ ರಾಶಿ (Taurus): ಬಹಳ ದಿನಗಳ ನಂತರ ಹಳೆಯ ಸ್ನೇಹಿತನನ್ನು ಭೇಟಿಯಾಗುವಿರಿ. ನಿಮ್ಮ ವಿರೋಧಿಗಳ ಪ್ರಭಾವದಿಂದ ಯಾವ ನಿರ್ಧಾರಗಳನ್ನು ಕೂಡಾ ತೆಗೆದುಕೊಳ್ಳಬೇಡಿ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಉದ್ಭವಿಸಬಹುದು.

Horoscope July 18 2026 Daily Astrology Predictions for All 12 Zodiac Signs Know Complete details

ಮಿಥುನ ರಾಶಿ (Gemini): ಮಕ್ಕಳ ನಡವಳಿಕೆ ವರ್ತಣೆ ಬಗ್ಗೆ ಗಮನ ಇರಲಿ. ಮಕ್ಕಳಿಂದ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ಕೆಲಸದ ಬಗ್ಗೆಯೂ ಚಿಂತೆ ಕಾಡಬಹುದು.

ಕರ್ಕಾಟಕ ರಾಶಿ (cancer): ಯಾವುದೇ ರೀತಿಯ ಅಪಾಯಕಾರಿ ಪ್ರಯತ್ನಗಳಿಗೆ ಕೈ ಹಾಕಬೇಡಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅನುಭವಿ ವ್ಯಕ್ತಿಯ ಸಲಹೆ ಪಡೆಯಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಚೇರಿ ವಿವಾದಗಳು ಹೆಚ್ಚಾಗಬಹುದು. ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಲು ಯತ್ನಿಸಿ.

ಸಿಂಹ ರಾಶಿ (Leo): ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸೂಚನೆಗಳಿವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒಡಹುಟ್ಟಿದವರು ನೆರವಾಗುವರು. ಮದುವೆಗೆ ಸಂಬಂಧಿಸಿದ ಯಾವುದೇ ಅಡೆತಡೆಗಳು ದೂರವಾಗುವುದು. ಕೋಪದ ಮೇಲೆ ನಿಯಂತ್ರಣವಿರಲಿ.

ಕನ್ಯಾರಾಶಿ (Virgo): ಪ್ರತಿಯೊಂದು ಕೆಲಸವನ್ನು ಚಿಂತನಶೀಲವಾಗಿ ನಿರ್ವಹಿಸಬೇಕಾಗುತ್ತದೆ. ಕೆಲಸದ ಒತ್ತಡ ಹೆಚ್ಚಾಗುವುದು. ತಾಳ್ಮೆ ಕಳೆದುಕೊಳ್ಳಬೇಡಿ. ಅಪರಿಚಿತರೊಂದಿಗೆ ಹಣಕಾಸಿನ ವಹಿವಾಟುಗಳನ್ನು ಮಾಡಬೇಡಿ. ನಿಂತು ಹೋಗಿರುವ ಕೆಲಸ ಮತ್ತೆ ಪುನರಾರಂಭವಾಗುವುದು.

ತುಲಾ ರಾಶಿ (Libra): ಇಂದಿನ ದಿನ ನಿಮ್ಮ ಪಾಲಿಗೆ ಸಕಾರಾತ್ಮಕವಾಗಿರಲಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಎಲ್ಲಾ ಕೆಲಸಗಳನ್ನು ಪೂರೈಸುವಿರಿ. ಯಾರಿಗೂ ಅನಗತ್ಯವಾಗಿ ಸಲಹೆ ನೀಡಲು ಹೋಗಬೇಡಿ. ಪ್ರಯಾಣ ಮಾಡುವಾಗ ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

ವೃಶ್ಚಿಕ ರಾಶಿ (Scorpio): ವ್ಯವಹಾರದಲ್ಲಿ ತೊಡಗಿರುವವರಿಗೆ ಇಂದು ಲಾಭ ಮತ್ತು ಪ್ರಗತಿಯ ದಿನ. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರ ಗೌರವ ಹೆಚ್ಚಾಗುವುದು. ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.

ಧನು ರಾಶಿ (Sagitarius): ಇಂದು ಅದೃಷ್ಟ ನಿಮ್ಮ ಕಡೆ ಇರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸ ಪೂರ್ಣಗೊಳ್ಳಬಹುದು. ಹಳೆಯ ಸ್ನೇಹಿತನ ಭೇಟಿ ಸಂತೋಷ ತರುತ್ತದೆ. ಪ್ರಮುಖ ಆಸೆ ಈಡೇರುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರಿಗೆ ಅವರ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.

ಮಕರ ರಾಶಿ (Capricorn): ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಯಶಸ್ಸು ಸಿಗುವುದು. ಕೆಲಸದ ಒತ್ತಡ ಸ್ವಲ್ಪ ಹೆಚ್ಚಿರಬಹುದು. ಆದರೆ ನೀವು ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯವಾಗಿರುತ್ತದೆ.

ಕುಂಭ ರಾಶಿ (Aquarius): ಸ್ನೇಹಿತರಿಂದ ವಿಶೇಷ ಉಡುಗೊರೆ ಸಿಗಬಹುದು. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತರಾಗುತ್ತಾರೆ. ಹಳೆಯ ಸಮಸ್ಯೆಯಿಂದ ಮುಕ್ತಿ ಸಿಗುವುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ.

ಮೀನ ರಾಶಿ (Pisces): ಇಂದು ನಿಮಗೆ ಸಂತೋಷದ ದಿನವಾಗಿರಲಿದೆ. ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರಲಿದೆ. ಉಳಿತಾಯ ಅಥವಾ ಹೂಡಿಕೆಗಳಿಗಾಗಿ ಸರಿಯಾಗಿ ಯೋಜಿಸುವುದು ಮುಖ್ಯವಾಗಿರುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+