Amruthadhare Serial: ಕೆಡಿ ಜೈದೇವ್‌ಗೆ ತಕ್ಕ ಶಾಸ್ತಿ: ಗೌತಮ್ ತೆಕ್ಕೆಗೆ ಮತ್ತೆ ಬಂತು ಕುಟುಂಬದ ಆಸ್ತಿ, ಹೊಸ ಟ್ವಿಸ್ಟ್
Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಪಡೆದುಕೊಂಡಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಕೆಡಿ ಜೈದೇವ್ ಅಟ್ಟಹಾಸ ಮುಕ್ತಾಯವಾಗುತ್ತಿದೆ. ಅಹಂಕಾರದಲ್ಲಿ ಮೆರೀತಿದ್ದ ಜೆಡಿಗೆ ತಕ್ಕ ಶಾಸ್ತಿ; ಮತ್ತೆ ಗೌತಮ್ ತೆಕ್ಕೆಗೆ ಬಂತು ಕುಟುಂಬದ ಆಸ್ತಿ ಎನ್ನುವ ಶೀರ್ಷಿಕೆಯೊಂದಿಗೆ ಹೊಸ ಎಪಿಸೋಡ್ ಬಿಡುಗಡೆಯಾಗಿದ್ದು, ಜೈದೇವ್‌ಗೆ ಆ ಕಡೆ ಬೇಬಿ ಕೈಕೊಟ್ಟಿದ್ದಾರೆ; ಈ ಕಡೆ ಆಸ್ತಿಯೂ ಸಹ ಸಂಪೂರ್ಣವಾಗಿ ಕೈ ತಪ್ಪಿದೆ. ಗೌತಮ್ ದಿವಾನ್ ಆಸ್ತಿ ಇನ್ನೇನು ಕೈ ತಪ್ಪಿ ಹೋಗಲಿದೆ ಎನ್ನುವ ಸಂದರ್ಭದಲ್ಲಿ ಗೌತಮ್ ಎಂಟ್ರಿಯಾಗಿದ್ದು, ಎಲ್ಲಾ ಆಸ್ತಿ ಉಳಿಸಿಕೊಳ್ಳುವಲ್ಲಿ ಗೌತಮ್ ಯಶಸ್ವಿಯಾಗಿದ್ದಾನೆ. ಆದರೆ ಜೈದೇವ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಮನೆಯಿಂದ ಬೀದಿಗೆ ಬಿದ್ದಿದ್ದು, ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕೆಡಿ ಜೈದೇವ್‌ಗೆ ಒಂದರ ಮೇಲೊಂದು ಸಂಕಷ್ಟ ಎದುರಾಗುತ್ತಿದ್ದು, ಜೈದೇವ್ ಮಾಡಿರುವ ಕುತಂತ್ರ - ಮೋಸಗಳು ತಿರುಗುಬಾಣವಾಗಿದೆ. ಬೆಟ್ಟಿಂಗ್ ಆ್ಯಪ್ ನಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದ ಜೈದೇವ್ ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ.

ಕೋಟ್ಯಾಂತರ ರೂಪಾಯಿ ಕಳೆದುಕೊಂಡಿರುವ ಜೈದೇವ್‌ಗೆ ಆತನ ಎರಡನೇ ಪತ್ನಿಯೂ ಮೋಸ ಮಾಡಿದ್ದು ಜೈ ಕಂಗಾಲಾಗಿದ್ದ ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಗೌತಮ್ ದಿವಾನ್ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದು, ಆಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಗೌತಮ್ ದಿವಾನ್‌ಗೆ ಅಖಿಲಾಂಡೇಶ್ವರಿ ಅವರ ಸಹಕಾರವು ಆಸ್ತಿ ಉಳಿಸಿಕೊಳ್ಳುವುದಕ್ಕೆ ಸಹಾಯವಾಗಿದೆ.
Amruthadhare Serial: ಗೌತಮ್ ದಿವಾನ್ ಇಸ್ ಬ್ಯಾಕ್
ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್ ಇಸ್ ಬ್ಯಾಕ್ ಆಗಿದೆ. ಗೌತಮ್ ದಿವಾನ ಅದೇ ಹಳೆಯ ಗ್ರ್ಯಾಂಡ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದು ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾನೆ. ಅಲ್ಲದೇ ಉಳಿದ ಬಿಡ್‌ದಾರರು ಕೋಟ್ಯಾಂತರ ರೂಪಾಯಿ ಬಿಡ್ ಮಾಡಿದರೂ ಅದೆಲ್ಲವನ್ನೂ ದಾಟಿ ದೊಡ್ಡ ಮಟ್ಟದಲ್ಲಿ ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡಿದ್ದು, ಆಸ್ತಿಯನ್ನು ಮರಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅಧಿಕಾರಿಗಳು ಎಲ್ಲಾ ಪ್ರಾಪರ್ಟಿಯೂ ಗೌತಮ್ ದಿವಾನ್‌ಗೆ ಸೇರಿದ್ದು ಎಂದು ಘೋಷಣೆ ಮಾಡಿದ್ದಾರೆ.
ಆಸ್ತಿ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ ಗೌತಮ್ ದಿವಾನ್ - ಜೈದೇವ್‌ಗೆ ಕಪಾಳ ಮೋಕ್ಷ ಮಾಡಿದ್ದಾನೆ. ಇಂದಿಗೆ ಈ ಮನೆ ಋಣ ನಿನಗೆ ಮುಗಿಯಿತು. ನಿನ್ನ ಪಾಪದ ಕೊಡ ತುಂಬ್ತು. ಇನ್ನು ಯಾವೊತ್ತು ಈ ಮನೆ ಕಡೆ ತಲೆಯಾಕಬಾರದು ಎಂದು ಜೈದೇವ್‌ನ ಕತ್ತುಪಟ್ಟಿ ಹಿಡಿದುಕೊಂಡು ಮನೆಯಿಂದ ಹೊರ ಹಾಕಿದ್ದಾನೆ. ಈ ದೃಶ್ಯಗಳಿಗಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದ ಪ್ರೇಕ್ಷಕರು ಇದನ್ನು ನೋಡಿ ಖುಷಿಯಾಗಿದ್ದಾರೆ.
Amruthadhare Serial: ಹೊಸ ದೃಶ್ಯಗಳಿಗೆ ಪ್ರೇಕ್ಷಕರು ಖುಷಿ
ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿನ ಇತ್ತೀಚಿನ ದಿನಗಳಲ್ಲಿನ ಹೊಸ ದೃಶ್ಯಗಳಿಗೆ ಪ್ರೇಕ್ಷಕರು ಖುಷಿಯಾಗಿದ್ದಾರೆ. ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಅಂತ್ಯದ ದಿನಗಳು ಕಾಣುತ್ತಿರುವುದು ಪ್ರೇಕ್ಷಕರಲ್ಲಿ ಖುಷಿ ಮೂಡಿಸಿದೆ.












Click it and Unblock the Notifications