Gold Price: ಮಾರುಕಟ್ಟೆಯಲ್ಲಿ ಅಚ್ಚರಿಯ ಬೆಳವಣಿಗೆ, ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಕುಸಿತ; ಗ್ರಾಹಕರಿಗೆ ಗುಡ್‌ನ್ಯೂಸ್

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ನಿರಂತರ ಇಳಿಕೆಯತ್ತ ಸಾಗಿದ್ದ ಬಂಗಾರದ ಬೆಲೆ ಕಳೆದ ಎರಡು ದಿನಗಳಲ್ಲಿ ಹೆಚ್ಚಳ ಕಂಡಿತ್ತು. ಇಂದು ಮಂಗಳವಾರ ಜೂನ್ 23ರಂದು ಮತ್ತೆ ಭರ್ಜರಿ ಕುಸಿತ ಕಂಡಿದೆ. ಇಂದು ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಅಚ್ಚರಿಯ ಬೆಳವಣಿಗೆ ಆಗಿದ್ದು. ಈ ಹಿಂದೆ ಏರಿಕೆ ಆಗಿದ್ದ ಪ್ರಮಾಣಕ್ಕಿಂತ ಒಂದೇ ದಿನದಲ್ಲಿ ಅತ್ಯಧಿಕ ಮಟ್ಟದಲ್ಲಿ ಇಳಿಕೆ ಕಂಡಿದೆ. ಚಿನ್ನಾಭರಣ ಖರೀದಿಸುವವರಿಗೆ ಗುಡ್‌ನ್ಯೂಸ್ ಸಿಕ್ಕಿದೆ.

ಜಾಗತಿಕ ಅನಿಶ್ಚಿತತೆ, ರೂಪಾಯಿ ಹಾಗೂ ಡಾಲರ್ ಮೌಲ್ಯದಲ್ಲಿ ಏರಿಳಿತ, ಯುದ್ಧಗಳ ಪರಿಣಾಮವು ವಿಶ್ವದ ಚಿನ್ನದ ಮಾರುಕಟ್ಟೆ ಮೇಲಾಗಿದೆ. ಇದರಿಂದ ಬಂಗಾರದ ವ್ಯವಹಾರ, ಮಾರಾಟವು ಸ್ಥಿರವಾಗಿಲ್ಲ. ಇದರ ನಡುವೆ ಬಂಗಾರ ಮತ್ತು ಬೆಳ್ಳಿಯ ಬೆಲೆ ತೀವ್ರ ಕುಸಿತ ಕಂಡಿದೆ. ಬೆಂಗಳೂರು ಸೇರಿದಂತೆ ಇಂದಿನ ಬೆಲೆ ಹಾಗೂ ನಗರವಾರು ಮಾಹಿತಿ ಇಲ್ಲಿದೆ.

Gold Prices Crash

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

* ಇಂದು ಜೂನ್ 23ರಂದು 22 ಕ್ಯಾರಟ್ 1 ಗ್ರಾಂ ಬಂಗಾರದ ದರವು 190 ರೂಪಾಯಿಯಂತೆ 10 ಗ್ರಾಂಗೆ ಬರೋಬ್ಬರಿ 1900 ರೂಪಾಯಿ ಇಳಿಕೆ ಆಗಿದೆ. ಇದರಿಂದ ಒಟ್ಟು ಚಿನ್ನದ ಬೆಲೆಯು 1,33, 750 ರೂಪಾಯಿ ತಲುಪಿದೆ.

Gold Rate Today: ಇಂದು ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆ; 22k ಬಂಗಾರ ದರದಲ್ಲಿ ಭಾರೀ ಏರಿಕೆ
Gold Rate Today: ಇಂದು ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಗೆ; 22k ಬಂಗಾರ ದರದಲ್ಲಿ ಭಾರೀ ಏರಿಕೆ

* 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 207 ರೂಪಾಯಿಯಂತೆ 10 ಗ್ರಾಂಗೆ ಬರೋಬ್ಬರಿ 2070 ರೂಪಾಯಿ ಇಳಿಕೆ ಆಗಿದೆ. ಇದರಿಂದ ಒಟ್ಟು ಚಿನ್ನದ ಬೆಲೆಯು 1,45, 910 ರೂಪಾಯಿ ಮುಟ್ಟಿದೆ.

* ಇನ್ನೂ 18 ಕ್ಯಾರಟ್ ಗ್ರಾಂಗೆ 155 ರೂಪಾಯಿ ಇಳಿಕೆ ಆಗಿದೆ. ಹತ್ತು ಗ್ರಾಂಗೆ 1550 ರೂಪಾಯಿ ಕುಸಿದು ಒಟ್ಟು ದರ 1,09,440 ರೂಪಾಯಿ ಕಂಡಿದೆ.

ಬೆಳ್ಳಿ ದರದಲ್ಲೂ ಭಾರೀ ಇಳಿಕೆ

ಕೈಗಾರಿಕೆ ಹಾಗೂ ಆಭರಣಕ್ಕೆ ಹೆಚ್ಚಾಗಿ ಬಳಕೆ ಆಗುವ ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡಿದೆ. ಬೆಳ್ಳಿ ಹತ್ತು ಗ್ರಾಂಗೆ 50 ರೂಪಾಯಿ, 100 ಗ್ರಾಂಗೆ 500 ರೂಪಾಯಿ, 1 ಕೆಜಿಗೆ ಬರೋಬ್ಬರಿ 5000 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿ ಖರೀದಿಗೆ 2,45,000 ರೂಪಾಯಿ ವಿನಿಯೋಗಿಸಬೇಕಿದೆ. ಕಳೆದ ಮೂರು ದಿನ ಸ್ಥಿರವಾಗಿದ್ದ ಬೆಲೆ ದಿಢೀರ್ ಇಳಿಕೆ ಕಂಡಿದ್ದು, ಗ್ರಾಹಕರಿಗೆ ಹರ್ಷ ತಂದಿದೆ.

22k ಚಿನ್ನದ (01 ಗ್ರಾಂ) ಇಂದಿನ ಬೆಲೆ ಹೀಗಿದೆ

ಬೆಂಗಳೂರು: 13, 375 ರೂಪಾಯಿ

ಚೆನ್ನೈ: 13,560 ರೂಪಾಯಿ

ಮುಂಬೈ: 13, 375 ರೂಪಾಯಿ

ದೆಹಲಿ: 13,390 ರೂಪಾಯಿ

ಕೊಲ್ಕತ್ತ: 13, 375 ರೂಪಾಯಿ

ಹೈದರಾಬಾದ್:13, 375 ರೂಪಾಯಿ

ಕೇರಳ:13, 375 ರೂಪಾಯಿ

ಪುಣೆ: 13, 375 ರೂಪಾಯಿ

24k ಚಿನ್ನದ (01 ಗ್ರಾಂ) ಇಂದಿನ ಬೆಲೆ ವಿವರ

ಬೆಂಗಳೂರು: 14,793 ರೂಪಾಯಿ

ಚೆನ್ನೈ: 14,591ರೂಪಾಯಿ

ಮುಂಬೈ: 14,606 ರೂಪಾಯಿ

ದೆಹಲಿ: 14,591ರೂಪಾಯಿ

ಕೊಲ್ಕತ್ತ: 14,591ರೂಪಾಯಿ

ಹೈದರಾಬಾದ್: 14,591ರೂಪಾಯಿ

ಕೇರಳ: 14,591ರೂಪಾಯಿ

ಪುಣೆ: 14,591ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+