Bengaluru Auto: ಬೆಂಗಳೂರಲ್ಲಿ 50 ರೂ. ಪಡೆಯುವ ಬದಲು 2,400 ರೂ. ಪಡೆದ ಆಟೋ ಚಾಲಕ, ವೈರಲ್ ಪೋಸ್ಟ್
ಬೆಂಗಳೂರಿನಲ್ಲಿ ಕೆಲವು ಆಟೋ ಚಾಲಕರು ಮಾಡುವ ಕೆಲಸಕ್ಕೆ ಆಟೋ ಚಾಲಕರನ್ನೆಲ್ಲರನ್ನೂ ತಪ್ಪಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ಪ್ರಯಾಣಿಕರೊಬ್ಬರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಪ್ರಯಾಣಿಕರಿಂದ ಆಟೋ ಚಾಲಕರು ದುಬಾರಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರವು ಪದೇ ಪದೇ ಚರ್ಚೆ ಆಗುತ್ತಲ್ಲೇ ಇದೆ. ಅದರಲ್ಲಿಯೂ ಮಳೆ ಬಂದ ಸಂದರ್ಭದಲ್ಲಿ ಅಥವಾ ರಾತ್ರಿ 8 - 10 ಗಂಟೆಯ ನಂತರ ಕೆಲವು ಆಟೋ ಚಾಲಕರು ದುಬಾರಿ ಮೊತ್ತ ಪಾವತಿ ಮಾಡುವಂತೆ ಕೇಳುತ್ತಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಇದೆ. ಆದರೆ ಇದೀಗ ಬೆಂಗಳೂರಿನ ಆಟೋ ಚಾಲಕರೊಬ್ಬರು ಕೇವಲ 300 ರೂಪಾಯಿ ಮೊತ್ತದ ಪ್ರಯಾಣಕ್ಕೆ 2,400 ರೂಪಾಯಿ ಕೇಳಿದರು, ಹಲ್ಲೆಯನ್ನೂ ಮಾಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಬೆಂಗಳೂರಿನ ಆಟೋ ಚಾಲಕರೊಬ್ಬರು ಬೆಂಗಳೂರಿಗೆ ಹೊಸದಾಗಿ ಬಂದ ಇಬ್ಬರಿಂದ ಸುಲಿಗೆ ಮಾಡಿದ್ದಾರೆ. ಅಲ್ಲದೆ ಹಲ್ಲೆಯನ್ನು ನಡೆಸಲಾಗಿದ್ದು, 2,400 ರೂ. ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಲಾಗಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ನಗರಕ್ಕೆ ಬರುವವರ ಈ ರೀತಿ ನಡೆಸಿಕೊಂಡರೆ ಹೇಗೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ದುಬಾರಿ ಮೊತ್ತವನ್ನು ತೆಗೆದುಕೊಂಡರು, ಹದಿಹರೆಯದವರನ್ನು ಥಳಿಸಿದ್ದು, ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಅಲ್ಲದೆ 2,400 ರೂ.ಗಳನ್ನು ಕಿತ್ತುಕೊಂಡಿರುವುದಾಗಿಯೂ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರಿನ ಆಟೋ ರಿಕ್ಷಾ ಚಾಲಕನೊಬ್ಬರು ಈ ರೀತಿ ನಡೆದುಕೊಂಡಿದ್ದಾರೆ ಎಂದೂ ಹೇಳಲಾಗಿದೆ. ವಲಸಿಗರ ಮೇಲೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದೂ ಕೆಲವರು ದೂರಿದ್ದಾರೆ.
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ರೈಲ್ವೆ ನಿಲ್ದಾಣಕ್ಕೆ ಬಂದ ಸ್ವಲ್ಪ ಸಮಯದ ನಂತರ ಹಳ್ಳಿಯಿಂದ ಬಂದಿದ್ದ ಇಬ್ಬರು ಹದಿಹರೆಯದ ಹುಡುಗರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡಲಾಗಿದೆ ಎಂದು ದೂರಲಾಗಿದೆ.
ಸಾನು ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಈ ಬರಹವನ್ನು ಹಂಚಿಕೊಂಡಿದ್ದಾರೆ. ಹುಡುಗರು ಮೊದಲ ಬಾರಿಗೆ ಬೆಂಗಳೂರಿಗೆ ಪ್ರಯಾಣಿಸಿದ್ದರು ಮತ್ತು ಹೊಸೂರು ತಲುಪಲು ದಾರಿ ಹುಡುಕುತ್ತಿದ್ದರು. ರೈಲ್ವೆ ನಿಲ್ದಾಣದಲ್ಲಿ, ಒಬ್ಬ ಆಟೋರಿಕ್ಷಾ ಚಾಲಕ ಅವರನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ಯಲು ಮುಂದಾದನೆಂದು ಹೇಳಲಾಗಿದೆ. ಅಲ್ಲಿಂದ ಅವರು ಮುಂದೆ ಬಸ್ ಹಿಡಿಯಬಹುದು. ಹುಡುಗರಿಗೆ ಶುಲ್ಕ ಪ್ರತಿ ವ್ಯಕ್ತಿಗೆ 50 ರೂ. ಎಂದು ಮೊದಲು ಹೇಳಿದ್ದರು ಎಂದು ಹೇಳಲಾಗಿದೆ. ಆದರೆ ಕೊನೆಯಲ್ಲಿ 2,400 ರೂಪಾಯಿ ಕೊಡುವಂತೆ ಒತ್ತಾಯ ಮಾಡಿದ್ದಾನೆ ಎಂದು ಹೇಳಲಾಗಿದೆ.
Bangalore auto walas are brutal to innocent people!
— Sanu (@SanuThink) June 22, 2026
Hoping to earn their livelihood, two young boys from a village just reached SMVT railway station. They took an auto to Attibele as they wanted to go to Hosur.
After the ride, the auto driver demanded ₹3000 just for 35 km???…














Click it and Unblock the Notifications