Oracle Layoffs: 21,000 ಉದ್ಯೋಗಿಗಳನ್ನ ಮನೆಗೆ ಕಳುಹಿಸಿದ ಟೆಕ್ ದೈತ್ಯ ಒರಾಕಲ್; ಕಾರಣ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ

ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ರಾಂತಿ ಸೃಷ್ಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೇ ಎಐ ಈಗ ಸಾವಿರಾರು ಜನರ ಉದ್ಯೋಗಕ್ಕೆ ಕುತ್ತು ತರುತ್ತಿದೆ. ಪ್ರಖ್ಯಾತ ಜಾಗತಿಕ ಸಾಫ್ಟ್‌ವೇರ್ ಕಂಪನಿಯಾದ ಒರಾಕಲ್ (Oracle) ಕಳೆದ ಕೇವಲ 12 ತಿಂಗಳಲ್ಲಿ ಬರೋಬ್ಬರಿ 21,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಉದ್ಯೋಗ ಕಡಿತಕ್ಕೆ ಅಸಲಿ ಕಾರಣವೇನು?

ಕಂಪನಿಯು ತನ್ನ ಇತ್ತೀಚಿನ ವಾರ್ಷಿಕ ಹಣಕಾಸು ವರದಿಯಲ್ಲಿ ಈ ಅಧಿಕೃತ ಘೋಷಣೆ ಮಾಡಿದ್ದು, ಈ ಭಾರಿ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣ 'AI ತಂತ್ರಜ್ಞಾನದ ಬಳಕೆ' ಎಂದು ನೇರವಾಗಿಯೇ ಒಪ್ಪಿಕೊಂಡಿದೆ. ಒರಾಕಲ್ ತಿಳಿಸಿರುವಂತೆ, "ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಉಂಟಾಗಿದೆ. ಮುಂದಿನ ದಿನಗಳಲ್ಲೂ ಇದು ಮುಂದುವರಿಯುವ ಸಾಧ್ಯತೆಯಿದೆ" ಎಂದು ಸ್ಪಷ್ಟಪಡಿಸಿದೆ. ಅಂದರೆ ಈ ಹಿಂದೆ ಮನುಷ್ಯರು ಮಾಡುತ್ತಿದ್ದ ಕೆಲಸಗಳನ್ನು ಈಗ ಕಂಪನಿಯು ಎಐ ಮೂಲಕ ಅತ್ಯಂತ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಿಸುತ್ತಿದೆ.

Oracle Layoffs

ಈಗ ಒರಾಕಲ್ ಉದ್ಯೋಗಿಗಳ ಸಂಖ್ಯೆ ಎಷ್ಟು?

ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ (ಮೇ 31) ಒರಾಕಲ್ ಕಂಪನಿಯಲ್ಲಿ ಜಾಗತಿಕವಾಗಿ 1,62,000 ಪೂರ್ಣಾವಧಿ ಉದ್ಯೋಗಿಗಳಿದ್ದರು. ಆದರೆ ಈಗ ಈ ಸಂಖ್ಯೆ ಕೇವಲ 1,41,000ಕ್ಕೆ ಕುಸಿದಿದೆ. ಅಮೆರಿಕದಲ್ಲಿ ಸದ್ಯ 49,000 ಜನ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 92,000 ಉದ್ಯೋಗಿಗಳು ಉಳಿದುಕೊಂಡಿದ್ದಾರೆ. ಈ ಬೃಹತ್ ಮಟ್ಟದ ಉದ್ಯೋಗ ಕಡಿತ ಮತ್ತು ಕಂಪನಿಯ ಪುನರ್‌ರಚನೆಗಾಗಿ ಒರಾಕಲ್ ಬರೋಬ್ಬರಿ ₹15,000 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿದೆ.

OpenAI ಜೊತೆಗಿನ ಡೀಲ್

ಒರಾಕಲ್ ಕಂಪನಿಯು ಪ್ರಸ್ತುತ 'OpenAI'ನಂತಹ ಜಾಗತಿಕ ಕಂಪನಿಗಳಿಗಾಗಿ ಅತ್ಯಾಧುನಿಕ ಎಐ ಡೇಟಾ ಸೆಂಟರ್‌ಗಳನ್ನು ನಿರ್ಮಿಸುತ್ತಿದೆ. ಈ ಡೇಟಾ ಸೆಂಟರ್ ನಿರ್ಮಾಣಕ್ಕೆ ಭಾರೀ ಪ್ರಮಾಣದ ಹಣದ ಅಗತ್ಯವಿರುವುದರಿಂದ ಕಂಪನಿಯ ಮೇಲೆ ತೀವ್ರ ಆರ್ಥಿಕ ಒತ್ತಡವಿತ್ತು. ಹಣವನ್ನು ಉಳಿಸುವ ಉದ್ದೇಶದಿಂದಲೇ ವರ್ಷದ ಆರಂಭದಿಂದಲೇ ಗುಟ್ಟಾಗಿ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಲಾಗಿತ್ತು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ

2022ರಲ್ಲಿ ಒರಾಕಲ್ ಸಂಸ್ಥೆಯು 'ಸೆರ್ನರ್' ಎಂಬ ಹೆಲ್ತ್ ರೆಕಾರ್ಡ್ಸ್ ಕಂಪನಿಯನ್ನು 28 ಬಿಲಿಯನ್ ಡಾಲರ್‌ ನೀಡಿ ಖರೀದಿಸಿತ್ತು. ಆಗ ಸಾವಿರಾರು ಹೊಸ ಉದ್ಯೋಗಿಗಳು ಒರಾಕಲ್ ಸೇರಿಕೊಂಡಿದ್ದರು. ಆದರೆ ಈಗ ನಡೆದಿರುವ 21,000 ಜನರ ವಜಾದಿಂದಾಗಿ, ಒರಾಕಲ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆ 2022 ಕ್ಕಿಂತಲೂ ಕೆಳಮಟ್ಟಕ್ಕೆ ತಲುಪಿದೆ.

ಒರಾಕಲ್ ಕಂಪನಿಯು ಅಮೆರಿಕದ ಪ್ರಸಿದ್ಧ ಹೆಲ್ತ್‌ಕೇರ್ ಸಾಫ್ಟ್‌ವೇರ್ ಕಂಪನಿಯಾದ 'ಸೆರ್ನರ್' ಅನ್ನು ಖರೀದಿಸಿತ್ತು. ಆದರೆ, ಈ ವಿಭಾಗ ನಿರೀಕ್ಷಿತ ಮಟ್ಟದಲ್ಲಿ ಲಾಭ ತಂದುಕೊಡದ ಕಾರಣ, ಇತ್ತೀಚಿನ ಉದ್ಯೋಗ ಕಡಿತದಲ್ಲಿ ಈ ಹೆಲ್ತ್‌ಕೇರ್ ಮತ್ತು ಮೆಡಿಕಲ್ ರೆಕಾರ್ಡ್ಸ್ ವಿಭಾಗದ ಉದ್ಯೋಗಿಗಳನ್ನೇ ಅತಿ ಹೆಚ್ಚು ವಜಾಗೊಳಿಸಲಾಗಿದೆ. ಆಶ್ಚರ್ಯಕರ ವಿಷಯವೆಂದರೆ, ಒಂದು ಕಡೆ 21,000 ಉದ್ಯೋಗಿಗಳನ್ನು ತೆಗೆದುಹಾಕಲಾಗಿದ್ದರೂ, ಒರಾಕಲ್ ಕಂಪನಿಯ ಆರ್ಥಿಕ ಪರಿಸ್ಥಿತಿ ಮತ್ತು ಕ್ಲೌಡ್ ಬಿಸಿನೆಸ್ ಅತ್ಯಂತ ಸದೃಢವಾಗಿದೆ. ಎಐ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಕಂಪನಿಯ ದಕ್ಷತೆ ಹೆಚ್ಚಿದೆ ಎಂದು ಹೂಡಿಕೆದಾರರು ನಂಬಿರುವುದರಿಂದ ಒರಾಕಲ್ ಕಂಪನಿಯ ಷೇರುಗಳು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ.

ಒರಾಕಲ್ ಸದ್ಯಕ್ಕೆ ಐಟಿ ಕೆಲಸಗಳಿಗಿಂತ ಹೆಚ್ಚಾಗಿ Generative AI ಮತ್ತು Cloud Computing ಮೇಲೆ ಭಾರೀ ಹೂಡಿಕೆ ಮಾಡುತ್ತಿದೆ. ಮೈಕ್ರೋಸಾಫ್ಟ್ ಮತ್ತು ಒಪನ್ಎಐನಂತಹ ದೈತ್ಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ, ತನ್ನ ಹಳೆಯ ತಂತ್ರಜ್ಞಾನ ವಿಭಾಗದಲ್ಲಿದ್ದ ಉದ್ಯೋಗಿಗಳನ್ನು ತೆಗೆದು, ಎಐಗೆ ಆದ್ಯತೆ ನೀಡುತ್ತಿದೆ. ಇದು ಕೇವಲ ಒರಾಕಲ್ ಕಥೆಯಲ್ಲ. ಗೂಗಲ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್‌ನಂತಹ ಜಾಗತಿಕ ಟೆಕ್ ಕಂಪನಿಗಳು ಸಹ ಇದೇ ಹಾದಿ ಹಿಡಿದಿವೆ. ಕಂಪನಿಗಳು ವೆಚ್ಚ ಕಡಿತ ಮಾಡಲು ಮತ್ತು ಎಐ ತಂತ್ರಜ್ಞಾನಕ್ಕೆ ಹಣ ಹೊಂದಿಸಲು ಹಳೆಯ ಉದ್ಯೋಗಿಗಳನ್ನು ಲೇ-ಆಫ್ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+