ಕರ್ನಾಟಕದ 14 ಕ್ಷೇತ್ರದಲ್ಲಿ ಅಣುಕು ಮತದಾನ ಯಶಸ್ವಿ: ಒಟ್ಟು ಮತಗಟ್ಟೆಗಳ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 26: ದೇಶಾದ್ಯಂತ ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ವೋಟಿಂಗ್ ಏಪ್ರಿಲ್ 19ರಂದು ನಡೆದಿದೆ. ಎರಡನೇ ಹಂತದ ಮತದಾನ ಇಂದು(ಏಪ್ರಿಲ್ 26) ರಂದು ಆರಂಭಗೊಂಡಿದೆ. ಇಂದು ದೇಶದ 13 ರಾಜ್ಯಗಳಲ್ಲಿ ಒಟ್ಟು 88 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಕರ್ನಾಟಕ, ಕೇರಳ, ರಾಜಸ್ಥಾನ, ಮಹರಾಷ್ಟ್ರ ,ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರ,ಸೇರಿದಂತೆ ಜಮ್ಮು ಕಾಶ್ಮೀರದಲ್ಲಿ ಇಂದು ಮತದಾನ ಆರಂಭವಾಗಿದೆ. ಇನ್ನೂ ಕರ್ನಾಟಕದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಮತ ಆರಂಭವಾಗಿದ್ದು, ಈಗಾಗಲೇ ರಾಜ್ಯದ 14 ಕ್ಷೇತ್ರಗಲ್ಲಿ ಅಣುಕು ಮತದಾನ ಆರಂವಾಗಿದ್ದು, ಬಹುತೇಕ ಕಡೆ ಅಣಕು ಮತದಾನ ಯಶಸ್ವಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತಗಟ್ಟೆಗಳ ವಿವರ
ಕೋಲಾರ ಕ್ಷೇತ್ರ
* ಒಟ್ಟು ಮತದಾರರು 17,28,198
* ಒಟ್ಟು ಮತಗಟ್ಟೆಗಳು 2060
ಉಡುಪಿ-ಚಿಕ್ಕಮಗಳೂರು ಕ್ಷೇತ್ರ
* ಒಟ್ಟು ಮತದಾರರು 15,85,162
* ಒಟ್ಟು ಮತಗಟ್ಟೆಗಳು 1842
ಹಾಸನ ಕ್ಷೇತ್ರ
* ಒಟ್ಟು ಮತದಾರರು 15,85,162
* ಒಟ್ಟು ಮತಗಟ್ಟೆಗಳು 2221
ದಕ್ಷಿಣ ಕನ್ನಡ ಕ್ಷೇತ್ರ
* ಒಟ್ಟು ಮತದಾರರು 18,18,127
* ಒಟ್ಟು ಮತಗಟ್ಟೆ 1,876
* ಅತಿ ಸೂಕ್ಷ್ಮ ಮತಗಟ್ಟೆ 171
ಚಿತ್ರದುರ್ಗ ಕ್ಷೇತ್ರ
* ಒಟ್ಟು ಮತದಾರರು 18,56,876
* ಒಟ್ಟು ಮತಗಟ್ಟೆಗಳು 2,168
* ಸೂಕ್ಷ್ಮ ಮತಗಟ್ಟೆಗಳು 326
ತುಮಕೂರು ಕ್ಷೇತ್ರ
* ಒಟ್ಟು ಮತದಾರರು 16,61,834
* ಒಟ್ಟು ಮತಗಟ್ಟೆಗಳು 1846
ಮಂಡ್ಯ ಕ್ಷೇತ್ರ
* ಒಟ್ಟು ಮತದಾರರು 17,79,243
* ಒಟ್ಟು ಮತಗಟ್ಟೆಗಳು 2076
* ಸೂಕ್ಷ್ಮ-ಅತೀಸೂಕ್ಷ್ಮ 693
ಮೈಸೂರು-ಕೊಡಗು ಕ್ಷೇತ್ರ
* ಒಟ್ಟು ಮತದಾರರು 20,92,222
* ಒಟ್ಟು ಮತಗಟ್ಟೆ 2022
* ಸೂಕ್ಷ್ಮ-ಅತೀಸೂಕ್ಷ್ಮ ಮತಗಟ್ಟೆ 435
ಚಾಮರಾಜನಗರ ಕ್ಷೇತ್ರ
* ಒಟ್ಟು ಮತದಾರರು 17,78,310
* ಒಟ್ಟು ಮತಗಟ್ಟೆಗಳು 2000
* ಸೂಕ್ಷ್ಮ ಮತಗಟ್ಟೆಗಳು 353
ಬೆಂ.ಗ್ರಾಮಾಂತರ ಕ್ಷೇತ್ರ
* ಒಟ್ಟು ಮತದಾರರು 28,02,956
* ಒಟ್ಟು ಮತಗಟ್ಟೆಗಳು 2826
* ಸೂಕ್ಷ್ಮ-ಅತೀಸೂಕ್ಷ್ಮ ಮತಗಟ್ಟೆ 03
ಬೆಂಗಳೂರು ಕೇಂದ್ರ ಕ್ಷೇತ್ರ
* ಒಟ್ಟು ಮತದಾರರು 24,34,254
* ಒಟ್ಟು ಮತಗಟ್ಟೆಗಳು 2125
ಬೆಂಗಳೂರು ದಕ್ಷಿಣ ಕ್ಷೇತ್ರ
* ಒಟ್ಟು ಮತದಾರರು 23,41,895
* ಒಟ್ಟು ಮತಗಟ್ಟೆಗಳು 2118
ಬೆಂಗಳೂರು ಉತ್ತರ ಕ್ಷೇತ್ರ
* ಒಟ್ಟು ಮತದಾರರು 32,15,261
* ಒಟ್ಟು ಮತಗಟ್ಟೆಗಳು 2911
ಚಿಕ್ಕಬಳ್ಳಾಪುರ ಕ್ಷೇತ್ರ
* ಒಟ್ಟು ಮತದಾರರು 19,81,347
* ಒಟ್ಟು ಮತಗಟ್ಟೆಗಳು 2326
* ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ 382












Click it and Unblock the Notifications