ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು- ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವೇಗ ಹೆಚ್ಚಳ ಸಾಧ್ಯತೆ

|
Google Oneindia Kannada News

ಬೆಂಗಳೂರು, ನವೆಂಬರ್ 15: ನವೆಂಬರ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಾರ್ಪಣೆಗೊಂಡಿರುವ ಮೈಸೂರಿನಿಂದ ಚೆನ್ನೈಗೆ ಓಡಾಟ ಆರಂಭಿಸಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವೇಗವನ್ನು ಭಾರತೀಯ ರೈಲ್ವೆ ಇಲಾಖೆಯು ಈ ಮಾರ್ಗದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಬೆಂಗಳೂರು ಮಾರ್ಗವಾಗಿ ಚೆನ್ನೈನಿಂದ ಮೈಸೂರಿಗೆ ಚಲಿಸುವ ಈ ವಂದೇ ಭಾರತ್‌ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತದೆ. ಟ್ರ್ಯಾಕ್‌ ಪರಿಸ್ಥಿತಿಯಿಂದ ಈ ಮಾರ್ಗದಲ್ಲಿ ರೈಲು ಗಂಟೆಗೆ ಕೇವಲ 130 ಕಿಮೀ ವೇಗದಲ್ಲಿ ಚಲಿಸುತ್ತಿದೆ. ಚೆನ್ನೈ ಮೈಸೂರು ವಂದೇ ಭಾರತ್‌ನ ಸರಾಸರಿ ವೇಗ ಗಂಟೆಗೆ 75 ರಿಂದ 77 ಕಿಮೀ ಆಗಿದೆ.

ಶತಾಬ್ದಿ, ವಂದೇ ಭಾರತ್‌ ರೈಲು; ವೇಳಾಪಟ್ಟಿ ಬದಲಿಸಲು ಆಗ್ರಹಶತಾಬ್ದಿ, ವಂದೇ ಭಾರತ್‌ ರೈಲು; ವೇಳಾಪಟ್ಟಿ ಬದಲಿಸಲು ಆಗ್ರಹ

ಮುಂದಿನ ಆರು ತಿಂಗಳಿನೊಳಗೆ ಚೆನ್ನೈ ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸರಾಸರಿ ವೇಗವನ್ನು ಹೆಚ್ಚಿಸಲು ಕೆಲಸ ಮಾಡಲಾಗುತ್ತಿದೆ. ಇತರೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ನವದೆಹಲಿಯಿಂದ ವಾರಣಾಸಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ವೇಗವಾಗಿ ಓಡುತ್ತಿದ್ದರೆ ಮುಂಬೈನಿಂದ ಗಾಂಧಿನಗರಕ್ಕೆ ಚಲಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ವೇಗದಲ್ಲಿ ಎರಡನೇ ಸ್ಥಾನದಲ್ಲಿದೆ.

ಗಾಂಧಿನಗರಕ್ಕೆ ಚಲಿಸುವ ರೈಲು 84 ಕಿಮೀ ವೇಗ

ಗಾಂಧಿನಗರಕ್ಕೆ ಚಲಿಸುವ ರೈಲು 84 ಕಿಮೀ ವೇಗ

ನವದೆಹಲಿಯಿಂದ ವಾರಣಾಸಿಗೆ ಚಲಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗರಿಷ್ಠ ಸರಾಸರಿ 95 ಕಿಮೀ ವೇಗದಲ್ಲಿ ಚಲಿಸುತ್ತದೆ. ಮುಂಬೈ ಸೆಂಟ್ರಲ್‌ನಿಂದ ಗಾಂಧಿನಗರಕ್ಕೆ ಚಲಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವೇಗ ಗಂಟೆಗೆ 84 ಕಿಮೀ ವೇಗದಲ್ಲಿ ಚಲಿಸುತ್ತದೆ.

ಅಲ್ಲದೆ ನವದೆಹಲಿಯಿಂದ ಶ್ರೀಮಾತಾ ವೈಷ್ಣೋದೇವಿ ಕತ್ರಾಗೆ ಚಲಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನವದೆಹಲಿ ಗಂಟೆಗೆ 82 ಕಿಮೀ ವೇಗದಲ್ಲಿ ಚಲಿಸಿದರೆ ದೇಶದ ನಾಲ್ಕನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ನವದೆಹಲಿಯಿಂದ ಅಂಬ ಟಂಡೌರಾಗೆ ಚಲಿಸುವ ರೈಲು ಗಂಟೆಗೆ 79 ಕಿಮೀ ವೇಗದಲ್ಲಿ ಚಲಿಸುತ್ತದೆ.

ವಂದೇ ಭಾರತ್, ಕಾಶಿ ದರ್ಶನ ವಿಶೇಷ ರೈಲಿಗೆ ಪ್ರಧಾನಿ ಮೋದಿ ಚಾಲನೆವಂದೇ ಭಾರತ್, ಕಾಶಿ ದರ್ಶನ ವಿಶೇಷ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರಿಗೆ 4 ಗಂಟೆಗೆ 30 ನಿಮಿಷಗಳಲ್ಲಿ ಮುಟ್ಟಬಹುದು

ಬೆಂಗಳೂರಿಗೆ 4 ಗಂಟೆಗೆ 30 ನಿಮಿಷಗಳಲ್ಲಿ ಮುಟ್ಟಬಹುದು

ಬೆಂಗಳೂರು ಮಾರ್ಗವಾಗಿ ಚಲಿಸುವ ಮೈಸೂರು ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಚೆನ್ನೈನಿಂದ ಬೆಂಗಳೂರಿಗೆ 4 ಗಂಟೆಗೆ 30 ನಿಮಿಷಗಳಲ್ಲಿ 336 ಕಿಮೀ ಕ್ರಮಿಸಿದರೆ ಚೆನ್ನೈನಿಂದ ಮೈಸೂರಿಗೆ 6 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಇದೇ ಶತಾಬ್ದಿ ರೈಲು ಚೆನ್ನೈನಿಂದ ಬೆಂಗಳೂರಿಗೆ 4 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದರೆ ಚೆನ್ನೈನಿಂದ ಮೈಸೂರಿಗೆ 7 ಗಂಟೆಗಳಲ್ಲಿ ಪ್ರಯಾಣ ಮುಗಿಸುತ್ತದೆ.

ವೈಫೈ ಮತ್ತು ಆರಾಮದಾಯಕ ಆಸನ

ವೈಫೈ ಮತ್ತು ಆರಾಮದಾಯಕ ಆಸನ

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸೆಮಿ ಹೈಸ್ಪೀಡ್‌ ರೈಲುಗಳಾಗಿದ್ದು, ಇದು ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ ಸಮಯವನ್ನು ಉಳಿಸುತ್ತದೆ. ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್‌ ಆಧಾರಿತ ಆಡಿಯೋ ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಎಲ್ಲೆಡೆ ವೈಫೈ ಹಾಟ್‌ಸ್ಪಾಟ್‌ ಮತ್ತು ಆರಾಮದಾಯಕ ಆಸನಗಳನ್ನು ಹೊಂದಿವೆ.

ಎಕ್ಸೂಕ್ಯೂಟಿವ್‌ ಕ್ಲಾಸ್‌ ಬೋಗಿಗಳು ಕುರ್ಚಿಗಳನ್ನು ಹೊಂದಿದೆ. ಈ ರೈಲು ಹೆಚ್ಚಿನ ಸುರಕ್ಷತೆ ಮತ್ತು ರೈಲ್ವೆ ಹಳಿಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಒತ್ತು ನೀಡಲಾಗಿದೆ. ಆದ್ದರಿಂದ ಸ್ಥಳಿಯ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆಯನನ್ನು ಕವಾಚ್‌ ಅನ್ನು ಅಳವಡಿಸಲಾಗಿದೆ.

ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್‌ ದರ 2,485

ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್‌ ದರ 2,485

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರ ಟಿಕೆಟ್‌ ದರದ ಬಗ್ಗೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಚೆನ್ನೈನಿಂದ ಮೈಸೂರಿಗೆ ಹೊರಡುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಖ್ಯೆ 20607 ರೈಲಿನ ಚೇರ್‌ ಕಾರ್‌ ವರ್ಗದ ಟಿಕೆಟ್‌ ದರ 1,200 ರೂಪಾಯಿ ಆಗಿದ್ದರೆ, ಎಕ್ಸೂಕ್ಯೂಟಿವ್‌ ಕ್ಲಾಸ್‌ ಬೋಗಿಗಳ ಟಿಕೆಟ್‌ ದರ 2,295 ರೂಪಾಯಿ ಆಗಿದೆ.

ಇದೇ ಮೈಸೂರಿನಿಂದ ಚೆನ್ನೈಗೆ ಹೊರಡುವ 20608 ಸಂಖ್ಯೆಯ ರೈಲು ಚೇರ್‌ ಕಾರ್ ದರ 1,365 ರೂಪಾಯಿ ಹಾಗೂ ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್‌ ದರ 2,485 ರೂಪಾಯಿ ಇದೆ. ಇದರಿಂದ ಈ ದರಗಳು ಸಾಮಾನ್ಯ ಜನರಿಗೆ ಈ ದರಗಳಲ್ಲಿ ಪ್ರಯಾಣಿಸಲು ಆಗುವುದಿಲ್ಲ ಟಿಕೆಟ್‌ ದರ ಹೆಚ್ಚಾಗಿರುವುದರಿಂದ ಇದು ಜನರಿಗೆ ಹೆಚ್ಚಿನ ಬೆಲೆಯಾಯಿತು ಎಂಬ ಆಕ್ರೋಶವು ಇದೆ.

English summary
The Indian Railway Department is likely to increase the speed of South India's first Vande Bharat Express train, which has started running from Mysore to Chennai, which was dedicated to Prime Minister Narendra Modi on November 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X