Mysuru-Chennai Vande Bharat Express: ಮೈಸೂರು- ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ವೇಳಾಪಟ್ಟಿಯಲ್ಲಿ ಬದಲಾವಣೆ
ಮೈಸೂರು, ಏಪ್ರಿಲ್.03: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ತಮಿಳುನಾಡಿನ ಚೆನ್ನೈ ನಡುವೆ ಸಂಚಾರ ಮಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ನೈಋತ್ಯ ರೈಲ್ವೆ ಪ್ರಯಾಣಿಕರಿಗೆ ಸೂಚನೆ ಹೊರಡಿಸಿದೆ.
ಮೈಸೂರು - ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈಗಾಗಲೇ ಬುಧವಾರ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಗಾಡಿ ಸಂಖ್ಯೆ 20663 / 20664 ಮುಂದಿನ ಜುಲೈ 30, 2024 ರಿಂದ ಬದಲಾವಣೆಯಾಗಲಿದೆ. ಇನ್ನು ಮುಂದೆ ಬುಧವಾರ ಬಿಟ್ಟು ಗುರುವಾರದಂದು ರೈಲು ಸೇವೆ ಿರುವುದಿಲ್ಲ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ.

ಸದ್ಯ ಮೈಸೂರು- ಚೆನ್ನೈ ರೈಲು ಬುಧವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚರಿಸುತ್ತಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜುಲೈ ಅಂತ್ಯದಿಂದ ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರೈಲು ಚಲಿಸುತ್ತದೆ. ಇನ್ನು, ಪ್ರಯಾಣಿಕರ ಬೇಡಿಕೆ ಮೇರೆಗೆ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ಮತ್ತೊಂದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಏಪ್ರಿಲ್ 5ರಿಂದ ಆರಂಭವಾಗಿದೆ.
ಮೈಸೂರಿನಿಂದ ಚೆನ್ನೈಗೆ 6.5 ಗಂಟೆಗಳ ಅವಧಿ
ಮೈಸೂರಿನಿಂದ ಎಂಜಿಆರ್ ಚೆನ್ನೈಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 6 ಗಂಟೆ 20 ನಿಮಿಷಗಳಿಗೆ ಕಡಿಮೆ ಮಾಡುವ ಗುರಿ ಹೊಂದಿದೆ. ಮೈಸೂರಿನಲ್ಲಿ ನಿರ್ವಹಣಾ ಸೌಲಭ್ಯವನ್ನು ಕಾರ್ಯಾರಂಭ ಮಾಡುವವರೆಗೆ, ಸೆಮಿ-ಹೈ ಸ್ಪೀಡ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ನಿಯಮಿತವಾಗಿ ಓಡುತ್ತದೆ.

ಮೈಸೂರಿನಿಂದ ಎಂಜಿಆರ್ ಚೆನ್ನೈಗೆ ವಂದೇ ಭಾರತ್ ರೈಲು ವೇಳಾಪಟ್ಟಿ
ರೈಲು ಸಂಖ್ಯೆ 20663 ಮೈಸೂರು - ಎಂಜಿಆರ್ ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರಿನಿಂದ ಬೆಳಗ್ಗೆ 06:00 ಗಂಟೆಗೆ ಹೊರಟು ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ 12:20 ಗಂಟೆಗೆ ಎಂಜಿಆರ್ ಚೆನ್ನೈಗೆ ತಲುಪುತ್ತದೆ. ಇದು ಜುಲೈ ಅಂತ್ಯದಿಂದ ಬದಲಾಗಲಿದೆ.
ಮಾರ್ಗದಲ್ಲಿ, ವಂದೇ ಭಾರತ್ ರೈಲು ಮಂಡ್ಯ (06:28/06:30), ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (07:45/07:50), ಕೃಷ್ಣರಾಜಪುರಂ (08:04/08:06) ಮತ್ತು ಕಟಪಾಡಿ (10: 33/10:35)ಯಲ್ಲಿ ನಿಲುಗಡೆಯಾಗಲಿದೆ.
ಚೆನ್ನೈನಿಂದ ಮೈಸೂರಿಗೆ ಗೆ ವಂದೇ ಭಾರತ್ ರೈಲು ವೇಳಾಪಟ್ಟಿ
ರೈಲು ಸಂಖ್ಯೆ 20664 ಎಂಜಿಆರ್ ಚೆನ್ನೈ ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಎಂಜಿಆರ್ ಚೆನ್ನೈನಿಂದ 17:00 ಗಂಟೆಗೆ ಪ್ರಾರಂಭವಾಗಲಿದೆ. ಮತ್ತು ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ 23:20 ಗಂಟೆಗೆ ಮೈಸೂರು ತಲುಪುತ್ತದೆ. ಮಾರ್ಗದಲ್ಲಿ, ರೈಲು ಕಟ್ಪಾಡಿ (18:23/18:25), ಕೃಷ್ಣರಾಜಪುರಂ (20:48/20:50), ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (21:25/21:30), ಮತ್ತು ಮಂಡ್ಯ (22: 38/22:40) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ












Click it and Unblock the Notifications