UGCET 2026: ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಪ್ರಕಟ; 1.22 ಲಕ್ಷಕ್ಕೂ ಅಧಿಕ ಸೀಟು ಭರ್ತಿ: ಕೆಇಎ

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿಗೆ (UGCET 2026) ಸಂಬಂಧಿಸಿದಂತೆ ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಬಿಎಸ್‌ಸಿ ನರ್ಸಿಂಗ್, ಬಿಪಿಟಿ, ಬಪಿಒ, ಬಿಎಸ್‌ಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವು ಇಂದು ಬುಧವಾರ ಪ್ರಕಟಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಸೀಟುಗಳು ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ಆಗಿವೆ ಎಂದು ಕಿಇಎ ತಿಳಿಸಿದೆ.

ಫಲಿತಾಂಶ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ವಿವಿಧ ಕೋರ್ಸ್ ಗಳ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳು ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿವೆ.19,374 ಸೀಟು ಬಾಕಿ ಉಳಿದಿವೆ ಅವರು ತಿಳಿಸಿದರು.

KEA UGCET 2026

ಮೊದಲ ಸುತ್ತಿನಲ್ಲಿ ಒಟ್ಟು 91,724 ಎಂಜಿನಿಯರಿಂಗ್ ಸೀಟುಗಳಲ್ಲಿ 90,748 ಸೀಟು ಹಂಚಿಕೆಯಾಗಿವೆ. ಕೇವಲ 976 ಸೀಟು ಮಾತ್ರ ಉಳಿದಿವೆ. ಪಶು ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 361 ಸೀಟೂ ಹಂಚಿಕೆಯಾಗಿವೆ ಎಂದು ಅವರು ವಿವರಿಸಿದರು.

UGCET 2026: ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಅಪ್ಡೇಟ್‌: ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ: KEA
UGCET 2026: ವೃತ್ತಿಪರ ಕೋರ್ಸ್‌ಗಳ ಪ್ರವೇಶದ ಅಪ್ಡೇಟ್‌: ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ: KEA

ಜುಲೈ 24ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ

ಇದರೊಂದಿಗೆ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಫಾರ್ಮಸಿ ಕೋರ್ಸ್ ಗಳನ್ನು ಹೊರತುಪಡಿಸಿ ಇತರ ಕೋರ್ಸ್ ಗಳ ಸೀಟು ಹಂಚಿಕೆ ಮಾಡಲಾಗಿದೆ. ಸೀಟು ಸಿಕ್ಕಿರುವ ಅಭ್ಯರ್ಥಿಗಳಿಗೆ ಚಾಯ್ಸ್ ಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಂಬಂಧ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 24ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.

ಜುಲೈ 17ರಿಂದ ಆಪ್ಷನ್ ದಾಖಲಿಸಬಹುದು

ಚಾಯ್ಸ್ ದಾಖಲಿಗೂ ಒಂದೊಂದು ಕೋರ್ಸ್ ಗೆ ಒಂದೊಂದು ದಿನಾಂಕಗಳನ್ನು ನೀಡಲಾಗಿದೆ. ಆ ಪ್ರಕಾರ ಮಾಡಬೇಕು. ಎಂಜಿನಿಯರಿಂಗ್ ಪ್ರವೇಶ ಬಯಸುವ ಅಭ್ಯರ್ಥಿಗಳು ಜುಲೈ 16ರಿಂದ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳು ಜುಲೈ 17ರಿಂದ ಚಾಯ್ಸ್ ದಾಖಲಿಸಬಹುದು. ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ ಮತ್ತು ಎಹೆಚ್ಎಸ್ ಕೋರ್ಸ್ ಓದುವವರು ಜು.18 ಹಾಗೂ ಬಿಎಸ್ ಸಿ ನರ್ಸಿಂಗ್ ಅಭ್ಯರ್ಥಿಗಳು ಜುಲೈ 19ರಿಂದ ಚಾಯ್ಸ್ ದಾಖಲಿಸಬಹುದು.

ಅರ್ಹರ ಪಟ್ಟಿ ಬರುವುದು ಕ್ರೀಡಾ ಇಲಾಖೆಯಿಂದ ತಡ ಆಗಿರುವ ಕಾರಣ ಕ್ರೀಡಾ ಕೋಟಾದ ಸೀಟುಗಳನ್ನು ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಎರಡನೇ ಸುತ್ತಿನಲ್ಲಿ ಆ ಸೀಟುಗಳನ್ನು ಹಂಚಿಕೆ‌ ಮಾಡಲಾಗುವುದು. ಇತರ ವಿಶೇಷ ಕ್ಯಾಟಗರಿಗಳ ಸೀಟು ಹಂಚಿಕೆ ಮಾಡಿದ್ದು ಉಳಿಕೆ ಸೀಟುಗಳನ್ನು ಅದೇ ಸುತ್ತಿನಲ್ಲಿ ಇತರರಿಗೆ ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+