24 ವರ್ಷದ ಬಳಿಕ ಸಿಕ್ಕ SBI ಪಾಸ್‌ಬುಕ್! ಖಾತೆಯಲ್ಲಿದೆ ₹1 ಲಕ್ಷಕ್ಕೂ ಹೆಚ್ಚು ಹಣ, ಅದೀಗ ಸಿಗುತ್ತಾ

Viral News: ನಮ್ಮ ಅಗತ್ಯ ವಸ್ತುಗಳು ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ವಸ್ತು, ದಾಖಲೆ ಕಳೆದು ಹೋದರೆ ದೊಡ್ಡ ಚಿಂತೆ ಆಗಿ ಬಿಡುತ್ತದೆ. ದಿನ ಕಳೆದಂತೆ ಎಲ್ಲವನ್ನೂ ಮರೆಯುತ್ತೇವೆ. ಅದೇ ರೀತಿ ಮರೆತಿದ್ದ ಬ್ಯಾಂಕ್ ಪಾಸ್‌ಬುಕ್ ಸುಮಾರು 24 ವರ್ಷಗಳ ನಂತರ ಸಿಕ್ಕರೆ ಹೇಗಾಗಬೇಡ!. ಸಿಕ್ಕ ಮೇಲೆ ಅದರಲ್ಲಿ ಲಕ್ಷಕ್ಕೂ ಅಧಿಕ ಹಣ ಇರುವುದು ಗೊತ್ತಾಗಿದೆ. ಈ ಪಾಸ್‌ಬುಕ್‌ಗೆ ಸಂಬಂಧಿಸಿದ ಮಾಹಿತಿ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲೇನು ವಿಶೇಷತೆ ಅಂತೀರಾ? ಹಾಗಾದ್ರೆ ಆ ಕುಟುಂಬಸ್ಥರಿಗೆ ಅದರಲ್ಲಿನ ಹಣ ವಿಥ್‌ಡ್ರಾ ಮಾಡಲು ಅವಕಾಶ ಇದಿಯಾ? ಇದ್ದರೆ ತಿಳಿಸುವಂತೆ ಪೊಸ್ಟ್ ಮೂಲಕ ಕೋರಲಾಗಿದೆ.

ಪೂಜಾ ಅಫಿಸಿಯಲ್ (poojaofficial5) ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಟೋ ಜೊತೆಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ. ಅದರ ಪ್ರಕಾರ, ಒಬ್ಬ ವ್ಯಕ್ತಿಗೆ ಮನೆಯನ್ನು ಸ್ವಚ್ಛಗೊಳಿಸುವಾಗ 20-24 ವರ್ಷ ಹಿಂದೆ ಕಳೆದು ಹೋಗಿದ್ದ ಹಳೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (SBI) ಬ್ಯಾಂಕ್‌ನ ಪಾಸ್‌ಬುಕ್ ಸಿಕ್ಕಿದೆ. ವರ್ಷಗಳ ಬಳಿಕ ಸಿಕ್ಕ ಈ ಪಾಸ್‌ಬುಕ್ ಒಂದು ಕ್ಷಣ ಇಡೀ ಕುಟುಂಬವನ್ನು ಅಚ್ಚರಿಗೊಳಿಸಿತು.

SBI Passbook

ಈ ವ್ಯಕ್ತಿ ತನ್ನ ತಂದೆಗೆ ಸಿಕ್ಕ ಎಸ್‌ಬಿಐ ಪಾಸ್‌ಬುಕ್ ಅನ್ನು ತೋರಿಸಿದ್ದಾರೆ. ಅದು ತಂದೆಯ ಅಪ್ಪ ಅಂದರೆ ಈ ವ್ಯಕ್ತಿಯ ದಿವಂಗತ ಅಜ್ಜನಿಗೆ (ತಾತ) ಸೇರಿದ್ದ, ಅವರ ಹೆಸರಿನಲ್ಲಿ ಬ್ಯಾಂಕ್ ಪಾಸ್ ಬುಕ್. ವಿವರ ಎಲ್ಲ ಪರಿಶೀಲಿಸಿದ ಬಳಿಕ ಕಳೆದು ಹೋಗಿದ್ದ ಅಜ್ಜನ ಹಣಕಾಸು ಬ್ಯಾಂಕ್ ಖಾತೆ ಬುಕ್ ಸಿಕ್ಕಿದ್ದನ್ನು ಖಚಿತಪಡಿಸಿಕೊಂಡರು.

TVK ವಿಜಯ್ ಪಕ್ಷದಲ್ಲೇ ಲಂಚದಾಟ? ಗುತ್ತಿಗೆದಾರರಿಂದ ₹1.30 ಲಕ್ಷ ಪಡೆದ ನಾಯಕ; ವಿಡಿಯೋ ವೈರಲ್
TVK ವಿಜಯ್ ಪಕ್ಷದಲ್ಲೇ ಲಂಚದಾಟ? ಗುತ್ತಿಗೆದಾರರಿಂದ ₹1.30 ಲಕ್ಷ ಪಡೆದ ನಾಯಕ; ವಿಡಿಯೋ ವೈರಲ್

ಖಾತೆಯಲ್ಲಿ ಲಕ್ಷಕ್ಕೂ ಅಧಿಕ ಹಣವಿದೆ!

ಪಾಸ್‌ಬುಕ್ ವರ್ಷಗಳ ಹಿಂದೆ ಕಳೆದುಹೋಗಿದೆ ಎಂದು ಕುಟುಂಬಸ್ಥರು ಸುಮ್ಮನಾಗಿದ್ದರು. ಅದನ್ನು ದಿವಂತಗ ಅಜ್ಜ, ತಂದೆ, ಈ ವ್ಯಕ್ತಿ ಎಲ್ಲರು ನಂಬಿ ಸುಮ್ಮನಾಗಿದ್ದರು. ಇದೀಗ ಮತ್ತೆ ಸಿಕ್ಕಿದ್ದು, ಅದರಲ್ಲಿ ಬರೋಬ್ಬರಿ 01 ಲಕ್ಷ ರೂಪಾಯಿಗಿಂತ ಅಧಿಕ ಹಣವಿದೆ ಎಂಬುದು ಗೊತ್ತಾಗಿದೆ. ಆದರೆ ಪಾಸ್‌ಬುಕ್‌ನಲ್ಲಿ ಕೇವಲ 4 ಅಂಕಿಯ ಖಾತೆ ಸಂಖ್ಯೆ ಮಾತ್ರ ಇದೆ. ಅಂದರೆ ಆವತ್ತಿಗೆ ನಾಲ್ಕಂಕಿಯೇ ಬ್ಯಾಂಕ್ ಖಾತೆಗಳ ನಂಬರ್ ಆಗಿತ್ತು. ಈ ಮೂಲಕ ಇದು ಖಾತೆ ಎಷ್ಟು ಹಳೆಯ ಖಾತೆ ಎಂಬುದು ಗೊತ್ತಾಗುತದೆ.

ಸದ್ಯ ಕುಟುಂಬಸ್ಥರ ಮುಂದಿರುವ ಪ್ರಶ್ನೆ ಎಂದರೆ, ಖಾತೆದಾರರು (ಅಜ್ಜ) ನಿಧನರಾಗಿ ವರ್ಷಗಳು ಕಳದಿವೆ. 20-24 ವರ್ಷ ಹಳೆಯ SBI ಖಾತೆಯಿಂದ ಜಮೆಯಾಗಿದ್ದ ಹಣವನ್ನು ನಾವು ಪಡೆಯಲು ಸಾಧ್ಯವೇ? ಎಂದು ಆಲೋಚಿಸುತ್ತಿದ್ದಾರೆ. ಮಕ್ಕಳು, ಕುಟುಂಬಸ್ಥರು ಹಿರಿಯರ ಆಸ್ತಿ, ಮನೆಗಳಿಗೆ ಹಕ್ಕುದಾರರು ಆಗಿರುತ್ತಾರೆ. ಹೀಗಿದ್ದಾಗ ಕಾನೂನಾತ್ಮಕವಾಗಿ ಉತ್ತರಾಧಿಕಾರಿಗಳು ಖಾತೆಯಲ್ಲಿರುವ ಹಣ ಪಡೆಯಬಹುದೇ? ಈ ಬಗ್ಗೆ ಅವರಿಗೆ ಮಾಹಿತಿ ಇಲ್ಲದಾಗಿದೆ. ಕಳೆದು ಹೋಗಿದ್ದ ಪಾಸ್‌ಬುಕ್ ಜೊತೆ ಹಣವು ಮರಳಿ ಸಿಕ್ಕಂತಾಗಿದೆ. ಈಗ ಏನು ಮಾಡಬೇಕೆಂಬು ಅವರಿಗೆ ತೋಚುತ್ತಿಲ್ಲ.

ನೀವು ಬ್ಯಾಂಕಿಂಗ್ ಪ್ರಕ್ರಿಯೆಯನ್ನು ತಿಳಿದಿದ್ದರೆ ಅಥವಾ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರೆ,
ನಿಮ್ಮ ಅನುಭವವನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಿ ಎಂದು ಪೋಸ್ಟ್‌ನಲ್ಲಿ ಕೇಳಿಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ಇರುವವರು ಸಲಹೆ ನೀಡಿದರೆ, ಈ ಕುಟುಂಬಕ್ಕೆ ಸುಮಾರು ಎರಡೂವರೆ ದಶಕದಷ್ಟು ಹಿಂದಿನ ಮರೆತು ಹೋಗಿದ್ದ ಉಳಿತಾಯ ಹಣ ಮರುಪಡೆಯಲು ಸಹಾಯ ಆಗುತ್ತದೆ ಎಂದು ಮನವಿ ಮಾಡಿಕೊಳ್ಳಲಾಗಿದೆ. ಸದ್ಯ ಈ ವಿಚಾರ ಹೆಚ್ಚು ಚರ್ಚೆ ಆಗುತ್ತಿದೆ.

ನೆಟ್ಟಿಗರು ಕೊಟ್ಟ ಸಲಹೆ ಏನು?

ಈ ಪೋಸ್ಟ್‌ಗೆ ನೆಟ್ಟಿಗರಲ್ಲಿ ಒಬ್ಬರು, '10ಕ್ಕೂ ಅಧಿಕ ವರ್ಷವಾಗಿದ್ದರೆ ಹಾಗೂ ನಿಮ್ಮ ಹಣ RBI DEAF ನಿಧಿಗೆ ವರ್ಗಾಯಿಸಲ್ಪಟ್ಟಿದ್ದರೆ ಬ್ಯಾಂಕ್ ಕ್ಲೇಮ್ ಮಾಡಲು ಅವಕಾಶ ನೀಡುತ್ತದೆ. ದಾಖಲೆ ಪರಿಶೀಲನೆಗಾಗಿ ನಿಮ್ಮ ಖಾತೆಯ 4 ಸಂಖ್ಯೆಗಳನ್ನು ಹಾಗೂ ಶಾಖೆಯ ವಿವರಗಳನ್ನು ಒದಗಿಸಬೇಕು. ಎಲ್ಲ ದಾಖಲೆಗಳನ್ನು ನೀಡಿದ ಬಳಿಕ 15 ದಿನಗಳಲ್ಲಿ ಸಂಪೂರ್ಣ ಪ್ರಕ್ರಿಯೆ ಮುಗಿಯಲಿದೆ' ಎಂದು ಅವರು ಹೇಳಿದರು.

ಇನ್ನೊಬ್ಬರು 'ನಿಮ್ಮ ಅಜ್ಜನವರು ಹಣ ತೆಗೆದುಕೊಂಡು ಆ ಹಣದ ಮಾಹಿತಿ ನಮೂದಿಸದೇ ಇರಬಹುದು. ನೀವು ಹಣದ ಕುರಿತು ನಿಮ್ಮ ಹಕ್ಕು ಸಲ್ಲಿಸಿ. ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ. ಅಗತ್ಯವಿದ್ದಲ್ಲಿ ನ್ಯಾಯಾಲಯದಿಂದ ದಾಖಲೆ ಒದಗಿಸುವಂತೆ' ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+