Mysuru-Chennai Vande Bharat Express: ಇಂದಿನಿಂದ ಪೂರ್ಣ ಮಾರ್ಗದಲ್ಲಿ ವಂದೇ ಭಾರತ್ ಸಂಚಾರ, ವೇಳಾಪಟ್ಟಿ, ದಿನಾಂಕ
ಬೆಂಗಳೂರು, ಏಪ್ರಿಲ್ 05: ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿದ್ದ ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಇಂದು ಏಪ್ರಿಲ್ 5ರಿಂದ ಪರಿಪೂರ್ಣವಾಗಿ ಕಾರ್ಯ ನಿರ್ವಹಣೆ ಆರಂಭಿಸಿದೆ.
ಪ್ರಧಾನಿಯವರು ಕಳೆದ ಮಾರ್ಚ್ ತಿಂಗಳಲ್ಲಿ ಚೆನ್ನೈ- ಮೈಸೂರಿನ ಎರಡನೇ ವಂದೇ ಭಾರತ್ ರೈಲಿ ಸಂಚಾರಕ್ಕೆ ಹಸಿರುವ ನಿಶಾನೆ ತೋರಿಸಿದ್ದರು. ಆದರೆ ಮೈಸೂರಿನಲ್ಲಿ ರೈಲ್ವೆ ಮೂಲ ಸೌಕರ್ಯ ಸೇರಿದಂತೆ ಒಂದಷ್ಟು ಕಾರಣಗಳಿಂಗಾಗಿ ವಂದೇ ಭಾರತ್ ರೈಲು ತಡವಾಗಿ ಆರಂಭವಾಗುತ್ತಿದೆ.

ಉದ್ದೇಶದಂತೆ ಚೆನ್ನೈನಿಂದ ಬರುವ ವಂದೇ ಭಾರತ್ ರೈಲು ಬೆಂಗಳೂರು ಮೂಲಕ ಮೈಸೂರಿಗೆ ಏಪ್ರಿಲ್ 5ರಿಂದ ಆರಂಭವಾಗಲಿದೆ. ಚೆನ್ನೈಗೆ ಸಂಪರ್ಕ ಕಲ್ಪಿಸುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ ಎಂದು ನೈಋತ್ಯ ರೈಲ್ವೆ (SWR) ಬೆಂಗಳೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದರು.
ಏ. 4ರವರೆಗೆ ಬೆಂಗಳೂರುವರೆಗೆ ಮಾತ್ರ ಸೇವೆ
ನೈಋತ್ಯ ರೈಲ್ವೆ (SWR) ಮೈಸೂರಿನಲ್ಲಿ ಪ್ರೀಮಿಯಂ ರೈಲನ್ನು ನಿರ್ವಹಿಸಲು ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಿದೆ. ವಂದೇ ಭಾರತ್ ರೈಲುಗಳನ್ನು ನಿರ್ವಹಿಸಲು ಮೈಸೂರಿನಲ್ಲಿ ಸೌಲಭ್ಯದ ಕೊರತೆ ಇತ್ತು. ಹೀಗಾಗಿ ಪ್ರಧಾನಿಯವರ ಉದ್ಘಾಟನೆ ಬಳಿಕ ಮಾರ್ಚ್ 14 ರಂದು ಎರಡನೇ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತ್ತು.
ಆದರೆ ಈ ರೈಲು ಚೆನ್ನೈನಿಂದ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ವರೆಗೆ ಮತ್ತು ಏಪ್ರಿಲ್ 4 ವರೆಗೆ ಸಂಚರಿಸಿತ್ತು. ಇದೀಗ ಮೈಸೂರಿನಲ್ಲಿ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗಿರುವ ಹಿನ್ನೆಲೆಯಲ್ಲಿ ಚೆನ್ನೈನಿಂದ ಬೆಂಗಳೂರು ಮೂಲಕ ಮೈಸೂರುವರೆಗೆ ಸಂಚಾರವನ್ನು ಇಂದಿನಿಂದ ಆರಂಭಿಸಿದೆ.

ಈ ಅವಧಿಯಲ್ಲಿ ಈ ದಿನ ಸೇವೆ ಅಲಭ್ಯ
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20663/20664) ಇಂದು ಶುಕ್ರವಾರದಿಂದ (ಏಪ್ರಿಲ್ 5) ಪೂರ್ಣ ಮಾರ್ಗದಲ್ಲಿ ಸೇವೆ ಆರಂಭಿಸಿದೆ. ಗಮನಿಸಬೇಕಾದ ಅಂಶವೆಂದರೆ ಏಪ್ರಿಲ್ 5 ಮತ್ತು ಜುಲೈ 29 ರ ನಡುವೆ, ವಾರದಲ್ಲಿ ಒಂದು ದಿನ (ಬುಧವಾರ) ಈ ರೈಲು ಸಂಚರಿಸುವುದಿಲ್ಲ. ಮುಂದಿನ ಜುಲೈ 30ರಿಂದ ಗುರುವಾರವು ಈ ರೈಲು ಸೇವೆ ಲಭ್ಯ ಇರುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.
'ವಿಬಿ' 2 ರೈಲುಗಳ ವೇಳಾಪಟ್ಟಿ, ವಿವರ
ಚೆನ್ನೈ-ಬೆಂಗಳೂರು-ಮೈಸೂರು ಮಧ್ಯೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 20607/20608) ನವೆಂಬರ್ 2022 ರಿಂದ ಆರಂಭಗೊಳ್ಳಲಿದೆ. ಇದು ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50 ಕ್ಕೆ ಪ್ರಯಾಣ ಆರಂಭವಾಗಿ ಮಧ್ಯಾಹ್ನ 12.20 ಕ್ಕೆ ಮೈಸೂರು ತಲುಪುತ್ತದೆ. ಮರಳಿ ಇದೇ ರೈಲು ಮೈಸೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು ರಾತ್ರಿ 7.20 ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಇದು ದಕ್ಷಿಣ ರೈಲ್ವೆಯು ಚೆನ್ನೈನಲ್ಲಿ ಕಾರ್ಯ ನಿರ್ವಹಿಸುತ್ತದೆ.
ಇನ್ನೂ ಎರಡನೇ ಚೆನ್ನೈ-ಮೈಸೂರು ವಿಬಿ ರೈಲು ಬೆಳಗ್ಗೆ 6 ಗಂಟೆಗೆ ಮೈಸೂರಿನಿಂದ ಪ್ರಯಾಣ ಆರಂಭಿಸಿ ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೆಆರ್ ಪುರಂ ಮತ್ತು ಕಟಪಾಡಿ ಮೂಲಕ ಮಧ್ಯಾಹ್ನ 12.25 ಕ್ಕೆ ಚೆನ್ನೈ ಸೆಂಟ್ರಲ್ ತಲುಪುತ್ತದೆ. ಅಲ್ಲಿಂದ ಮರಳಿ ಅದೇ ಮಾರ್ಗದಲ್ಲಿ ನಿಲುಗಡೆ ನೀಡುತ್ತಾರೆ. ಚೆನ್ನೈನಿಂದ ಮರಳಿ ಸಂಜೆ 5 ಗಂಟೆಗೆ ಸಂಚಾರ ಆರಂಭಿಸಿ ರಾತ್ರಿ 11.20 ಕ್ಕೆ ಮೈಸೂರಿಗೆ ಬಂದು ಸೇರುತ್ತದೆ.












Click it and Unblock the Notifications