Daily Horoscope: ಈ ರಾಶಿಯವರಿಗೆ ಇಂದು ಸಿಗುವುದು ಅದ್ಬುತ ಯಶಸ್ಸು, ಇವರು ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು
Horoscope July 11: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ (Aries)
ಇಂದು ನಿಮಗೆ ಅರ್ಥಪೂರ್ಣ ದಿನವಾಗಿರುತ್ತದೆ. ಸ್ನೇಹಿತರ ಕಷ್ಟಕ್ಕೆ ನೆರವಾಗುವಿರಿ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಕೆಲಸಕ್ಕೆ ಸಂಗಾತಿಯ ಬೆಂಬಲ ಇರುವುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಷಭ ರಾಶಿ (Taurus)
ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಉಂಟಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸದ ರೀತಿ ನೀತಿಯನ್ನು ಬದಲಿಸಿಕೊಂಡರೆ ಲಾಭವಾಗುವುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು.
ಮಿಥುನ ರಾಶಿ (Gemini)
ಸಂತೋಷದ ದಿನವಾಗಿರುತ್ತದೆ.ದಿನವಿಡೀ ಉತ್ಸಾಹದಿಂದ ಇರುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಆರೋಗ್ಯ ಇಂದು ಉತ್ತಮವಾಗಿರುತ್ತದೆ.
ಕರ್ಕಾಟಕ ರಾಶಿ (Cancer)
ಇಂದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ವ್ಯಕ್ತಿತ್ವವು ಸಮತೋಲಿತ ಮತ್ತು ಸಕಾರಾತ್ಮಕವಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ಕಠಿಣ ಪರಿಶ್ರಮ, ತಾಳ್ಮೆಗೆ ತಕ್ಕ ಫಲ ಸಿಗುವುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
ಸಿಂಹ ರಾಶಿ (Leo)
ಕಷ್ಟಕರವಾದ ಕೆಲಸಗಳು ಕೂಡಾ ಬಹಳ ಸುಲಭವಾಗಿ ನೆರವೇರುವುದು. ಜವಾಬ್ದಾರಿಗಳು ಹೆಚ್ಚಾಗಬಹುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಮಕ್ಕಳಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುತ್ತದೆ.
ಕನ್ಯಾ ರಾಶಿ (Vigro)
ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ. ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ. ಇಂದು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಇಂದು ಅದೃಷ್ಟದ ದಿನವಾಗಿರುತ್ತದೆ.
ತುಲಾ ರಾಶಿ (Libra)
ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳು ಇಂದು ನಿಮ್ಮ ಪರವಾಗಿ ಬರಬಹುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಾಗುವುದು. ಕುಟುಂಬದ ವಾತಾವರಣ ಸಂತೋಷಕರವಾಗಿರುತ್ತದೆ. ಕೆಲಸದ ಹೊರೆಗಳು ಹೆಚ್ಚಿರುತ್ತವೆ.
ವೃಶ್ಚಿಕ ರಾಶಿ (Scorpio)
ಇಂದು ನಿಮ್ಮ ಪಾಲಿನ ಸುವರ್ಣ ದಿನವಾಗಿರಲಿದೆ. ದೀರ್ಘಕಾಲದ ವೈಯಕ್ತಿಕ ಸಮಸ್ಯೆಗೆ ಪರಿಹಾರ ಸಿಗುವುದು. ಮನಸ್ಸು ನೆಮ್ಮದಿ ಮತ್ತು ಶಾಂತವಾಗಿ ಇರುವುದು. ವೈವಾಹಿಕ ಜೀವನದಲ್ಲಿ ಹೊಸ ಉಲ್ಲಾಸ ಮೂಡುವುದು. ಆರೋಗ್ಯವು ಉತ್ತಮವಾಗಿರುತ್ತದೆ.
ಧನು ರಾಶಿ (Sagitarius)
ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ವ್ಯವಹಾರದ ದೃಷ್ಟಿಯಿಂದ, ಸಾಮಾನ್ಯ ದಿನವಾಗಿರುತ್ತದೆ. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುತ್ತದೆ. ಇಂದು ನಿಮ್ಮ ಸಂಗಾತಿಗೂ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಮಕರ ರಾಶಿ (Capricorn)
ವೈಯಕ್ತಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ. ಹೆಚ್ಚಿನ ಯೋಜನೆಗಳು ಫಲಪ್ರದವಾಗಬಹುದು. ಹೊಸ ಜನರ ಪರಿಚಯವಾಗುವುದು. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಆದಾಯದ ಮೂಲಗಳು ಬಲಗೊಳ್ಳುತ್ತವೆ. ದಿನವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಕುಂಭ ರಾಶಿ (Aquarius)
ಆದಾಯವನ್ನು ಹೆಚ್ಚಿಸಲು ಕೆಲವು ಹೊಸ ಕೆಲಸಗಳನ್ನು ಪ್ರಾರಂಭಿಸಲು ಪ್ರಯತ್ನಿಸಬಹುದು. ಹೊಸ ವ್ಯವಹಾರ ಕೊಡುಗೆಗಳನ್ನು ಪರಿಗಣಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಸಿಗಬಹುದು. ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇರಿಸಿ.
ಮೀನ ರಾಶಿ (Pisces)
ಇಂದು ಆತ್ಮವಿಶ್ವಾಸದಿಂದ ತುಂಬಿದ ದಿನವಾಗಿರುತ್ತದೆ. ಧಾರ್ಮಿಕ ಚಟುವಟಿಕೆಗಳತ್ತ ಒಲವು ಹೆಚ್ಚಾಗುತ್ತದೆ. ಕೆಲಸಗಳನ್ನು ಸಕಾರಾತ್ಮಕ ಮನಸ್ಥಿತಿಯೊಂದಿಗೆ ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭಗಳಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications