Vande Bharat Express: ಶೀಘ್ರದಲ್ಲೇ ಬರಲಿದೆ 20 ಕೋಚ್‌ಗಳ ವಂದೇ ಭಾರತ್ ರೈಲು- ಎಲ್ಲಿ, ಯಾವಾಗ?-ಮಾಹಿತಿ

ಮುಂಬೈ, ಏಪ್ರಿಲ್‌, 10: 8 ಭೋಗಿಯ ವಂದೇ ಭಾರತ್‌ ರೈಲು ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಸಂಚಾರ ಆರಂಭಿಸಿವೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರೈಲ್ವೆಯು 20 ಕೋಚ್‌ಗಳ ವಂದೇ ಭಾರತ್‌ ರೈಲುಗಳನ್ನು ಪರಿಚಯಿಸಲು ಮುಂದಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ, ಯಾವಾಗಿನಿನಿಂದ ಈ ರೈಲು ಸಂಚಾರ ಆರಂಭ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪ್ರಸ್ತುತ ಎಂಟು ಭೋಗಿಗಳ ವಂದೇ ಭಾರತ್‌ ರೈಲು ಹಾಗೂ ಹದಿನಾರು ಕೋಚ್‌ಗಳ ರೈಲು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಇದೀಗ ಹಲವು ಮಾರ್ಗಗಗಳಲ್ಲಿ 20 ಕೋಚ್‌ಗಳ ರೈಲುಗಳನ್ನು ಪರಿಚಯಿಸಲು ಪ್ಲಾನ್ ಮಾಡಿದೆ. ಆದರೆ, ಮತ್ತೊಂದೆಡೆ ವಂದೇ ಭಾರತ್‌ ವೇಳಾಪಟ್ಟಿಯಿಂದಾಗಿ ಇತರ ಸೇವೆಗಳಿಗೆ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಜೋರಾಗಿ ಕೇಳಿಬರುತ್ತಿವೆ.

Vande Bharat Express 20 coaches Vande Bharat train will run on this route soon know details

ಆದರೆ, 20 ಭೋಗಿಗಳನ್ನು ಪರಿಚಯಿಸಿದಾಗ, 8 ಕೋಚ್‌ ಸೆಟ್‌ಗಳ ಸ್ಥಳದಲ್ಲಿ ಹೆಚ್ಚುವರಿಯಾಗಿ ಒಂದು ರೈಲು ಬಂದಾಂತಾಗುತ್ತದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯ ಕೋಚ್‌ಗಳನ್ನು ಹೊಂದಿರುವ ವಂದೇ ಭಾರತ್‌ ರೈಲುಗಳು ಜನದಟ್ಣೆಯನ್ನು ಕಡಿಮೆ ಮಾಡಬಹುದು. ಜೊತೆಗೆ ಹೆಚ್ಚಿನ ಆದಾಯವನ್ನು ಕೂಡ ನಿರೀಕ್ಷಿಸಲಾಗಿದೆ.

ವಂದೇ ಭಾರತ್‌ ಸ್ಲೀಪರ್: ಇನ್ನು ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲುಗಳಿಗೆ ಸಂಬಂಧಿಸಿದಂತೆ, ರೈಲ್ವೆಯು ದೂರದ ರೈಲುಗಳಲ್ಲಿ ಅಸ್ತಿತ್ವದಲ್ಲಿರುವ ಕೋಚ್‌ಗಳ ವ್ಯವಸ್ಥೆಯನ್ನು ಗಮನಾರ್ಹವಾಗಿ ಬದಲಾಯಿಸದಿದ್ದರೂ, ಈ ಸ್ಲೀಪರ್‌ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿರುತ್ತದೆ. ಪ್ರತಿ ಹೊಸ ರೈಲುಗಳು ಒಂದು ಎಸಿ 1, ನಾಲ್ಕು ಸೆಕೆಂಡ್‌ ಕ್ಲಾಸ್‌ ಎಸಿ ಮತ್ತು 11 3ನೇ ಎಸಿ ಕೋಚ್‌ಗಳನ್ನು ಹೊಂದಿದ್ದು, ಒಟ್ಟು 834 ಪ್ರಯಾಣಿಕರ ಸಾಮಾರ್ಥ್ಯವನ್ನು ಹೊಂದಿರುತ್ತದೆ.

ಉತ್ತಮ ವಿನ್ಯಾಸವನ್ನು ಹೊಂದಿರುವ ರೈಲುಗಳು ಅತ್ಯಂತ ಆಧುನಿಕ ಮಾಡ್ಯುಲರ್‌ ಪ್ಯಾಂಟ್ರಿಯನ್ನು ಸಹ ಒಳಗೊಂರುತ್ತವೆ. ಹಾಗೆಯೇ ಮೆಟ್ರೋ ರೈಲುಗಳಲ್ಲಿರುವಂತೆ ಬಾಗಿಲುಗಳು ಈ ರೈಲಿನಲ್ಲಿಯೂ ಸ್ವಯಂಚಾಲಿತವಾಗಿರುತ್ತವೆ. ಇನ್ನು ದೈಹಿಕವಾಗಿ ಅಂಗವಿಕಲ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆಗಳು ಈ ರೈಲಿನಲ್ಲಿ ಲಭ್ಯವಿರುತ್ತವೆ.

ಅಲ್ಲದೆ ಇದರಲ್ಲಿ ಲೊಕೊ ಪೈಲಟ್‌ಗಳಿಗೂ ವಾಶ್‌ರೂಮ್‌ ಅನ್ನು ಕಲ್ಪಿಸಲಾಗಿರುತ್ತದೆ. ಮತ್ತೊಂದು ವಿಶಿಷ್ಟ ಸೌಲಭ್ಯವೆಂದರೆ ಎಸಿ 1 ಕೋಚ್‌ಗಳ ವಾಶ್‌ರೂಮ್‌ಗಳಲ್ಲಿ ಬಿಸಿನೀರಿನ ಪೂರೈಕೆಯೂ ಇರುತ್ತದೆ. ಇನ್ನು ಮುಂಬರುವ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಎಚ್ಚರಿಸಲು ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಮತ್ತು ದೊಡ್ಡ ಲಗೇಜ್‌ ರೂಂ ಅನ್ನು ಸಹ ಒಳಗೊಂಡಿರುತ್ತದೆ.

ಇದೀಗ ಕಾರ್ಯಾಚರಣೆ ಮಾಡುತ್ತಿರುವ ರೈಲುಗಳಿಗೆ ಹೋಲಿಕೆ ಮಾಡಿದರೆ, ವಿನ್ಯಾಸಕರು ಮತ್ತೆ ಉತ್ತಮ ವಂದೇ ಭಾರತ್‌ ಅನ್ನು ತಯಾರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಹಗುರವಾದ ಮತ್ತು ತುಕ್ಕು ನಿರೋಧಕ ಜಿಎಫ್‌ಆರ್‌ಪಿ ಪ್ಯಾನಲ್‌ಗಳನ್ನು ಒಳಾಂಗಣದಲ್ಲಿ ಬಳಸಲಾಗುವುದು. ಜಿಎಫ್‌ಆರ್‌ಪಿ ಗ್ಲಾಸ್‌ ಫೈಬರ್‌, ಪಾಲಿಮರ್‌-ಫೈಬರ್‌ ಗ್ಲಾಸ್‌ ಮತ್ತು ಪಾಲಿಸ್ಟರ್‌ನ ಸಂಯೋಜನೆಯ ವಸ್ತುವನ್ನು ಅಳವಡಿಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+