Vande Bharat Express: ಬೆಂಗಳೂರಿನಿಂದ ಇಲ್ಲಿಗೆ ವಿಶೇಷ ರೈಲಿನ ಸೇವೆ? ಯಾವಾಗ ಆರಂಭ, ಮಾರ್ಗದ ಮಾಹಿತಿ ವಿವರ
ಬೆಂಗಳೂರು, ಏಪ್ರಿಲ್ 08: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಹೊರ ರೈಲುಗಳು ಹೊಸ ಮಾರ್ಗದಲ್ಲಿ ಓಡಾಟ ಆರಂಭಿಸುವ ಸಾಧ್ಯತೆ ಇದೆ. ಈ ಮಧ್ಯೆ ಬೆಂಗಳೂರು-ಎರ್ನಾಕುಲಂ ಕಾರಿಡಾರ್‌ನಲ್ಲಿ ವಿಶೇಷ ರೈಲಿನ ರೂಪದಲ್ಲಿ ಸೇವೆ ನೀಡುವ ನಿರೀಕ್ಷೆ ಇರುವ ವಂದೇ ಭಾರತ್ ರೈಲು ಭಾನುವಾರ ಬೆಂಗಳೂರಿಗೆ ಆಗಮಿಸಿದೆ.
ಏಪ್ರಿಲ್ 07ರಂದು ಬೆಂಗಳೂರಿಗೆ ಆಗಮಿಸಿರುವ ಈ ವಂದೇ ಭಾರತ್ ರೈಲು ಬೆಂಗಳೂರಿನಿಂದ ಎರ್ನಾಕುಲಂಗೆ ಸ್ಥಳಾಂತರಿಸಲಾಗಿದೆ. ಕಾರಣ ಎರ್ನಾಕುಲಂನಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಮೂಲಸೌಕರ್ಯ ಸೃಷ್ಟಿ ಬಳಿಕ ಇದೇ ಕಾರಿಡಾರ್‌ನಲ್ಲಿ ಸೇವೆ ಆರಂಭಿಸುವ ಸಾಧ್ಯತೆಗಳು ಇವೆ.

ಬೆಂಗಳೂರು-ಎರ್ನಾಕುಲಂ ಮಧ್ಯೆ 9 ಗಂಟೆ ಪ್ರಯಾಣ
ಬೆಂಗಳೂರು-ಎರ್ನಾಕುಲಂ ಕಾರಿಡಾರ್‌ನಲ್ಲಿ ಕಾರಿಡಾರ್‌ನಲ್ಲಿ ಕಳೆದ ವರ್ಷ 2023ರ ಏಪ್ರಿಲ್ ನಲ್ಲಿ ವಿಶೇಷ ರೈಲಿನ ರೀತಿ ಬಳಕೆ ಆಗಿತ್ತು ಬೆಂಗಳೂರು-ಎರ್ನಾಕುಲಂ ಮಧ್ಯೆ ಕೇವಲ 09 ಗಂಟೆಗಳಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದು ಬೇಡಿಕೆಗೆ ತಕ್ಕಂತೆ 2024ರ ಡಿಸೆಂಬರ್ ತಿಂಗಳಲ್ಲಿ, ಇಲ್ಲವೇ ಅದಕ್ಕೂ ಮೊದಲು ಸಂಚರಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದವು.
ಸದ್ಯಕ್ಕೆ ಈ ವಂದೇ ಭಾರತ್ ರೈಲು ಬೆಂಗಳೂರಿಗೆ ಆಗಮಿಸಿದೆ. ಆದರೆ ಈ ರೈಲಿನ ಸೇವೆ ಆರಂಭ ಇಲ್ಲವೇ ಸಮಯದ ವೇಳಾಪಟ್ಟಿಯಲ್ಲಿ ಯಾವುದೇ ಔಪಚಾರಿಕ ಪ್ರಕಟಣೆ ಮಾಡಲಾಗಿಲ್ಲ ಎಂದು ನೃಋತ್ಯು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.

ತ್ರಿ-ಸಾಪ್ತಾಹಿಕ ವಿಶೇಷ ರೈಲು
ಭಾರತೀಯ ರೈಲ್ವೆಯು ಏಪ್ರಿಲ್ 5 ರಿಂದ ಏಪ್ರಿಲ್ 28 ರವರೆಗೆ ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ಕಾರಿಡಾರ್‌ನಲ್ಲಿ ವಂದೇ ಭಾರತ್ ತ್ರಿ-ಸಾಪ್ತಾಹಿಕ ವಿಶೇಷ ರೈಲುಗಳನ್ನು ರೈಲ್ವೆ ಘೋಷಿಸಿತು. ಇದರ ಬೆನ್ನಲ್ಲೆ ಹೊಸ ವಂದೇ ಭಾರತ್ ರೈಲುಗಳು ಇನ್ನೇನು ಕೆಲ ಆಗಮಿಸುವ ಮೂಲಕ ರೈಲು ಸೇವಾ ವಲಯಕ್ಕೆ ಮತ್ತಷ್ಟು ಪುಷ್ಠಿ ನೀಡುವ ದಿನಗಳು ದೂರವಿಲ್ಲ ಎನ್ನಬಹುದು.
ಎರ್ನಾಕುಲಂನಲ್ಲಿ ರೈಲು ನಿರ್ವಹಣಾ ಮೂಲ ಸೌಕರ್ಯವನ್ನು ಈ ಹಿಂದೆ ಹೆಚ್ಚಿಸಲಾಗಿತ್ತು. ಆದರೂ ಸಹ ವಂದೇ ಭಾರತ್ ಎಕ್ಸ್‌ಪ್ರೆಸ್ ರೇಕ್ ಒಂದು ತಿಂಗಳ ಹಿಂದೆ ಕೊಚ್ಚುವೇಲಿಗೆ ತಂದಿದ್ದನ್ನು ಮೈಸೂರು-ಚೆನ್ನೈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲು ತೆಗೆದುಕೊಂಡು ಹೋಗಲಾಗಿತ್ತು.
ಬೆಂಗಳೂರು-ಕೊಯಮತ್ತೂರು ರೈಲು ವಿಸ್ತರಣೆಗೆ ಬೇಡಿಕೆ
ಈ ಕಾರಣದಿಂದ ಇದೀಗ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಎರ್ನಾಕುಲಂವರೆಗೆ ವಿಸ್ತರಿಸುವ ಬೇಡಿಕೆ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಂದೇ ಭಾರತ್ ರೈಲುಗಳ ಜೋಡಿಯಲ್ಲಿ ಶೇಕಡಾ 150 ಕ್ಕಿಂತ ಹೆಚ್ಚು ಆಕ್ಯುಪೆನ್ಸಿ ಪರಿಗಣಿಸಿ ವಿಸ್ತರಣೆ ಬೇಡಿಕೆ ಸೃಷ್ಟಿಯಾಗಿದೆ.
69 ಕಿಮೀ ಸಿಂಗಲ್ ಟ್ರ್ಯಾಕ್ ಸಮಸ್ಯೆ
ಇನ್ನೂ ಎರ್ನಾಕುಲಂ ಮತ್ತು ಅಂಬಲಪುಳ ಮಧ್ಯದ ಕಾರಿಡಾರ್‌ನಲ್ಲಿ ವಂದೇ ಭಾರತ್ ರೈಲು ಅಸಂಖ್ಯಾತ ನಿಲುಗಡೆ ನೀಡುತ್ತದೆ. ತಿರುವುಗಳಿವೆ, ಅಸಮರ್ಪಕ ಪ್ಲಾಟ್‌ಫಾರ್ಮ್ ಸಾಮರ್ಥ್ಯ ಇದ್ದು, 69-ಕಿಮೀ ಸಿಂಗಲ್ ಟ್ರ್ಯಾಕ್ ಇದೆ. ಇದು ಕರ್ನಾಟಕದಿಂದ ಎರ್ನಾಕುಲಂಗೆ ಹಾದು ಹೋಗುವಾಗ ಎಕ್ಸ್‌ಪ್ರೆಸ್ ರೈಲುಗಳ ವೇಗವನ್ನು ತುಲನಾತ್ಮಕವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ರೈಲುಗಳು, ಹಾಲಿ ರೈಲಿನ ವಿಸ್ತರಣೆಗೆ ಆಗ್ರಹ ಶುರುವಾಗಿದೆ.












Click it and Unblock the Notifications