ಸಿಹಿ ಸುದ್ದಿ: ಕಲಬುರಗಿ ಬೆಂಗಳೂರು ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ ವಿವರ
ಬೆಂಗಳೂರು, ಏಪ್ರಿಲ್.05: ಕಲಬುರಗಿ ಬೆಂಗಳೂರು ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲುಗಡೆ ನೀಡಬೇಕು ಎಂಬ ಬೇಡಿಕೆ ಹಲವು ದಿನಗಳಿಂದಲೇ ಕೇಳಿ ಬರುತ್ತಿತ್ತು. ಸ್ದಯ ಪ್ರಯಾಣಿಕರಿಗೆ ಸಿಹಿ ಸುದ್ದ ಸಿಕ್ಕಿದ್ದು, ಯಾದಗಿರಿಯಲ್ಲಿ ವಂದೇ ಭಾರತ್ ಮತ್ತೊಂದು ನಿಲುಗಡೆ ನೀಡಲಿದೆ.
ಈ ಬಗ್ಗೆ ಸಚಿವ ಉಮೇಶ್ ಜಾದವ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ, ವಂದೇ ಭಾರತ್ ರೈಲು ಪ್ರಾರಂಭವಾದ ದಿನದಿಂದ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಷ್ಠಿತ ರೈಲನ್ನು ನಿಲ್ಲಿಸಲು ಸಾಮಾನ್ಯ ಜನರಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳು ಈ ರೈಲು ನಿಲ್ಲಿಸಲು ಒತ್ತಾಯಿಸಿದರು. ಹೀಗಾಗಿ ಪ್ರಯಾಣಿಕರ ಒತ್ತಡಕ್ಕ ಮಣಿದು ಯಾದಗಿರಿಯಲ್ಲಿ ವಂದೇ ಭಾರತ್ ನಿಲುಗಡೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ವಂದೇ ಭಾರತ್ ಪ್ರಾರಂಭವಾದ ದಿನದಂದು ರೈಲ್ವೆ ಇಲಾಖೆ ಜೊತೆಗೆ ಮಾತನಾಡಿ ಈ ವಿಷಯ ಕುರಿತು ಕ್ರಮ ಕೈಗೊಳ್ಳಲು ಮನವಿ ಮಾಡಿದೆ. ಇದರ ಪ್ರತಿಫಲವಾಗಿ ಇಂದು ಕೇಂದ್ರದ ರೈಲ್ವೆ ಇಲಾಖೆ ಆದೇಶವನ್ನು ಹೊರಡಿಸಿದೆ. ಕಲ್ಬುರ್ಗಿಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಯಾದಗಿರಿ ನಿಲ್ದಾಣ ರೈಲ್ವೆ ನಿಲ್ದಾಣದಲ್ಲಿ ಈ ರೈಲು ಬೆಳಗ್ಗೆ 05:54 ನಿಮಿಷಕ್ಕೆ ಬಂದು 05:55 ನಿಮಿಷಕ್ಕೆ ಹೊರಡಲಿದೆ. ಬೆಂಗಳೂರಿನಿಂದ ಬರುವಾಗ ರಾತ್ರಿ 09:44 ನಿಮಿಷಕ್ಕೆ ತಲುಪಲಿದ್ದು 09:45 ನಿಮಿಷಕ್ಕೆ ಕಲಬುರಗಿ ಕಡೆ ಹೊರಡಲಿದೆ ಎಂದು ಉಮೇಶ್ ಜಾಧವ್ ಮಾಹಿತಿ ನೀಡಿದ್ದಾರೆ.
ಈ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುವಿಕೆಯಿಂದ ನಮ್ಮ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದು ಕೇಂದ್ರ ಸರ್ಕಾರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನಮ್ಮ ನೆಚ್ಚಿನ ಪ್ರಧಾನಿಯವರಿಗೆ ನಾನು ಧನ್ಯವಾದವನ್ನು ಹೇಳಲು ಬಯಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಕಲಬುರಗಿ- ಬೆಂಗಳೂರು ಸಾಪ್ತಾಹಿಕ ರೈಲು ವಿಳಂಬ
ಬಿಸಿಲ ನಾಡು ಕಲಬುರಗಿಯಿಂದ ಬೆಂಗಳೂರಿಗೆ ನೂತನ ಸಾಪ್ತಾಹಿಕ ರೈಲಿಗೆ ಕಳೆದ ತಿಂಗಳು ಕಲಬುರಗಿ ಸಂಸದ ಉಮೇಶ ಜಾಧವ್ ಹಸಿರು ನಿಶಾನೆ ತೋರಿದ್ದರು. ಇಂದಿನಿಂದ ವಾರಕ್ಕೆ ಮೂರು ಬಾರಿ ಸೇವೆ ಸಲ್ಲಿಸಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ರೈಲು ಕಾರ್ಯಾಚರಣೆ ಆರಂಭಿಸಿಲ್ಲ.
ಈ ವಿಶೇಷ ಸಾಪ್ತಾಹಿಕ ರೈಲು (01111) ಸಂಜೆ 5.10ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 4.15ಕ್ಕೆ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪಲಿದೆ. ಈ ವಿಶೇಷ ರೈಲು ಶಹಾಬಾದ್, ವಾಡಿ, ಯಾದಗಿರಿ ಮತ್ತು ರಾಯಚೂರು ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ರೈಲ್ವೇ ಇಲಾಖೆಯು ಈ ರೈಲನ್ನು ಏಪ್ರಿಲ್ 4 ರಿಂದ ವಾರಕ್ಕೆ ಮೂರು ಬಾರಿ ಓಡಿಸಲು ಒಪ್ಪಿಕೊಂಡಿತ್ತು. ಹೊಸ ರೈಲು ಬೆಂಗಳೂರಿಗೆ ಆಗಾಗ್ಗೆ ಪ್ರಯಾಣಿಸುವ ಜನರಿಗೆ ಅನುಕೂಲಕರವಾಗಿರುತ್ತದೆ. ಜೊತೆಗೆ ಇದು ಈ ಪ್ರದೇಶದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ಉಮೇಶ್ ಜಾಧವ್ ಹೇಳಿದ್ದರು.
ಆದರೆ, "ಕೆಲ ತಾಂತ್ರಿಕ ಕಾರಣಗಳಿಂದ ದಿನಾಂಕ 05.04.2024 ರಂದು ಪ್ರಾರಂಭವಾಗಬೇಕಾಗಿದ್ದ ಬೆಂಗಳೂರು ಕಲಬುರಗಿ ಸಪ್ತಾಹಿಕ ವಿಶೇಷ ರೈಲು ಇಂದು ಹೊರಡಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಬೆಳಗ್ಗೆಯಿಂದ ಸತತ ದೆಹಲಿ ಮತ್ತು ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ಈ ವಿಶೇಷ ರೈಲು ಮುಂದಿನ ವಾರ 12.04.24ರಂದು ಮುಂಚೆ ನಿರ್ಧರಿಸಿದ ಸಮಯಕ್ಕೆ ನಡೆಯಲಿದೆ ಎಂದು ರೈಲ್ವೆ ಇಲಾಖೆಯು ಆದೇಶ ಹೊರಡಿಸಿದೆ" ಎಂದು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ ಉಮೇಶ್ ಜಾಧವ್.












Click it and Unblock the Notifications