Vande Bharat: ಈ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ದಕ್ಷಿಣ ಭಾರತದ ತಿಂಡಿಗಳನ್ನೇ ನೀಡುವಂತೆ ಒತ್ತಾಯ
ಬೆಂಗಳೂರು, ಮಾರ್ಚ್, 20: ದೇಶದಲ್ಲಿ ವಂದೇ ಭಾರತ್ ರೈಲು ಪ್ರಸಿದ್ಧಿ ಪಡೆಯುತ್ತಲೇ ಇದೆ. ಇನ್ನು ಈ ರೈಲಿಗೆ ದಕ್ಷಿಣ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ನೂ ಈ ಮಾರ್ಗದ ವಂದೇ ರೈಲಿನಲ್ಲಿ ದಕ್ಷಿಣ ಭಾರತದ ತಿಂಡಿಯನ್ನೇ ನೀಡಬೇಕು ಎಂದು ಉದ್ಯಮಿಯೊಬ್ಬರು ಆಗ್ರಹಿಸಿದ್ದಾರೆ. ಮಾಹಿತಿ ಇಲ್ಲಿದೆ ಗಮನಿಸಿ.
ವಂದೇ ಭಾರತ್ ರೈಲುಗಳಲ್ಲಿ ದಕ್ಷಿಣ ಭಾರತೀಯ ತಿಂಡಿಗಳನ್ನು ಹೆಚ್ಚು ವಿತರಣೆ ಮಾಡುವಂತೆ ಬೆಂಗಳೂರು ಮೂಲದ ಕಾಫಿ ಬ್ರಾಂಡ್ ವಿಎಸ್ ಮಣಿ ಮತ್ತು ಕೋ ಸಹ-ಸಂಸ್ಥಾಪಕ ಜಿಡಿ ಪ್ರಸಾದ್ ಆಗ್ರಹಿಸಿದ್ದಾರೆ. ದಕ್ಷಿಣ ಭಾರತದಲ್ಲಿ ವಂದೇ ಭಾರತ್ ರೈಲು ಯಶಸ್ವಿ ಆಗಿದೆ ಎಂದು ಶ್ಲಾಘಿಸಿದ ಅವರು, ರೈಲಿನಲ್ಲಿ ದಕ್ಷಿಣ ಭಾರತದ ತಿಂಡಿಗಳನ್ನು ಹೆಚ್ಚು ವಿತರಣೆ ಮಾಡುವಂತೆ ಕೋರಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟ್‌ನಲ್ಲಿ ರೈಲಿನಲ್ಲಿ ಸಿಗುವ ತಿಂಡಿಗಳ ಫೋಟೋದೊಂದಿಗೆ ಬರಹವನ್ನು ಹಂಚಿಕೊಂಡಿದ್ದಾರೆ. ಹಲ್ದಿರಾಮ್ ಕಡಲೆಕಾಯಿ ಪ್ಯಾಕೆಟ್, ಬಿಕಾಜಿ ಭುಜಿಯಾ, ಗಿರ್ನಾರ್ ಮಸಾಲಾ ಟೀ ಸೇರಿದಂತೆ ತಿಂಡಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ದಕ್ಷಿಣದಲ್ಲಿ ವಿಶ್ವ ದರ್ಜೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿರುವುದರಿಂದ ನಾವು ಸಂತಸಗೊಂಡಿದ್ದೇವೆ.
ನೀವು ನಮಗೆ ಅವಕಾಶ ನೀಡಿದರೆ ಫಿಲ್ಟರ್ ಕಾಫಿ ಮತ್ತು ದಕ್ಷಿಣ ಭಾರತೀಯ ತಿಂಡಿಗಳನ್ನು ವಿತರಣೆ ಮಾಡುವುದನ್ನು ಗೌರವಿಸುತ್ತೇವೆ. ಇದಕ್ಕೆ ಬೆಂಬಲ ಕೋರುವಂತೆ ವಿನಂತಿಸಿರುವ ಉದ್ಯಮಿ ಪ್ರಸಾದ್, ಪ್ರಧಾನಿ ಕಚೇರಿ (ಪಿಎಂಒ), ರೈಲ್ವೆ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು 2022ರಲ್ಲಿ ಚೆನ್ನೈ, ಮೈಸೂರು ಮತ್ತು ಬೆಂಗಳೂರು ನಡುವೆ ಪ್ರಾರಂಭಿಸಲಾಯಿತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಇತ್ತೀಚೆಗಷ್ಟೇ ಎರಡನೇ ಚೆನ್ನೈ, ಮೈಸೂರು-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಏಪ್ರಿಲ್‌ನಿಂದ ಈ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ.












Click it and Unblock the Notifications