Vande Bharat: ಶೀಘ್ರದಲ್ಲೇ ಬೆಂಗಳೂರಿನಿಂದ ಈ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭ-ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 14: ಐಷಾರಾಮಿ ವಂದೇ ಭಾರತ್ ರೈಲು ದೇಶದ ಬಹುತೇಕ ಭಾಗಗಳಲ್ಲಿ ಸಂಚರಿಸುತ್ತಿದೆ. ಇದೀಗ ತಿರುಚ್ಚಿಯಿಂದ ಬೆಂಗಳೂರಿಗೆ ಹಗಲು ಹೊತ್ತಿನ ರೈಲಿಗಾಗಿ ಕಾಯಬೇಕಾಗಿತ್ತು. ಈ ಸಮಸ್ಯೆಯನ್ನು ಸರಿದೂಗಿಸಲು ದಕ್ಷಿಣ ರೈಲ್ವೆ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ಹಾಗಾದರೆ ಈ ಮಾರ್ಗದಲ್ಲಿ ರೈಲು ಸೇವೆ ಯಾವಾಗ ಆರಂಭವಾಗಲಿದೆ ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ
ತಿರುಚ್ಚಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ರೈಲ್ವೆ ಸಚಿವಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಹಗಲಿನ ವೇಳೆಯಲ್ಲೂ ಸಂಚರಿಸುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಇತ್ತೀಚೆಗೆ ದಕ್ಷಿಣ ರೈಲ್ವೆ ಆಯೋಜಿಸಿದ್ದ ಸಭೆಯಲ್ಲಿ ತಿರುಚ್ಚಿ ವಿಭಾಗದ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಂಸದರು ತಿರುಚ್ಚಿ ಮತ್ತು ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಈ ಹಿಂದೆ ತಿರುಚ್ಚಿ ಮತ್ತು ಬೆಂಗಳೂರು ನಡುವೆ ಹಗಲಿನ ವೇಳೆ ವಂದೇ ಭಾರತ್ ರೈಲನ್ನು ಪರಿಚಯಿಸಲು ದಕ್ಷಿಣ ರೈಲ್ವೆ ಪ್ರಧಾನ ಕಚೇರಿಗೆ ಮನವಿ ಮಾಡಿತ್ತು.
ಇದೀಗ ಈ ಬೇಡಿಕೆಯನ್ನು ಒಪ್ಪಿಕೊಂಡು ಹಗಲು ಹೊತ್ತಿನ ಹೈಸ್ಪೀಡ್ ರೈಲು ಓಡಿಸಿದರೆ ತಿರುಚ್ಚಿ ಮಾತ್ರವಲ್ಲದೆ ತಂಜೂರು, ಕರೂರು, ಪೆರಂಬಲೂರು, ಅರಿಯಲೂರು, ತಿರುವಾರೂರು, ಪುದುಕೊಟ್ಟೈ ಸೇರಿದಂತೆ ಇಲ್ಲಿನ ಹಲವು ಪ್ರದೇಶದ ಜನರಿಗೂ ಹೆಚ್ಚು ಅನುಕೂಲ ಆಗಲಿದೆ. ಹಾಗೆಯೇ ಚೆನ್ನೈ-ಹೈದರಾಬಾದ್ ಮತ್ತು ಚೆನ್ನೈ-ನಾಗರಕೋಯಿಲ್ ನಡುವೆ ವಂದೇ ಭಾರತ್ ರೈಲು ಓಡಿಸಬೇಕೆಂಬ ಬೇಡಿಕೆಯೂ ಬಂದಿದೆ.
ತಮಿಳುನಾಡಿನಲ್ಲಿ ವಂದೇ ಭಾರತ್ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ, ಮಧುರೈ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಆದರೆ ಈ ಸೇವೆಯನ್ನು ಯಾವಾಗ ಪ್ರಾರಂಭಿಸಲಾಗುವುದು ಎಂದು ದಕ್ಷಿಣ ರೈಲ್ವೆ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.












Click it and Unblock the Notifications