Vande Bharat; ಬೆಂಗಳೂರು-ಕಲಬುರಗಿ ರೈಲು ದರಪಟ್ಟಿ
ಬೆಂಗಳೂರು, ಮಾರ್ಚ್ 19: ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ. ಬೆಂಗಳೂರು-ಕಲಬುರಗಿ ನಡುವಿನ ರೈಲು ಸಂಚಾರ ಮಾರ್ಚ್ 15ರಿಂದ ಆರಂಭವಾಗಿದೆ. ಈಗ ರೈಲಿನ ದರಪಟ್ಟಿ ಬಿಡುಗಡೆಯಾಗಿದೆ.
ಬೆಂಗಳೂರು ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಈ ಮೂಲಕ ರಾಜಧಾನಿ ಮತ್ತು ಕಲ್ಯಾಣ ಕರ್ನಾಟಕ ನಡುವೆ ವಂದೇ ಭಾರತ್ ಸಂಪರ್ಕ ಕಲ್ಪಿಸಲಿದೆ.

ರೈಲು ನಂಬರ್ 22232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ಮಾರ್ಚ್ 15ರಿಂದ, ರೈಲು ನಂಬರ್ 22231 ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಮಾರ್ಚ್ 16ರಿಂದ ಸಂಚಾರವನ್ನು ಆರಂಭಿಸಿದೆ. 8 ಬೋಗಿಯ ರೈಲು ವಾರದಲ್ಲಿ 6 ದಿನಗಳ ಕಾಲ ಸಂಚಾರ ನಡೆಸಲಿದೆ.
ದರಪಟ್ಟಿ ಮಾಹಿತಿ: ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವಿನ ವಂದೇ ಭಾರತ್ ರೈಲು ದರಪಟ್ಟಿ ಈಗ ಲಭ್ಯವಾಗಿದೆ. ರೈಲು ನಂಬರ್ ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಂದೇ ಭಾರತ್ ದರ ಪಟ್ಟಿ ಹೀಗಿದೆ.
ಕಲಬುರಗಿ-ರಾಯಚೂರು ಚೇರ್ ಕಾರ್ without food 520, with food 555. ಎಕ್ಸಿಕ್ಯುಟಿವ್ ಚೇರ್ ಕಾರ್ without food 1005, With food 1055 ರೂ.ಗಳು.
ಕಲಬುರಗಿ-ಮಂತ್ರಾಲಯ ಚೇರ್ ಕಾರ್ without food 570, with food 605. ಎಕ್ಸಿಕ್ಯುಟಿವ್ ಚೇರ್ ಕಾರ್ without food 1,105, with food 1,185 ರೂ.ಗಳು.
ಕಲಬುರಗಿ-ಗುಂತಕಲ್ ಚೇರ್ ಕಾರ್ without food 756, with food 895 ರೂ.. ಎಕ್ಸಿಕ್ಯುಟಿವ್ ಚೇರ್ ಕಾರ್ without food 1455, with food 1590 ರೂ.ಗಳು.
ಕಲಬುರಗಿ-ಯಲಹಂಕ ಚೇರ್ ಕಾರ್ without food 1186, with food 1510. ಎಕ್ಸಿಕ್ಯುಟಿವ್ ಚೇರ್ ಕಾರ್ without food 2,336, with food 2710 ರೂ.ಗಳು.
ಕಲಬುರಗಿ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ without food 1,216, with food 1,540. ಎಕ್ಸಿಕ್ಯುಟಿವ್ ಚೇರ್ ಕಾರ್ without food 2,386, with food 2,765 ರೂ.ಗಳು.
ರೈಲು ಸಂಖ್ಯೆ 222232 ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ. ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ಚೇರ್ ಕಾರ್ without food 1,216, with food 1,501. ಎಕ್ಸಿಕ್ಯುಟಿವ್ ಚೇರ್ ಕಾರ್ without food 2,386, with food 2,765 ರೂ.ಗಳು.
ಯಲಹಂಕ-ಕಲಬುರಗಿ ಚೇರ್ ಕಾರ್ without food 1,186, with food 1,435. ಎಕ್ಸಿಕ್ಯುಟಿವ್ ಚೇರ್ ಕಾರ್ without food 2,336, with food 2,710 ರೂ.ಗಳು.
ಗುಂತಕಲ್-ಕಲಬುರಗಿ ಚೇರ್ ಕಾರ್ without food 756, with food 895. ಎಕ್ಸಿಕ್ಯುಟಿವ್ ಚೇರ್ ಕಾರ್ without food 1,455, with food 1,590 ರೂ.ಗಳು.
ಮಂತ್ರಾಲಯ-ಕಲಬುರಗಿ ಚೇರ್ ಕಾರ್ without food 591, with food 780. ಎಕ್ಸಿಕ್ಯುಟಿವ್ ಚೇರ್ ಕಾರ್ without food 1,126, with food 1,335 ರೂ.ಗಳು.
Fare details of 22231/2 #Kalaburagi-SMV #Bengaluru #Vandebharatexpress train@DrmSolapur @drmsbc @drmgtl @SWRRLY @Central_Railway @SCRailwayIndia @RailMinIndia @UmeshJadhav_BJP @AshwiniVaishnaw pic.twitter.com/1P57pjkYiI
— Kalyana-Karnataka Railway Development (@rlyhydka) March 19, 2024
ರಾಯಚೂರು-ಕಲಬುರಗಿ ಚೇರ್ ಕಾರ್ without food 541, with food 725. ಎಕ್ಸಿಕ್ಯುಟಿವ್ ಚೇರ್ ಕಾರ್ without food 1,026, with food 1,235 ರೂ.ಗಳು.












Click it and Unblock the Notifications