ರೈಲು ಪ್ರಯಾಣಿಕರೇ ಗಮನಿಸಿ: ಈ ಭಾಗದ 10 ರೈಲುಗಳ ಸಮಯ ಬದಲಾವಣೆ
ಬೆಂಗಳೂರು, ಮಾರ್ಚ್ 18: ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಯು ತಮ್ಮ ಪ್ರಯಾಣಿಕರ ಅಗತ್ಯತೆ, ಅವಶ್ಯಕತೆಗಳಿಗೆ ಅನುಗುಣವಾಗಿ ಕಡಿಮೆ ದರದಲ್ಲಿ ಐಶಾರಾಮಿ, ಆಧುನಿಕ ರೈಲು ಸೇವೆ ನೀಡುತ್ತಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಒದಗಿಸುತ್ತಿದೆ. ಇದರ ಭಾಗವಾಗಿ ಕೆಲವೆಡೆ ಮಾರ್ಗ ನವೀಕರಣ ಕಾರ್ಯ ಕೈಗೆತ್ತಿಕೊಂಡ ಪರಿಣಾಮ 10 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ
ಭಾರತಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express train) ಅತ್ಯಂತ ವೇಗದ ಮತ್ತು ಆಧುನಿಕ ಸೇವೆ ಸಹಿತ ಉತ್ತಮ ಪ್ರಯಾಣದ ಅನುಭವ ನೀಡುತ್ತಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ವೇಳಾಪಟ್ಟಿಯನ್ನು ಬದಲಾಗಿದೆ ಎಂದು ಆಗ್ನೇಯ ರೈಲ್ವೆ ತಿಳಿಸಿದೆ.

ಆಗ್ನೇಯ ರೈಲ್ವೆ ವ್ಯಾಪ್ತಿಯ ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 10 ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿವೆ. ಈ ಕುರಿತು ಅಪ್ಡೇಟ್ ಮಾಹಿತಿ ಇಲ್ಲಿದೆ.
ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್: ವೇಳೆ ಬದಲು
ಆಗ್ನೇಯ ರೈಲ್ವೆಯು ತನ್ನ ಕಾರ್ಯಾಚರಣೆಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ 10 ರೈಲುಗಳ ಸಮಯವನ್ನು ಬದಲಾಯಿಸಿದೆ. ಇದರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (20898) ರೈಲು ಇದ್ದು, ಇದು ರಾಂಚಿಯಿಂದ ಹೌರಾಕ್ಕೆ ಟಾಟಾ ನಗರದ ಮೂಲಕ ಸಾಗಲಿದೆ.
ಹೊಸ ಸಮಯದ ಮಾಹಿತಿ
ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ (20898) ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಹಿಂದೆ ಬೆಳಗ್ಗೆ 8:40 ಬದಲಾಗಿ ಬೆಳಗ್ಗೆ ಟಾಟಾ ನಗರ ನಿಲ್ದಾಣಕ್ಕೆ ಬರಲಿದೆ. ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ (20898) ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ 'ಟಾಟಾ ನಗರ' ನಿಲ್ದಾಣದಲ್ಲಿ ಐದು ನಿಮಿಷಗಳ ಕಾಲ ನಿಲ್ಲಿದೆ.
ರಾಂಚಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ನ ಹೊಸ ವ್ಯವಸ್ಥೆಯು ಇಂದು ಮಾರ್ಚ್ 18 ರಿಂದ ಜಾರಿಗೆ ಬರಲಿದೆ. ಹೊಸ ಸಮಯದ ಪ್ರಕಾರವೇ ಈ ರೈಲು ಚಲಿಸಲಿದೆ.

ಇತರ ರೈಲುಗಳ ಸಮಯ ಬದಲಾವಣೆ ವಿವರ
* ಬರ್ಕಾಕಾನಾ-ಟಾಟಾ ಪ್ಯಾಸೆಂಜರ್ (08152) ರೈಲು ಬೆಳಗ್ಗೆ 10.20 ಗಂಟೆಗೆ ಬದಲಾಗಿ ಬೆಳಗ್ಗೆ 10:35 ಕ್ಕೆ 'ಟಾಟಾ ನಗರ' ನಿಲ್ದಾಣ ಆಗಮಿಸಲಿದೆ.
* ಜಮ್ಮು ತಾವಿ-ಟಾಟಾ ಎಕ್ಸ್‌ಪ್ರೆಸ್ (18102 ) ರೈಲು ಬೆಳಗ್ಗೆ 9.50ರ ಬದಲಾಗಿ ಬೆಳಗ್ಗೆ 10.20ಕ್ಕೆ ನಿಗದಿತ ಗಮ್ಯ ಸ್ಥಳ ತಲುಪಲಿದೆ.
* ಅಹಮದಾಬಾದ್-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12833) ಬದಲಾದ ಸಮಯದಲ್ಲಿ ಬೆಳಗ್ಗೆ 9.23 ಅಲ್ಲದೇ 9.28 ಬಂದು ಸೇರಲಿದೆ.
* ಹಟಿಯಾ-ಟಾಟಾ ಎಕ್ಸ್‌ಪ್ರೆಸ್ (18602) ರೈಲು ಬೆಳಗ್ಗೆ 10.30 ಬದಲಿಗೆ 10.55ಕ್ಕೆ ಗಮ್ಯಸ್ಥಳಕ್ಕೆ ಬರಲಿದೆ.
* ಯಶವಂತಪುರ-ಟಾಟಾ ಎಕ್ಸ್‌ಪ್ರೆಸ್ (18112) ರೈಲಿನ ಹಾಲಿ ಸಮಯ ಬೆಳಗ್ಗೆ 10.50 ಬದಲಾಗಿ 11.20 ಕ್ಕೆ ಆಗಮಿಸಲಿದೆ ಎಂದು ಆಗ್ನೇಯ ರೈಲು ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕ ಕೌಶಿಕ್ ಮುಖರ್ಜಿ ಆದೇಶ ಹೊರಡಿಸಿದ್ದಾರೆ.
ಹೋಳಿ: ವಿಶೇಷ ರೈಲು ಸಂಚಾರ
ನೈರುತ್ಯ ರೈಲ್ವೆ ವಲಯ ಸೇರಿದಂತೆ ದೇಶಾದ್ಯಂತ ನೂರಾರು ರೈಲುಗಳು ಹೋಲಿ ಹಬ್ಬದ ಪ್ರಯುಕ್ತ ಸಂಚರಿಸಲಿವೆ. ಈ ವೇಳೆ ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಒಟ್ಟು 03 ವಿಶೇಷ ರೈಲುಗಳು ವಿವಿಧೆಡೆಗೆ ಸಂಚರಿಸಲಿವೆ ಎಂದು ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲುಗಳು ಒಂದು ಟ್ರಿಪ್‌ಗಳನ್ನು ಮಾತ್ರ ಆಯಾ ನಿಗದಿತ ರೈಲು ನಿಲ್ದಾಣಗಳಿಂದ ಗಮ್ಯಸ್ಥಳಕ್ಕೆ ತೆರಳಲಿವೆ. ಹೆಚ್ಚಿನ ಮಾಹಿತಿಗೆ ಹಾಗೂ ಟಿಕೆಟ್ ಬುಕ್ಕಿಂಗ್ ಗಾಗಿ ಪ್ರಯಾಣಿಕರು ಐಆರ್‌ಸಿಟಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications