Vande Bharat Express: ಬೇಸಿಗೆಯಲ್ಲಿ ಈ ಹೊಸ ಮಾರ್ಗದಲ್ಲಿ ವಿಶೇಷ ವಂದೇ ಭಾರತ್ ರೈಲು ಸಂಚಾರ, ಸಮಯ, ದಿನಾಂಕಗಳ ಮಾಹಿತಿ ತಿಳಿಯಿರಿ

Vande Bharat Express Train: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಸಂಚರಿಸುತ್ತಿದೆ. ಅದರಲ್ಲೂ ಇದೀಹ ಬೇಸಿಗೆ ರಜೆ ಹಿನ್ನೆಲೆ ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ವಂದೇ ಭಾರತ್‌ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ಈ ರೈಲು ಯಾವ ಮಾರ್ಗದಲ್ಲಿ ಯಾವಾಗಿನಿಂದ ಸಂಚರಿಸಲಿದೆ ಮತ್ತು ಸಮಯಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೇಸಿಗೆ ಕಾಲ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರುಗಳಿಗೆ ತುಂಬಾ ಜನರು ತುದಿಗಾಲಲ್ಲಿ ನಿಂತಿರುತ್ತಾರೆ. ಆದ್ದರಿಂದ ಈ ವೇಳೆ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ, ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಇಲಾಖೆ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡಿಸಲು ನಿರ್ಧರಿಸಿದೆ.

Vande Bharat Express Special train on this new route during summer know timings date details

ಈ ವಿಶೇಷ ರೈಲು ಏಪ್ರಿಲ್‌ನಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಚೆನ್ನೈ ಎಗ್ಮೋರ್‌ನಿಂದ ನಾಗರ್‌ಕೋಯಿಲ್ ಸೆಕ್ಟರ್‌ಗೆ ಸಂಚಾರ ಮಾಡಲಿದೆ. ರೈಲು ಸಂಖ್ಯೆ 06057 ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ವೀಕ್ಲಿ ಸ್ಪೆಷಲ್ ರೈಲು ಚೆನ್ನೈ ಎಗ್ಮೋರ್‌ನಿಂದ ಬೆಳಗ್ಗೆ 5.15ಕ್ಕೆ ಹೊರಡಲಿದ್ದು, ಮಧ್ಯಾಹ್ನ 2:10ಕ್ಕೆ ನಾಗರ್‌ಕೋಯಿಲ್ ತಲುಪಲಿದೆ ಎಂದು ತಿಳಿಸಿದೆ.

ಇನ್ನು ರೈಲು ಸಂಖ್ಯೆ 06058 ನಾಗರ್‌ಕೋಯಿಲ್-ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ನಾಗರ್‌ಕೋಯಿಲ್‌ನಿಂದ ಅದೇ ದಿನ ಮಧ್ಯಾಹ್ನ 2:50ಕ್ಕೆ ಹೊರಟು, ರಾತ್ರಿ 11:45ಕ್ಕೆ ಚೆನ್ನೈ ಎಗ್ಮೋರ್‌ಗೆ ಹಿಂದಿರುಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.

ಇನ್ನು ಈ ವಿಶೇಷ ವಂದೇ ಭಾರತ್ ರೈಲನ್ನು ಏಪ್ರಿಲ್ ತಿಂಗಳಲ್ಲಿ ಓಡಿಸಲಾಗುವುದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಈ ರೈಲು ಏಪ್ರಿಲ್ 5, 6, 7, 12, 13, 14, 19, 20, 21, 26, 27 ಮತ್ತು 28ರಂದು ಎರಡೂ ಕಡೆಯಿಂದ ಕಾರ್ಯನಿರ್ವಹಿಸಲಿದೆ. ಚೆನ್ನೈ ಎಗ್ಮೋರ್‌ನಿಂದ ನಾಗರ್‌ಕೋಯಿಲ್ ಸೆಕ್ಟರ್‌ಗೆ ಹೋಗುವ ಈ ವಂದೇ ಭಾರತ್ ವಿಶೇಷ ರೈಲುಗಳು ಅನೇಕ ಕಡೆ ನಿಲುಗಡೆ ಆಗಲಿವೆ.

ತಾಂಬರಂ, ವಿಲ್ಲುಪುರಂ, ತಿರುಚ್ಚಿ, ದಿಂಡಿಗಲ್, ಮಧುರೈ, ವಿರುದುನಗರ ಮತ್ತು ತಿರುನೆಲ್ವೇಲಿಯಲ್ಲಿ ಈ ರೈಲು ನಿಲುಗಡೆಯಾಗಲಿದೆ. ಆದರೂ ನಂತರ ಅಗತ್ಯ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಪರಿಗಣಿಸಿ ಮತ್ತಷ್ಟು ರೈಲು ಸೇವೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಬುಲೆಟ್ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂತು?: ಮುಂಬೈ-ಅಹಮದಾಬಾದ್-ಸಾಬರಮತಿ ನಡುವೆ ದೇಶದ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿಯು ವೇಗವಾಗಿ ನಡೆಯುತ್ತಿದೆ. ಈ ಹಿನ್ನೆಲೆ ಅಹಮದಾಬಾದ್ ಮತ್ತು ಸಾಬರಮತಿ ನಡುವಿನ ರೈಲು ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮುಂಬೈ-ಅಹಮದಾಬಾದ್-ಸಾಬರಮತಿ ನಡುವೆ ದೇಶದ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದು ವಿಭಾಗೀಯ ರೈಲ್ವೆ ವಕ್ತಾರರು, ಅಹಮದಾಬಾದ್ ಮತ್ತು ಸಾಬರಮತಿ ನಡುವೆ ಸಾಬರಮತಿ ನದಿಗೆ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿಯು ಈಗ ವೇಗವನ್ನು ಪಡೆದುಕೊಂಡಿದೆ.

ಈ ಸಂಬಂಧ ಅಹಮದಾಬಾದ್ ಮತ್ತು ಸಾಬರಮತಿ ನಡುವಿನ ರೈಲು ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಈ ಕಾರಣದಿಂದಾಗಿ ರೈಲು ಸಂಖ್ಯೆ 19309/19310 ಗಾಂಧಿನಗರ ಕ್ಯಾಪಿಟಲ್-ಇಂದೋರ್ ಶಾಂತಿ ಎಕ್ಸ್‌ಪ್ರೆಸ್ ರೈಲು ಗಾಂಧಿನಗರ ಮತ್ತು ಅಹಮದಾಬಾದ್ ನಡುವೆ ಭಾಗಶಃ ರದ್ದುಗೊಳ್ಳಲಿದೆ ಮತ್ತು ರೈಲು ಸಂಖ್ಯೆ 09276/09275 ಗಾಂಧಿನಗರ ಕ್ಯಾಪಿಟಲ್-ಆನಂದ್ ಮೆಮು ವಿಶೇಷ ರೈಲು ಸಂಪೂರ್ಣವಾಗಿ ರದ್ದಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+