ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಎಂಟೆಕ್ ವಿದ್ಯಾರ್ಥಿ ನಾಪತ್ತೆ, ಐಎಸ್‌ಐಎಸ್ ಸೇರಿರುವ ಶಂಕೆ

By ವಿಕಾಸ್ ನಂಜಪ್ಪ
|
Google Oneindia Kannada News

ತಿರುವನಂತಪುರ, ಸೆಪ್ಟೆಂಬರ್ 22 : ಎಂಟೆಕ್ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಯುವಕ ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಐಟಿ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದ ನಜೀಬ್ (23) ಆಗಸ್ಟ್ 15ರಿಂದ ನಾಪತ್ತೆಯಾಗಿದ್ದಾನೆ. ನಜೀಬ್ ಪೋಷಕರು ಪೊಲೀಸರಿಗೆ ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ, ಈಗ ತಮ್ಮ ಪುತ್ರ ಐಎಸ್‌ಐಎಸ್ ಸೇರಿದ್ದಾನೆ ಎಂದು ಹೇಳುತ್ತಿದ್ದಾರೆ.

ಲಂಡನ್ ಮೆಟ್ರೋ ಸ್ಫೋಟದ ಹೊಣೆ ಹೊತ್ತುಕೊಂಡ ISISಲಂಡನ್ ಮೆಟ್ರೋ ಸ್ಫೋಟದ ಹೊಣೆ ಹೊತ್ತುಕೊಂಡ ISIS

Kerala youth who went missing may have joined ISIS

'ನಾನು ನನ್ನ ಗುರಿ ತಲುಪಿದ್ದೇನೆ, ಐಎಸ್‌ಐಎಸ್ ಸೇರಿದ್ದೇನೆ' ಎಂದು ನಜೀಬ್ ತಾಯಿಯ ಮೊಬೈಲ್‌ಗೆ ಎಸ್‌ಎಂಎಸ್ ಕಳಿಸಿದ್ದಾನೆ. ಮನೆಗೆ ವಾಪಸ್ ಬರುವಂತೆ ತಾಯಿ ಮಾಡಿದ ಮನವಿಗೆ ಅವನು ಸ್ಪಂದಿಸಿಲ್ಲ. ವಾಪಸ್ ಬರದಿದ್ದರೆ ಕುಟುಂಬದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಾಯಿ ಹೇಳಿದ್ದಾರೆ.

ಐಸಿಸ್ ನೊಂದಿಗೆ ನಂಟುಹೊಂದಿದ್ದ ಕೇರಳದ ಯುವಕ ಬಂಧನಐಸಿಸ್ ನೊಂದಿಗೆ ನಂಟುಹೊಂದಿದ್ದ ಕೇರಳದ ಯುವಕ ಬಂಧನ

ಕೇರಳದಿಂದ ನಜೀಬ್ ಹೈದರಾಬಾದ್‌ಗೆ ತೆರಳಿದ್ದು, ಅಲ್ಲಿಂದ ದುಬೈಗೆ ಹೋಗಿರುವ ಸಾಧ್ಯತೆ ಇದೆ ಎಂಬುದು ಪೊಲೀಸರು ತನಿಖೆಯಿಂದ ತಿಳಿದುಬಂದಿದೆ. ಇರಾನ್‌ಗೆ ಒಂದು ತಿಂಗಳ ಪ್ರವಾಸಿ ವೀಸಾ ಪಡೆದು ಆತ ತೆರಳಿದ್ದಾನೆ ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಕೇರಳ ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಸಾವುಕೇರಳ ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಸಾವು

ಮನೆಗೆ ವಾಪಸ್ ಬರುವಂತೆ ನಜೀಬ್‌ಗೆ ತಾಯಿ ಹಲವು ಬಾರಿ ಮನವಿ ಮಾಡಿದ್ದು, ಆತ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ನಜೀಬ್ ನಿಜವಾಗಿಯೂ ಐಎಸ್‌ಐಎಸ್ ಸೇರಿದ್ದಾನೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
The Kerala police who are investigating a missing complaint have learnt that the man in questioning may have joined the Islamic State. 23 year old Najeeb, an MTech student at VIT Vellore went missing on August 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X