ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನಗಳ ಮಾಲೀಕರು ಈಗಾಗಲೇ ಹಲವು ಸವಾಲುಗಳನ್ನ ಎದುರಿಸಿದ್ದಾರೆ. ಅಲ್ಲದೆ ಸರ್ಕಾರದ ಹೊಸ ನಿಯಮದ ಅನುಸಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಪರದಾಡಿದ್ದರು. ಹೀಗೆ ವಾಹನ ಮಾಲೀಕರ ಕಷ್ಟ ನೋಡಲು ಆಗದೆ ಸರ್ಕಾರ ಕೂಡ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದ ಕೊನೇ ದಿನಾಂಕ ಮುಂದೂಡಿಕೆ ಮಾಡಿ ಮೇ 31ರ ಡೆಡ್‌ಲೈನ್ ನೀಡಿದೆ. ಹೀಗಿದ್ದಾಗ ವಾಹನಗಳ ಮಾಲೀಕರು ಅಪ್ಪಿತಪ್ಪಿ ಕೂಡ ಈ ತಪ್ಪು ಮಾಡಬೇಡಿ!
ಅಷ್ಟಕ್ಕೂ ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಂದರೆ ಎಚ್‌ಎಸ್‌ಆರ್‌ಪಿ ನೋಂದಣಿಗಾಗಿ ಕಳೆದ ಫೆಬ್ರವರಿ 17ರ ಡೆಡ್‌ಲೈನ್ ನೀಡಲಾಗಿತ್ತು. ಅದಕ್ಕೂ ಮೊದಲು 2023ರ ನವೆಂಬರ್ ಹೊತ್ತಿಗೆ ಡೆಡ್‌ಲೈನ್ ನೀಡಿ ವಿಸ್ತರಣೆ ಮಾಡಲಾಗಿತ್ತು. ಹೀಗಾಗಿ ಎದ್ದೂ ಬಿದ್ದು ವಾಹನ ಸವಾರರು ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಮುಂದಾಗಿದ್ದರು. ಆದ್ರೆ ಈ ಸಮಯದಲ್ಲಿ ಉಂಟಾಗಿದ್ದ ಸಮಸ್ಯೆ ಕಾರಣಕ್ಕೆ ಮೇ 31ಕ್ಕೆ ಡೆಡ್‌ಲೈನ್ ನೀಡಲಾಗಿದೆ. ಹೀಗಿದ್ದಾಗ ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಲು ಮತ್ತೆ ಮೋಸಗಾರರು ಅಲರ್ಟ್ ಆಗಿದ್ದಾರೆ.

ಅಧಿಕೃತ ವೆಬ್‌ಸೈಟ್ ಮೂಲಕ ನೋಂದಣಿ
ಕರ್ನಾಟಕ ಸರ್ಕಾರದ ಸೂಚನೆ ಪ್ರಕಾರ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಹಾಗೂ ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿರುವ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಸ್ವಲ್ಪ ಎಡವಟ್ಟಾದರೂ ಜೇಬು ಖಾಲಿ!
ಆದ್ರೆ ಈಗ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ವಿಚಾರದಲ್ಲಿ ಸುಳ್ಳು ಕರೆಗಳನ್ನ ಮಾಡಿ, ವಾಹನ ಮಾಲೀಕರಿಗೆ ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿಯೇ ನೀವು ಈ ತಪ್ಪು ಮಾಡಬೇಡಿ. ಅಕಸ್ಮಾತ್ ನೀವು ಈ ತಪ್ಪು ಮಾಡಿದ್ದೇ ಆದರೆ, ನಿಮ್ಮನ್ನು ನಂಬಿಸಿ ವಂಚಕರು ಮೋಸ ಮಾಡುತ್ತಾರೆ. ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿ ಇರುವ ಹಣ ಎಗರಿಸಿ, ನಿಮ್ಮ ಜೇಬು ಖಾಲಿ ಮಾಡುತ್ತಾರೆ. ಹೀಗಾಗಿ ಅಧಿಕೃತ ವೆಬ್‌ಸೈಟ್ ಮೂಲಕವೇ, ನಿಮ್ಮ ನಂಬರ್ ಪ್ಲೇಟ್ ಬದಲಾವಣೆಗೆ ಮುಂದಾಗಿ. ಅನಗತ್ಯ ಕರೆಗಳು ಬಂದರೆ ಅದಕ್ಕೆಲ್ಲಾ ಉತ್ತರ ಕೊಡಬೇಡಿ.
ಎಚ್ಚರ.. ಎಚ್ಚರ.. ಈ ತಪ್ಪು ಮಾಡಬೇಡಿ!
ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ವಿಚಾರಕ್ಕೆ ಯಾರಾದರೂ ಕಾಲ್ ಮಾಡಿ, ಬ್ಯಾಂಕ್ ಅಕೌಂಟ್ ನಂಬರ್ ಕೇಳುವುದು. ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲ ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅವರಿಗೆ ಯಾವುದೇ ಮಾಹಿತಿ ಕೊಡಬೇಡಿ. ಹಾಗೇ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಅಂದ್ರೆ ಒನ್ ಟೈಂ ಪಾಸ್‌ವರ್ಡ್ ಕೊಡಲು ಹೋಗಲೇಬೇಡಿ. ಹೀಗೆಲ್ಲಾ ನೀವು ಅಲರ್ಟ್ ಆಗಿದ್ದರೆ ನಿಮಗೆ ಸುರಕ್ಷತೆ ಇರಲಿದೆ. ಇಲ್ಲ ಅಂದರೆ ನಿಮಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಲರ್ಟ್ ಆಗಿ ನಿಮ್ಮ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳಿ.












Click it and Unblock the Notifications