ಲಂಡನ್ ಮೆಟ್ರೋ ಸ್ಫೋಟದ ಹೊಣೆ ಹೊತ್ತುಕೊಂಡ ISIS

Posted By:
Subscribe to Oneindia Kannada

ಲಂಡನ್, ಸೆಪ್ಟೆಂಬರ್ 16: ಶುಕ್ರವಾರ ಬೆಳಗ್ಗೆ ಲಂಡನ್ ನ ಮೆಟ್ರೋ ರೈಲು ಮಾರ್ಗದ ಗ್ರೀನ್ ನಿಲ್ದಾಣದಲ್ಲಿ ನಡೆದ ಸ್ಫೋಟದ ರೂವಾರಿ ತಾನೇ ಎಂದು ಐಎಸ್ಐಎಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ.

ನೈರುತ್ಯ ಲಂಡನಿನ ಪಾರ್ಸನ್ಸ್ ಗ್ರೀನ್ ಸುರಂಗ ನಿಲ್ದಾಣದಲ್ಲಿ ಈ ಸ್ಫೋಟ ಉಂಟಾಗಿ, ಅದರಲ್ಲಿ 22 ಮಂದಿ ಗಾಯಗೊಂಡಿದ್ದರು. ಈ ಗ್ರೀನ್ ಮೆಟ್ರೋ ನಿಲ್ದಾಣವು ಲಂಡನ್ ನ ಪ್ರತಿಷ್ಠಿತ ಪ್ರದೇಶವಾದ ವಿಂಬಲ್ಡನ್ ಪಕ್ಕದಲ್ಲೇ ಇದೆ.

ISIS Claims Responsibility For The London Metro Attack

ಈ ಸ್ಫೋಟವನ್ನು ತಾನು ಜನರನ್ನು ಹಿಂಸಿಸುವ ಉದ್ದೇಶದಿಂದಲೇ ಮಾಡಿದ್ದಾಗಿ ಐಎಸ್ಐಎಸ್ ಹೇಳಿದೆ ಎಂದು ರಾಯ್ಟರ್ ವರದಿ ಮಾಡಿದೆ. ಅಲ್ಲದೆ, ಯೂರೋಪ್ ದೇಶದ ಮೇಲೆ ಕತ್ತಿ ಮಸೆಯುವ ತನ್ನ ದ್ವೇಷವನ್ನು ತಾನು ಮುಂದುವರಿಸುವುದಾಗಿ ಐಎಸ್ಐಎಸ್ ನ ಭಯೋತ್ಪಾದಕ ಪಂಗಡದ ಮುಖ್ಯಸ್ಥ ಸಾದಿಕ್ ಖಾನ್ ಎಂಬಾತ ಈ ಲಂಡನ್ ಸ್ಫೋಟದ ಘಟನೆಯಲ್ಲಿ ಉಲ್ಲೇಖಿಸಿ ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

''ಇದು ಕೇವಲ ಸ್ಯಾಂಪಲ್ ಅಷ್ಟೇ. ಲಂಡನ್ ನಗರಕ್ಕೆ ಎಷ್ಟೇ ಪೊಲೀಸ್ ಬಿಗಿಭದ್ರತೆ ಒದಗಿಸಲಿ, ನಾವು ಲಂಡನ್ ತುಂಬೆಲ್ಲಾ ಸ್ಫೋಟಗಳನ್ನು ನಡೆಸುತ್ತೇವೆ. ಕೇವಲ ಮೆಟ್ರೋನಂತರ ಸಾರಿಗೆ ವ್ಯವಸ್ಥೆ ಮೇಲೆ ಮಾತ್ರ ನಾವು ಗುರಿಯಿಟ್ಟಿಲ್ಲ. ಇಡೀ ಲಂಡನ್ ನಗರದ ನಾಶವನ್ನೇ ನಾವು ಎದುರು ನೋಡುತ್ತಿದ್ದೇವೆ ಎಂದು ಖಾನ್ ಹೇಳಿದ್ದಾನೆ'' ಎಂದು ವರದಿಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ISIS claimed responsibility for the London metro attack. An explosion on a London tube's Parsons Green Station is being investigated by the police. The blast took place which is very close to Wimbeldon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ