Get Updates
Get notified of breaking news, exclusive insights, and must-see stories!

ಕೇರಳದಲ್ಲೂ ಖಾತೆ ತೆರೆಯಲ್ಲ ಬಿಜೆಪಿ: ಈ ಬಾರಿಯೂ ಮೋದಿ ಅಲೆ ಸೊನ್ನೆ ಎಂದ ಸಮೀಕ್ಷೆ- ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ದಕ್ಷಿಣ ಭಾರತದಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದೆ. ಕರ್ನಾಟಕ ಹೊರತುಪಡಿಸಿದರೆ ಬಿಜೆಪಿಗೆ ದಕ್ಷಿಣದ ರಾಜ್ಯಗಳು ಮಣೆ ಹಾಕಿಲ್ಲ, ಆದರೂ ಬಿಜೆಪಿ ಮಾತ್ರ ತನ್ನ ಪ್ರಯತ್ನ ಬಿಟ್ಟಿಲ್ಲ.

ಕೇರಳ, ತಮಿಳುನಾಡಿನಲ್ಲಂತೂ ಬಿಜೆಪಿಗೆ ನೆಲೆ ಇಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡಿನ ಮೇಲೆ ವಿಶೇಷ ಒಲವು ಕಡಿಮೆಯಾಗಿಲ್ಲ. ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವ ಬಿಜೆಪಿ ಒಂದು ಸ್ಥಾನವನ್ನಾದರೂ ಗೆಲ್ಲುವ ಯೋಜನೆಯಲ್ಲಿದೆ.

No Modi Mania in Kerala for Lok Sabha Polls BJP Won t Win Single Seat Reveals Lok Poll survey

ಕೇರಳದಲ್ಲಿ ಈ ಬಾರಿ ಕೂಡ ಮೋದಿ ಅಲೆ ಕೆಲಸ ಮಾಡುವುದಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ರಾಜೀವ್ ಚಂದ್ರಶೇಖರ್ ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರೂ, ಅವರು ಗೆಲ್ಲುವುದು ಕನಸಿನ ಮಾತಾಗಿದೆ ಎನ್ನುವ ಸೂಚನೆಗಳನ್ನು ಚುನಾವಣಾ ಪೂರ್ವ ಸಮೀಕ್ಷೆ ನೀಡಿದೆ.

ಕೇರಳದಲ್ಲಿ ಗೆಲುವು ಯಾರಿಗೆ?

ಲೋಕ್‌ ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಈ ಬಾರಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಪ್ರಾಬಲ್ಯ ಮೆರೆಯಲಿದೆ. ಲೋಕಸಭಾ ಚುನಾವಣೆ 2024ರಲ್ಲಿ ಯುಡಿಎಫ್ 18-20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ. ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್‌) 00-02 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

1350 ಜನರನ್ನು ಸಮೀಕ್ಷೆ ಮಾಡಲಾಗಿದ್ದು, ಅದರ ಆಧಾರದ ಮೇಲೆ ಫಲಿತಾಂಶ ನೀಡಲಾಗಿದೆ. ಯುಡಿಎಫ್ ಮೇಲೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತದಾರರು ವಿಶೇಷ ಒಲವು ಹೊಂದಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಕ್ರಿಶ್ಚಿಯನ್ ಸಮುದಾಯದ ಮತ ಸೆಳೆಯಲು ಬಿಜೆಪಿ ಈ ಮೊದಲು ಪ್ರಯತ್ನ ಮಾಡಿತ್ತಾದರೂ, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಅದಕ್ಕೆ ಅಡ್ಡಿಯಾಗಿದೆ. ಕ್ರಿಶ್ಚಿಯನ್ ಮತದಾರರು ಈ ಬಾರಿ ಕಾಂಗ್ರೆಸ್‌ ಕಡೆ ಹೆಚ್ಚಿನ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರ ಬರುವ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಆತಂಕವಿದೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಮುಸ್ಲಿಮರು ಈ ಬಾರಿ ರಾಜ್ಯದಲ್ಲಿ ಯುಡಿಎಫ್‌ಗೆ ಜೈ ಅಂದಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.

ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತಎಣಿಕೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+