EPFO 3.0: ಪಿಎಫ್‌ ಹಣ ತೆಗೆಯೋದು ಸುಲಭ, ಆದರೆ ತೆರಿಗೆ ಅನ್ವಯಿಸುತ್ತಾ? ವಿವರ ಇಲ್ಲಿದೆ

EPFO 3.0: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಗಳನ್ನು ಇನ್ನಷ್ಟು ಡಿಜಿಟಲ್ ಮತ್ತು ವೇಗವಾಗಿ ಮಾಡಲು EPFO 3.0 ಎಂಬ ಹೊಸ ವ್ಯವಸ್ಥೆಯನ್ನು ತರಲು ಸಿದ್ಧವಾಗಿದೆ. ಈ ವ್ಯವಸ್ಥೆ ಜಾರಿಯಾದರೆ ಪಿಎಫ್‌ ಹಣ ಪಡೆಯಲು ಕಚೇರಿಗಳ ಸುತ್ತ ಸುತ್ತುವ ಅವಶ್ಯಕತೆ ಕಡಿಮೆಯಾಗಲಿದೆ. ಯುಪಿಐ ಮತ್ತು ಯುಪಿಐ -ಸಕ್ರಿಯ ಎಟಿಎಂಗಳ ಮೂಲಕ ನೇರವಾಗಿ ಪಿಎಫ್‌ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಆದರೆ ಹಲವರ ಪ್ರಶ್ನೆ ಏನೆಂದರೆ ಪಿಎಫ್‌ ಹಣ ತೆಗೆದರೆ ತೆರಿಗೆ ಕಟ್ಟಬೇಕಾ ಅಂತ. ಇದಕ್ಕೆ ಉತ್ತರ ತಿಳಿಯುವ ಮೊದಲು EPFO 3.0 ಏನು ಎಂಬುದನ್ನು ನೋಡೋಣ.

ಇಪಿಎಫ್‌ಒ 3.0 ಅಂದರೆ ಏನು?

ಇಪಿಎಫ್‌ಒ 3.0 ಎಂಬುದು ಇಪಿಎಫ್‌ಒ ಸಂಸ್ಥೆಯ ಹೊಸ ಡಿಜಿಟಲ್ ಅಪ್‌ಗ್ರೇಡ್ ಯೋಜನೆ. ಇದರ ಮೂಲಕ ಪಿಎಫ್‌ ಹಣವನ್ನು ಕಾಗದಪತ್ರಗಳಿಲ್ಲದೆ ಪಡೆಯಬಹುದು. ಉದ್ಯೋಗದಾತರ (Employer) ಅನುಮೋದನೆಗಾಗಿ ಕಾಯಬೇಕಾಗಿಲ್ಲ. ಯುಪಿಐ ಅಥವಾ ಯುಪಿಐ ಆಧಾರಿತ ಎಟಿಎಂ ಮೂಲಕ ಹಣ ಪಡೆಯಬಹುದು. ಪಿಎಫ್‌ ವರ್ಗಾವಣೆ ಮತ್ತು ವಿತ್‌ಡ್ರಾ ಪ್ರಕ್ರಿಯೆ ವೇಗವಾಗುತ್ತದೆ. ಸರ್ಕಾರ ಈಗಾಗಲೇ ಈ ವ್ಯವಸ್ಥೆಯ ಪರೀಕ್ಷೆ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಸೇವೆ ಆರಂಭವಾಗುವ ನಿರೀಕ್ಷೆಯಿದೆ.

EPFO 3 0 Update Know PF Withdrawal Rules Tax Benefits and New Digital Features Explained

ಪಿಎಫ್‌ ಖಾತೆಯಿಂದ ಎಷ್ಟು ಹಣ ತೆಗೆಯಬಹುದು?

* ಇಪಿಎಫ್‌ಒ 3.0 ಅಡಿಯಲ್ಲಿ ಕೆಲವು ಮಿತಿಗಳು ಇರಲಿವೆ. 1. 50% ರಿಂದ 75% ವರೆಗೆ ಹಣ ತೆಗೆಯಬಹುದು. ಸಾಮಾನ್ಯವಾಗಿ ನಿಮ್ಮ ಒಟ್ಟು ಪಿಎಫ್‌ ಮೊತ್ತದ 50% ರಿಂದ 75% ವರೆಗೆ ವಿತ್‌ಡ್ರಾ ಮಾಡಲು ಅವಕಾಶ ಸಿಗಬಹುದು.

* 2. 25% ಹಣ ಖಾತೆಯಲ್ಲಿ ಉಳಿಯಬೇಕು. ನಿಮ್ಮ ಪಿಎಫ್‌ ಖಾತೆಯಲ್ಲಿ ಕನಿಷ್ಠ 25% ಮೊತ್ತ ಕಡ್ಡಾಯವಾಗಿ ಉಳಿಯಬೇಕು. ಸಂಪೂರ್ಣ ಹಣವನ್ನು ಒಮ್ಮೆಗೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

* ₹5 ಲಕ್ಷದವರೆಗೆ ಆಟೋ-ಸೆಟಲ್‌ಮೆಂಟ್. ಹಿಂದೆ ₹1 ಲಕ್ಷದವರೆಗೆ ಮಾತ್ರ ಸ್ವಯಂ ಅನುಮೋದನೆ (Auto Settlement) ಸಿಗುತ್ತಿತ್ತು. ಈಗ ಅದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಈ ಸೌಲಭ್ಯವನ್ನು ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮದುವೆ, ಮನೆ ಖರೀದಿ ಅಥವಾ ನಿರ್ಮಾಣ ಇತ್ಯಾದಿ ಅಗತ್ಯಗಳಿಗೆ ಬಳಸಬಹುದು. ಹಲವಾರು ಪ್ರಕರಣಗಳಲ್ಲಿ ಮೂರು ದಿನಗಳೊಳಗೆ ಹಣ ಸಿಗುವ ಸಾಧ್ಯತೆ ಇದೆ. ಹಾಗಾದ್ರೆ ಪಿಎಫ್‌ ಹಣ ತೆಗೆಯುವಾಗ ತೆರಿಗೆ ಹೇಗೆ ಅನ್ವಯಿಸುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇಪಿಎಫ್‌ಒ 3.0 ಬಂದರೂ ತೆರಿಗೆ ನಿಯಮಗಳಲ್ಲಿ ಬದಲಾವಣೆ ಇಲ್ಲ. 5 ವರ್ಷಗಳ ನಂತರ ಹಣ ತೆಗೆದರೆ ತೆರಿಗೆ ಇಲ್ಲ. ನೀವು ನಿರಂತರವಾಗಿ 5 ವರ್ಷಗಳ ಸೇವೆ ಪೂರ್ಣಗೊಳಿಸಿ ಪಿಎಫ್‌ ಹಣ ತೆಗೆದುಕೊಂಡರೆ ಸಾಮಾನ್ಯವಾಗಿ ಆ ಹಣ ತೆರಿಗೆ ಮುಕ್ತ (Tax Free) ಆಗಿರುತ್ತದೆ.

5 ವರ್ಷಗಳ ಸೇವೆ ಪೂರ್ಣಗೊಳ್ಳುವ ಮೊದಲು ಪಿಎಫ್‌ ಹಣ ತೆಗೆದುಕೊಂಡರೆ ಕೆಲವು ಸಂದರ್ಭಗಳಲ್ಲಿ ತೆರಿಗೆ ಅನ್ವಯಿಸಬಹುದು. ₹50,000 ಕ್ಕಿಂತ ಹೆಚ್ಚು ಮೊತ್ತ ವಿತ್‌ಡ್ರಾ ಮಾಡಿದರೆ ಟಿಡಿಎಸ್‌ ಕಡಿತವಾಗಬಹುದು. ನಂತರ ನಿಮ್ಮ ಆದಾಯ ತೆರಿಗೆ ರಿಟರ್ನ್‌ನಲ್ಲಿ ಅದರ ಲೆಕ್ಕ ನೀಡಬೇಕಾಗುತ್ತದೆ.

ಯಾವಾಗ ತೆರಿಗೆ ಕಟ್ಟಬೇಕಾಗುವುದಿಲ್ಲ?

ಉದ್ಯೋಗಿಯ ನಿಯಂತ್ರಣದ ಹೊರಗಿನ ಕಾರಣಗಳಿಂದ ಕೆಲಸ ಕಳೆದುಕೊಂಡಿದ್ದರೆ ತೆರಿಗೆ ವಿನಾಯಿತಿ ಸಿಗಬಹುದು. ಉದಾಹರಣೆಗೆ ಆರೋಗ್ಯ ಸಮಸ್ಯೆ, ಕಂಪನಿ ಮುಚ್ಚುವುದು, ಉದ್ಯಮ ಸ್ಥಗಿತಗೊಳ್ಳುವುದು, ಉದ್ಯೋಗಿಯ ನಿಯಂತ್ರಣಕ್ಕೆ ಮೀರಿದ ಇತರ ಕಾರಣಗಳು.

2021ರ ಏಪ್ರಿಲ್ 1 ನಂತರದಿಂದ ಒಂದು ಹಣಕಾಸು ವರ್ಷದಲ್ಲಿ ಉದ್ಯೋಗಿಯ ಪಿಎಫ್‌ ಕೊಡುಗೆ ₹2.5 ಲಕ್ಷ ಮೀರಿದರೆ, ಆ ಹೆಚ್ಚುವರಿ ಮೊತ್ತದ ಮೇಲೆ ಬಂದ ಬಡ್ಡಿಗೆ ತೆರಿಗೆ ಅನ್ವಯಿಸುತ್ತದೆ. ಇದು 5 ವರ್ಷದ ನಿಯಮದಿಂದ ಪ್ರತ್ಯೇಕವಾಗಿದೆ.

NPSಗೆ ವರ್ಗಾಯಿಸಿದರೆ?

ನಿಮ್ಮ ಸಂಪೂರ್ಣ ಪಿಎಫ್‌ ಮೊತ್ತವನ್ನು ʼರಾಷ್ಟ್ರೀಯ ಪಿಂಚಣಿ ಯೋಜನೆ (NPS)ʼಗೆ ವರ್ಗಾಯಿಸಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCD ಅಡಿಯಲ್ಲಿ ಅದನ್ನು ತೆರಿಗೆ ವಿನಾಯಿತಿ ಹೊಂದಿದ ವರ್ಗಾವಣೆ ಎಂದು ಪರಿಗಣಿಸಲಾಗುತ್ತದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್‌ ಮಾಂಡವೀಯ ಅವರ ಪ್ರಕಾರ, ಈ ಸೇವೆಯ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಆದರೆ ಅಧಿಕೃತ ಆರಂಭದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ಪ್ರಸ್ತುತ ಇಪಿಎಫ್‌ಒ ಸುಮಾರು ₹28 ಲಕ್ಷ ಕೋಟಿ ಮೊತ್ತದ ನಿಧಿಯನ್ನು ನಿರ್ವಹಿಸುತ್ತಿದೆ. ಸುರಕ್ಷತೆ, ಸ್ಥಿರ ಆದಾಯ ಮತ್ತು ಅನೇಕ ಸಂದರ್ಭಗಳಲ್ಲಿ ತೆರಿಗೆ ವಿನಾಯಿತಿ ಸಿಗುವ ಕಾರಣದಿಂದ ಕೋಟ್ಯಂತರ ಉದ್ಯೋಗಿಗಳು ಇಪಿಎಫ್‌ ಯೋಜನೆಯನ್ನು ನಂಬುತ್ತಿದ್ದಾರೆ.

ಇಪಿಎಫ್‌ಒ 3.0 ಜಾರಿಯಾದರೆ ಪಿಎಫ್‌ ಹಣ ಪಡೆಯುವುದು ಎಟಿಎಂನಿಂದ ಹಣ ತೆಗೆಯುವಷ್ಟು ಸುಲಭವಾಗಬಹುದು. ಆದರೆ ಹಣ ಪಡೆಯುವ ವಿಧಾನ ಬದಲಾಗುತ್ತಿದೆಯೇ ಹೊರತು, ತೆರಿಗೆ ನಿಯಮಗಳು ಬದಲಾಗುತ್ತಿಲ್ಲ. ಆದ್ದರಿಂದ ಪಿಎಫ್‌ ಹಣ ತೆಗೆಯುವ ಮೊದಲು 5 ವರ್ಷದ ಸೇವಾ ನಿಯಮ, ಟಿಡಿಎಸ್‌ ಮತ್ತು ಬಡ್ಡಿಯ ಮೇಲಿನ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಬರಹ: ಭವಾನಿ ಭಟ್

EPFO 3.0 ಎಂದರೇನು ಮತ್ತು ಅದು ಯಾವ ಬದಲಾವಣೆಯನ್ನು ತರುತ್ತಿದೆ?
ಉದ್ಯೋಗಿಗಳ ಭವಿಷ್ಯ ನಿಧಿ ಸೇವೆಗಳನ್ನು ಸರಳಗೊಳಿಸಲು EPFO 3.0 ಎಂಬ ಹೊಸ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇದರಲ್ಲಿ ಸಂಪೂರ್ಣ ಸಾಫ್ಟ್‌ವೇರ್ ಮತ್ತು ಡೇಟಾಬೇಸ್ ಮೇಲ್ದರ್ಜೀಕರಣವೂ ಸೇರಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+