Bengaluru: ಬೆಂಗಳೂರಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ; ಈಗ ಆಸ್ತಿದಾರರಿಗೆ ಶಾಕ್ ಕೊಡಲು ಜಿಬಿಎ ಸಿದ್ಧತೆ

Bengaluru: ಬೆಂಗಳೂರು ನಗರದಲ್ಲಿ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನಲ್ಲಿ ಬೀದಿಬದಿ ಒತ್ತುವರಿ ಮಾಡಿಕೊಂಡಿರುವವರ ತೆರವು ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಆದರೆ ಇದರ ಮುಂದುವರಿದ ಭಾಗವಾಗಿ ಆಸ್ತಿದಾರರಿಗೂ ಬಿಸಿ ಮುಟ್ಟುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರಿಗೂ ಶಾಕ್ ಕೊಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವ ಆಸ್ತಿದಾರರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ನಗರಕೆರೆ ಜಗದೀಶ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ಇದೀಗ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಮೂರು ನಾಲ್ಕು ಅಂತಸ್ತಿನ ಮನೆ ಕಟ್ಟಿ, ಬಾಡಿಗೆಗೆ ಮನೆ ಕೊಡುವ ಆಸ್ತಿ ಮಾಲೀಕರು, ಪಾರ್ಕಿಂಗ್‌ಗೆ ಜಾಗವನ್ನೇ ಬಿಡದೆ ತಮ್ಮ ಕಾರು ಬೈಕ್‌ಗಳನ್ನು ರಸ್ತೆಗೆ ನಿಲ್ಲಿಸುವುದಲ್ಲದೆ, ಬಾಡಿಗೆ ಕೊಟ್ಟ ಮನೆಯವರ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಜನರ ಓಡಾಟಕ್ಕೆ ತೊಂದರೆ ಮಾಡ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳನ್ನ ತೆರವು ಮಾಡುವ ರೀತಿಯಲ್ಲಿ, ಈ ವಾಹನಗಳನ್ನು ಒಂದನ್ನೂ ಬಿಡದಹಾಗೆ ತೆರವು ಮಾಡ್ಬೇಕಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.

Bengaluru

ಮುಂದುವರಿದು ಬೀದಿ ಬದಿ ವ್ಯಾಪಾರಿಗಳಿಗೊಂದು ನ್ಯಾಯ, ಪಾರ್ಕಿಂಗ್‌ಗೆ ಜಾಗಬಿಡದೆ ಜನರ ಓಡಾಟಕ್ಕೆ ತೊಂದರೆ ಮಾಡೋ ಮನೆ ಮಾಲೀಕರಿಗೆ, ಟೆನೆಂಟ್‌ಗೊಂದು ನ್ಯಾಯ ಅಂದ್ರೆ ಹೇಗೆ. ಮನೆ ಕಟಿದ್ಮೇಲೆ, ಆ ಮನೆಗೆ ಬರುವವರ ವಾಹನಗಳಿಗೂ ಪಾರ್ಕಿಂಗ್ ವ್ಯವಸ್ಥೆ ಯನ್ನು ಕಲ್ಪಿಸಬೇಕೆಂಬ ಕಾನೂನು ಕೂಡ ಇದೆ ಅಲ್ವಾ? ಎಂದಿದ್ದಾರೆ. ಇದಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಸುದರ್ಶನ್ ಎಂ ದೊಡ್ಡತೋಟ ಎನ್ನುವವರು, ಇದು 200% ನಿಜ. ದಯವಿಟ್ಟು ನೆಲಮಾಳಿಗೆಯ ಪಾರ್ಕಿಂಗ್ ಅನ್ನು ಒಳಗೊಂಡ ವಾಣಿಜ್ಯ ಕಟ್ಟಡಗಳನ್ನು ಅಂಗಡಿಗಳ ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದ್ದಾರೆ.

ಚಿಟ್ಟಂಪಲ್ಲಿ ಮುಕುಂದನ್ ಎನ್ನುವವರು ಕಾರು ಹೊಂದಿರುವವರು ಮತ್ತು ಆಸ್ತಿ ಇರುವ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ತೋರಿಸದವರಿಗೆ ಜಿಬಿಎಗೆ ಪಾರ್ಕಿಂಗ್ ಶುಲ್ಕ ತೆರಿಗೆ ವಿಧಿಸಬೇಕು. ಈ ರೀತಿ ಮಾಡುವುದರಿಂದ ಜಿಬಿಎ ಉತ್ತಮ ಆದಾಯವನ್ನು ಗಳಿಸುತ್ತದೆ. ಇದಕ್ಕಿಂತ ಹೆಚ್ಚಿನ ಪಾರ್ಕಿಂಗ್ ಮಿತಿಯನ್ನು ನಿಗದಿಪಡಿಸುವುದರಿಂದ ಯಾವುದೇ ವಾಹನ ಪಾರ್ಕಿಂಗ್‌ಗೆ ದಂಡ ವಿಧಿಸಬೇಕು. ಇದು ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ವಾಹನಗಳಿಗೆ ಅನ್ವಯಿಸಬೇಕು.

ಇದು ಹುಚ್ಚುತನದಂತೆ ಕಾಣಿಸಬಹುದು ಆದರೆ ಪ್ರಾಧಿಕಾರವು ಹಂತ ಹಂತವಾಗಿ ಕಾರ್ಯ ಗತಗೊಳಿಸಬಹುದು ಮತ್ತು ಜಿಬಿಎ ಮತ್ತು ಸಾಮಾನ್ಯ ಜನರ ಅನುಕೂಲಕ್ಕೆ ಅನುಗುಣವಾಗಿ ಮಾರ್ಪಡಿಸಬಹುದು ಮತ್ತು ತಿದ್ದುಪಡಿ ಮಾಡಬಹುದು ಎಂದು ಯೋಚಿಸಲು ಪ್ರಾರಂಭಿಸಿದರೆ. ಆರಂಭದಲ್ಲಿ ಎಲ್ಲಾ ನಿಯಮಗಳು ಸಮಸ್ಯೆ ಇರುತ್ತವೆ. ಕ್ರಮೇಣ ಅದನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

30x40 ಮಲ್ಟಿಸ್ಟೋರಿಗೆ ಬೇಸ್ಮೆಂಟ್ ಕಡ್ಡಾಯ ಮಾಡಬೇಕು ಎಂದು ಕೆಲವರು ಹೇಳಿದರೆ. ಸುರೇಶ್ ಸೂರಿ ಎನ್ನುವವರು, ಸ್ವಾಮಿ ನೀವು ಕೇಳಿರೋದು ತಪ್ಪೇನಿಲ್ಲ.. ಆದರೆ ಮನೆ ಕಟ್ಟೋವಾಗ ಪರ್ಮಿಷನ್ ಕೊಡುವಂತೆ ಕಚೇರಿಗಳು ಮತ್ತು ಅಧಿಕಾರಿಗಳ ಬಳಿ ಕೇಳಿರುತ್ತೇವೆ. ಮೊದಲೇ ನೀವು ಹಾಗೆ ಹೇಳಿದ ಒಂದು ಅಂತಸ್ತಿನ ಕಟ್ಟಡಕ್ಕೆ ಒಂದು ಕಾರ್ ಎರಡು ಅಂತಸ್ತಿನ ಕಟ್ಟಡಕ್ಕೆ ಎರಡು ಕಾರ್ ನಿಲ್ಲಿಸಲು ಜಾಗ ಬಿಟ್ಟು ಮನೆ ಕಟ್ಟಬೇಕು ಅಂತಾ ರೂಲ್ಸ್ ಮಾಡಿದ್ರೆ ಯಾರೂ ಕೂಡ 3-4 ಅಂತಸ್ತು ಮನೆ ಕಟ್ಟುತ್ತಿರಲಿಲ್ಲ ಅನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+